

ಬೆಂಗಳೂರು: ಗಿರೀಶ್ ಕುಮಾರ್ ನಿರ್ದೇಶನದ ತಿಲಕ್ ಶೇಖರ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ‘ಗ್ಯಾಂಗ್‌ಸ್ಟರ್ ಅಲ್ಲ ಪ್ರಾಂಕ್‌ಸ್ಟರ್’. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಸಚಿವ ಎಚ್.ಸಿ.ಮಹದೇವಪ್ಪ, ನಿರ್ದೇಶಕ ಎಸ್.ನಾರಾಯಣ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು. ನಿರ್ದೇಶನದ ಜತೆಗೆ ಪ್ರಮುಖ ಪಾತ್ರ ಮಾಡುತ್ತಿರುವ ಗಿರೀಶ್, ‘ಇದು ನನ್ನ ಮೂರನೇ ಸಿನಿಮಾ. ಯೂಟ್ಯೂಬರ್ ಒಬ್ಬನ ಕಥೆ. ಪ್ರಾಂಕ್‌ಸ್ಟರ್ ಪಾತ್ರ ಮಾಡುತ್ತಿದ್ದೇನೆ’ ಎಂದರು. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ತಿಲಕ್ ಬಣ್ಣ ಹಚ್ಚಿದ್ದಾರೆ. ಇವರ ಜತೆಗೆ ವಿರಾನಿಕ ಶೆಟ್ಟಿ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
ಬಾಲ ರಾಜವಾಡಿ, ಗಿರೀಶ್ ಬಿಜ್ಜಳ, ಹೊನ್ನವಳ್ಳಿ ಕೃಷ್ಣ, ಸಂಗೀತ, ಸುಂದರ್ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ಜಾನ್ ಕೆನಡಿ ಸಂಗೀತ, ಅಜಯ್ ಛಾಯಾಗ್ರಹಣ ಹಾಗೂ ರತೀಶ್ ಸಂಕಲನವಿರಲಿದೆ.