video/ ಬಾಯಲ್ಲೇ ಹಸುವನ್ನು ಎಳೆದೊಯ್ಯುತ್ತಿದೆ ಹುಲಿ! ಅಪರೂಪದ ದೃಶ್ಯ ವೈರಲ್​

Tiger-cow
Published on

ಬೆಂಗಳೂರು: ಹುಲಿಯೊಂದು ಹಸುವನ್ನು ಬೇಟೆಯಾಡಿ ಬಾಯಿ ಮೂಲಕವೇ ಎಳೆದೊಯ್ಯುತ್ತಿರುವ ಅಪರೂಪದ ದೃಶ್ಯ ವೈರಲ್​ ಆಗಿದೆ.

ತನಗಿಂತಲೂ ತೂಕ ಹೆಚ್ಚಿರುವ ಹಸುವನ್ನು ಬೇಟೆಯಾಡಿದ ಹುಲಿರಾಯ, ಅದನ್ನು ತನ್ನ ಬಾಯಿಯಲ್ಲೇ ಕಚ್ಚಿಕೊಂಡು ಎಳೆದೊಯ್ಯುತ್ತಿದೆ. ಅಬ್ಬಾ! ಹುಲಿಯ ಆ ಶಕ್ತಿಯನ್ನು ಕಂಡ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಬಹುತೇಕರು ಹಸುವಿನ ಬಗ್ಗೆಯೂ ಮರುಕ ವ್ಯಕ್ತಪಡಿಸಿದ್ದಾರೆ. ಆದರಿದು ಆಹಾರ ಸರಪಣಿ ಎಂದೂ ಕೆಲವರು ಹೇಳಿದ್ದಾರೆ.

ಅದ್ಹೇನೆ ಇರಲಿ ಹಸು ಮೇಲೆ ಹುಲಿ ದಾಳಿ, ಹಸುವಿನ ಕರುವನ್ನು ತಿಂದು ಹಾಕಿದ ಹುಲಿ... ಎಂಬೆಲ್ಲ ಸುದ್ದಿಯನ್ನು ಕೇಳುತ್ತಿದ್ದ ಜನರು ಇದೀಗ ಹಸುವನ್ನು ಹುಲಿ ಹೊತ್ತೊಯ್ಯುತ್ತಿರುವ ದೃಶ್ಯ ಕಂಡು ಬೆರಗಾಗಿದ್ದಾರೆ.

ಈ ಘಟನೆ ಕೇಂದ್ರ ಭಾರತೀಯ ಹುಲಿ ಮೀಸಲು ಪ್ರದೇಶದಲ್ಲಿ ಸಂಭವಿಸಿದೆ. ಹಸುವನ್ನು ಹುಲಿ ಎಳೆದೊಯ್ಯುತ್ತಿರುವ 14 ಸೆಕೆಂಡ್​ಗಳ​ ವಿಡಿಯೋ ತುಣುಕನ್ನು ಐಎಫ್​ಎಸ್​ ಅಧಿಕಾರಿ ಸುಸಂತ ನಂದ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸೂರ್ಯ ಕೇಸರಿ ಎಂಬುವವರು ಶೇರ್​ ಮಾಡಿದ್ದ ಈ ವಿಡಿಯೋವನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಅಪ್ಲೋಡ್​ ಮಾಡಿಕೊಂಡಿರುವ ಸುಸಂತ ನಂದ ಅವರು, ಹುಲಿಯ ಶಕ್ತಿ ವಿಸ್ಮಯಕಾರಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net