ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ ಸಸ್ಯಗಳಿಗೆ ಹಾನಿಯಾಗುತ್ತದೆ. ನೀವು ಸಸ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಬಯಸಿದರೆ ನಿಮಗಾಗಿಯೇ ಇಲ್ಲೊಂದು ಸಿಂಪಲ್ ವಿಧಾನವನ್ನು ತಿಳಿಸಲಾಗಿದೆ. ಅದು ಕಡಲೆಕಾಯಿ ಸಿಪ್ಪೆಯಿಂದ ಆಗುವ ಪ್ರಯೋಜನದ ಬಗ್ಗೆ ಹೇಳಲಾಗಿದೆ. ಕಡಲೆಕಾಯಿಯನ್ನು ಖರೀದಿಸಿ ತಿಂದು ಅದರ ಸಿಪ್ಪೆಯನ್ನು ಬಿಸಾಡದೆ ಈ ರೀತಿ ಬಳಸಬಹುದು.(Tips)
ಇದನ್ನು ಓದಿ: ಚಳಿಗಾಲದಲ್ಲಿ ವಿಟಮಿನ್ ಡಿ ಕೊರತೆಯೇ?; ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಈ ಬದಲಾವಣೆ ಮಾಡಿ | Health Tips
ವಾಸ್ತವವಾಗಿ ಕಡಲೆಕಾಯಿ ಸಿಪ್ಪೆಗಳು ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಅಂಶಗಳನ್ನು ಹೊಂದಿರುತ್ತವೆ. ಇದು ಫೈಬರ್ ಮತ್ತು ಪ್ರೋಟೀನ್ ಅನ್ನು ಸಹ ಒಳಗೊಂಡಿದೆ. ಆದ್ದರಿಂದ ಅವುಗಳನ್ನು ಉದ್ಯಾನ ಸಸ್ಯಗಳಿಗೆ ಗೊಬ್ಬರವಾಗಿ ಬಳಸಬಹುದು. ನೀವು ವಿವಿಧ ರೀತಿಯಲ್ಲಿ ಸಸ್ಯಗಳಿಗೆ ಕಡಲೆಕಾಯಿ ಸಿಪ್ಪೆಯನ್ನು ಸೇರಿಸಬಹುದು. ಎಲ್ಲ ರೀತಿಯಿಂದಲೂ ಲಾಭ ಪಡೆಯಬಹುದು.
ಕಾಂಪೋಸ್ಟ್ ತಯಾರಿಸಲು ಅಗತ್ಯವಾದ ವಸ್ತುಗಳು
- ಕಡಲೆಕಾಯಿ ಸಿಪ್ಪೆ
- ಹಸುವಿನ ಗೊಬ್ಬರ
- ಚಹಾದ ಎಲೆಗಳು
- ನೀರು
ಕಾಂಪೋಸ್ಟ್ ತಯಾರಿಸುವ ವಿಧಾನ
ಕಡಲೆಕಾಯಿ ಸಿಪ್ಪೆಯಿಂದ ಜೈವಿಕ ಗೊಬ್ಬರ ತಯಾರಿಸುವುದು ತುಂಬಾ ಸುಲಭ. ಕಡಲೆಕಾಯಿ ಸಿಪ್ಪೆಯನ್ನು ಒಣಗಿಸಿದ ನಂತರ ನೀವು ಸಿಪ್ಪೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಈಗ ಸಿಪ್ಪೆಯ ಪುಡಿಯನ್ನು ನೀರಿಗೆ ಸೇರಿಸಿ ಮತ್ತು ಅದನ್ನು ಹುದುಗಿಸಲು 24-48 ಗಂಟೆಗಳ ಕಾಲ ಪಾತ್ರೆಯಲ್ಲಿ ಇರಿಸಿ. ಹುದುಗಿಸಿದ ಸಿಪ್ಪೆಯ ಮಿಶ್ರಣದಲ್ಲಿ ಹಸುವಿನ ಸಗಣಿ ಮತ್ತು ಚಹಾ ಎಲೆಗಳನ್ನು ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ವಾರ ಮುಚ್ಚಿಡಿ. ಈ ಮಧ್ಯೆ ಪ್ರತಿದಿನ ನೀವು ಅದನ್ನು ಮಿಶ್ರಣ ಮಾಡುತ್ತಿರಬೇಕು. ಒಂದು ವಾರದ ನಂತರ ಮಿಶ್ರಣವನ್ನು ಫಿಲ್ಟರ್ ಮಾಡಿ ಮತ್ತು ಇನ್ನೊಂದು ಪಾತ್ರೆಯಲ್ಲಿ ಇರಿಸಿ. ಅದನ್ನು ನೀರಿನಲ್ಲಿ ಬೆರೆಸಿದ ನಂತರ ಸಸಿಗಳಿಗೆ ಗೊಬ್ಬರವಾಗಿ ಬಳಸಬಹುದು.
ನೆನೆಸಿದ ಮೆಂತ್ಯ ಸೇವನೆಯಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips