ಯುವಕನನ್ನು ಬೆದರಿಸಲು ಗ್ಯಾಂಗ್​ ಕಟ್ಕೊಂಡು 450 ಕಿ.ಮೀ ಪ್ರಯಾಣಿಸಿದ ಟಿಕ್​ಟಾಕ್​ ಸ್ಟಾರ್​ಗೆ ಕಾದಿತ್ತು ಬಿಗ್​ ಶಾಕ್​!

Kirthi Patel 1
Published on

ನವದೆಹಲಿ: ಸೂರತ್​ ಮೂಲದ ಟಿಕ್​ಟಾಕ್​ ಸ್ಟಾರ್​ ಒಬ್ಬಳು ಸಾಮಾಜಿಕ ಜಾಲತಾಣದಲ್ಲಿ ತನ್ನೊಂದಿಗೆ ವಾಗ್ವಾದಕ್ಕೆ ಇಳಿದಿದ್ದ ಯುವಕನಿಗೆ ಬೆದರಿಕೆ ಹಾಕಲು ಫ್ರೆಂಡ್ಸ್​ ಜೊತೆ ಸುಮಾರು 450 ಕಿ.ಮೀ ಪ್ರಯಾಣ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಬೆದರಿಕೆ ಹಾಕಲು ಹೋದ ಟಿಕ್​ಟಾಕ್​ ಸ್ಟಾರ್​ಗೆ ಪೊಲೀಸರು ಶಾಕ್​ ನೀಡಿದ್ದು, ಆಕೆಯನ್ನು ಮತ್ತು ಅವಳೊಂದಿಗೆ ಬಂದಿದ್ದ ಸ್ನೇಹಿತರನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದು, ತದನಂತರದಲ್ಲಿ ಜಾಮೀನನ ಮೇಲೆ ಬಿಡುಗಡೆ ಮಾಡಿದ್ದಾರೆ.

ಬಂಧಿತ ಟಿಕ್​ಟಾಕ್​​ ಸ್ಟಾರ್​ ಅನ್ನು ಕೀರ್ತಿ ಪಟೇಲ್​ ಎಂದು ಗುರುತಿಸಲಾಗಿದೆ. ಕೀರ್ತಿ ಜೊತೆಗೆ ಬಂದಿದ್ದ ಆಕೆಯ 9 ಮಂದಿ ಸ್ನೇಹಿತರನ್ನು ಬಂಧಿಸಲಾಗಿತ್ತು. ಅಪರಾಧ ಎಸಗುವ ಸಮಾನ ಉದ್ದೇಶದೊಂದಿಗೆ ಕಾನೂನುಬಾಹಿರವಾಗಿ ಗುಂಪು ಸೇರಿ, ಅವಮಾನಿಸುವ ಮತ್ತು ಪ್ರಚೋದಿಸುವ ಹಾಗೂ ಕ್ರಿಮಿನಲ್ ಬೆದರಿಕೆಗೆ ಯತ್ನಿಸಿದ ಆರೋಪದ ಮೇಲೆ ಎಲ್ಲರನ್ನು ಬಂಧಿಸಲಾಗಿತ್ತು. ಆದರೆ, ಎಲ್ಲ ಆರೋಪಿಗಳನ್ನು ಜಾಮೀನಿನ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ಕೀರ್ತಿ ಮತ್ತು ಆಕೆಯ ಸಹಚರರು ಜಮಾ ಭಯಾನಿಗೆ ಬೆದರಿಕೆ ಹಾಕಲು 450 ಕಿ.ಮೀ ದೂರು ಬಂದಿದ್ದರು ಎಂದು ಅಧಿಕಾರಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ತನಗೆ ಥಳಿಸುವುದಾಗಿ ಬೆದರಿಕೆ ಹಾಕಿದ್ದಳು. ಹೀಗಾಗಿ ಸೂರತ್‌ನಿಂದ ಭೇಸನ್‌ವರೆಗೆ ಆ ಉದ್ದೇಶಕ್ಕಾಗಿಯೇ ಬಂದಿದ್ದಾಳೆ ಎಂದು ಜಮನ್ ಭಯಾನಿ ಆರೋಪಿಸಿದ್ದಾರೆ.

ಕೀರ್ತಿ ವಿರುದ್ಧ ಇದೇ ಮೊದಲ ಪ್ರಕರಣವಲ್ಲ, ಈ ಹಿಂದೆ ವಸ್ತ್ರಾಪುರ ಪ್ರದೇಶದಲ್ಲಿ ಮಹಿಳೆಗೆ ಬೆದರಿಕೆ ಹಾಕಿದ್ದಕ್ಕಾಗಿ ಅಹಮದಾಬಾದ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net