More

    ಕರ್ಕಾ ಅರಣ್ಯದಲ್ಲಿ ಹುಲಿ ದರ್ಶನ

    ದಾಂಡೇಲಿ: ಕರ್ಕಾ ಅರಣ್ಯ ಚೆಕ್‌ಪೋಸ್ಟ್ ಬಳಿಯ ಹಳೇ ಡೊಂಬಾರಣಿ ದೇವಸ್ಥಾನದ ಬಳಿಯ ಅರಣ್ಯದಲ್ಲಿ ಹುಲಿ ಕಂಡುಬಂದಿದೆ. ಪ್ರವಾಸಿಗರು ರಸ್ತೆ ದಾಟುತ್ತಿದ್ದಾಗ ಹುಲಿ ದರ್ಶನ ನೀಡಿದ್ದು, ಪ್ರವಾಸಿಗರು ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ.


    ದಾಂಡೇಲಿ ಸಮೀಪದ ಕರ್ಕಾ, ಜೊಯಿಡಾ ತಾಲೂಕಿನ ಕುಂಬಾರವಾಡಾ, ಡಿಗ್ಗಿ, ಗಣೇಶಗುಡಿ, ಪನ್ಸೋಲಿಯ ಸಫಾರಿ ಜಾಗದಲ್ಲಿ ಆಗಾಗ ಹುಲಿಗಳು ಕಾಣಿಸಿಕೊಳ್ಳುತ್ತಿವೆ.


    ಕಾಳಿ ಹುಲಿ ಸಂರಕ್ಷಿತ ಪ್ರದೇಶ (ಕೆಟಿಆರ್) ಕಾರವಾರ ಸಮೀಪದ ಕದ್ರಾದಿಂದ ಗೋವಾ ಸೀಮಾ ರೇಖೆ ಬಳಿ ಇರುವ ಅನಮೋಡದವರೆಗೆ 10414 ಚದರ ಕಿಮೀ ವಿಸ್ತಾರವಾಗಿದೆ.


    ಮೈಸೂರಿನಲ್ಲಿ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದಲ್ಲಿ ಹುಲಿಗಳ ಸಂಖ್ಯೆ 3000 ದಷ್ಟಿದೆ ಎಂದು ತಿಳಿಸಿದ್ದಾರೆ. ಈ ಕಾಳಿ ಟೈಗರ್ ಸಂರಕ್ಷಣಾ ಭಾಗದಲ್ಲಿ 2020ನೇ ಸಾಲಿನಲ್ಲಿ ಮಾಡಿದ ಗಣತಿಯ ವರದಿಯಂತೆ 22 ಹುಲಿಗಳಿರುವುದು ಕಂಡುಬಂದಿದೆ.


    ಹುಲಿ ಗಣತಿ ಕಾರ್ಯಕ್ಕಾಗಿ ದಾಂಡೇಲಿಗೆ ಆಗಮಿಸಿದ ಡೆಹ್ರಾಡೂನ್ ಅಖಿಲ ಭಾರತೀಯ ವನ್ಯಜೀವಿ ಕೇಂದ್ರದ ಅಧಿಕಾರಿಗಳ ತಂಡ 2023ರಲ್ಲಿ ಕಾಳಿ ಟೈಗರ್ ಸಂರಕ್ಷಿತ ಭಾಗದಲ್ಲಿ ಕೆಲ ತಿಂಗಳ ಹಿಂದೆ ಹುಲಿ ಗಣತಿ ಮಾಡಿದೆ. ಈಗ ಹುಲಿಗಳ ಸಂಖ್ಯೆಯ ಅಂತಿಮ ವರದಿ ಬರಬೇಕಾಗಿದೆ.


    ದಾಂಡೇಲಿ ವನ್ಯ ಜೀವಿ ಭಾಗದಲ್ಲಿ ಹೆಣ್ಣು ಹುಲಿಯೊಂದು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅದನ್ನು ಕಳೆದ ಡಿಸೆಂಬರ್‌ನಲ್ಲಿ ರಕ್ಷಿಸಿ ಬಳ್ಳಾರಿಯ ಅಟಲ್ ಬಿಹಾರಿ ವಾಜಪಾಯಿ ಪ್ರಾಣಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ. 2023ರ ಗಣತಿಯ ವರದಿ ಬರಬೇಕಿದ್ದು, ಈ ಬಾರಿ ಹುಲಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹುಲಿಗಳ ನೆಚ್ಚಿನ ಆಹಾರ ಕಾಡಕೋಣ ಹಾಗೂ ಜಿಂಕೆಗಳು. ಅವುಗಳಿಗೆ ಇಷ್ಟದ ಆಹಾರ ಸಿಗದಿದ್ದಾಗ ಅರಣ್ಯ ಸಮೀಪದ ಗ್ರಾಮಗಳಿಗೆ ಬಂದು ಆಕಳು, ಕುರಿ ಇತರ ಸಾಕು ಪ್ರಾಣಿಗಳನ್ನು ಬೇಟೆಯಾಡುತ್ತವೆ. – ಇಮ್ರಾನ ಪಟೇಲ, ದಾಂಡೇಲಿ ವನ್ಯಜೀವಿ ವಿಭಾಗದ ಸಂಶೋಧನಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts