

ಹೊನ್ನಾವರ: ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕನಿಗೆ ತಾಲೂಕಿನ ಪೊಲೀಸರು 500 ರೂಪಾಯಿ ದಂಡ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಉಸುಕು ಸಾಗಿಸುತ್ತಿದ್ದ ಟಿಪ್ಪರನ್ನು ತಡೆದ ಪೊಲೀಸರು, ಟಿಪ್ಪರ್ ಚಾಲಕ ಚಂದ್ರಕಾಂತನಿಂದ 500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ರಸೀದಿ ನೋಡಿದ ಚಾಲಕನಿಗೆ ಶಾಕ್ ಆಗಿದೆ. ಪೊಲೀಸರೇ ನೀಡಿರುವ ರಸೀದಿಯಲ್ಲಿ ಟಿಪ್ಪರ್ ಓಡಿಸುವ ಚಾಲಕರು ಕೂಡ ಕಡ್ಡಾಯವಾಗಿ ಹೆಲ್ಕೆಟ್ ಧರಿಸಬೇಕು ಎಂಬ ನಿಯಮ ಹಾಕಿದಂತಿದೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಈ ರಸೀದಿ ಟ್ರೋಲ್ ಆಗುತ್ತಿದೆ. ಪೊಲೀಸೊಬ್ಬರ ಎಡವಟ್ಟಿನಿಂದ ಇಲಾಖೆಯ ಕುರಿತು ಜನರು ಅಪಹಾಸ್ಯ ಮಾಡುವಂತಾಗಿದೆ.