ಚಿನ್ನದ ವ್ಯಾಪಾರಿಗಳು ಹುಲಿ ಉಗುರು ಎಲ್ಲಿಂದ ತರ್ತಾರೆ? ಯಾರು ಮಾರಾಟ ಮಾಡುತ್ತಾರೆ?

tiger claw
Published on

ಬೆಂಗಳೂರು: ಹುಲಿ ಉಗುರಿನ ಲಾಕೆಟ್​ ಧರಿಸಿದ್ದರಿಂದ ಬಿಗ್‌ಬಾಸ್ ಮನೆಯಲ್ಲಿ ಹಳ್ಳಿಕಾರ್ ಸಂತೋಷ್ ಬಂಧನವಾದ ನಂತರ, ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಸೆಲೆಬ್ರೆಟಿಗಳ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗ ಸೆಲೆಬ್ರಿಟಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಡ ಹೆಚ್ಚಾದಾಗ ಅರಣ್ಯಾಧಿಕಾರಿಗಳು ಹುಲಿ ಉಗುರು ಲಾಕೆಟ್ ಧರಿಸಿದ ಸೆಲೆಬ್ರೆಟಿಗಳಿಗೆ ನೋಟಿಸ್ ಜಾರಿ ಮಾಡಿದರು. ಇದೀಗ ಅರಣ್ಯಾಧಿಕಾರಿಗಳು ಮತ್ತೊಂದು ದಾಳಿಗೆ ಪ್ಲಾನ್ ಮಾಡಿದ್ದಾರೆ.

ಹೌದು, ಈಗ ಹುಲಿ ಉಗುರಿನ ಪೆಂಡೆಂಟ್ ಮಾಡಿಕೊಡುವ ಆಭರಣ ಅಂಗಡಿಗಳ ಮಾಲೀಕರಿಗೂ ಸಂಕಷ್ಟ ಎದುರಾಗಿದೆ. ಇವರು ಗ್ರಾಹಕರಿಂದ ಆರ್ಡರ್ ಪಡೆದು ಹುಲಿ ಉಗುರು ಪೆಂಡೆಂಟ್ ಮಾಡಿಕೊಡುತ್ತಿದ್ದರು. ಆದರೆ ಇವರು ಎಲ್ಲಿಂದ ಹುಲಿ ಉಗುರು ತರುತ್ತಿದ್ದಾರೆ?, ಯಾರು ಇವರಿಗೆ ಚಿನ್ನದ ಉಗುರು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಜ್ಯುವೆಲರಿ ಶಾಪ್​ಗಳು ಮಾತ್ರವಲ್ಲ, ದೊಡ್ಡ ದೊಡ್ಡ ಶೋ ರೂಂ ಗಳ ಮೇಲೆ ದಾಳಿ ನಡೆಸಲು ಅರಣ್ಯಾಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

ಸೆಲೆಬ್ರೆಟಿಗಳ ಮನೆ ತಲಾಶ್ 

ಅರಣ್ಯಾಧಿಕಾರಿಗಳು ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ, ರಾಕ್​ಲೈನ್ ವೆಂಕಟೇಶ್, ಜಗ್ಗೇಶ್ ಅವರ ಮನೆಗಳ ಪರಿಶೀಲನೆ ನಡೆಸಿದ್ದಾರೆ. ಜಗ್ಗೇಶ್‌ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದಾಗ ಅವರು ಮನೆಯಲ್ಲಿರಲಿಲ್ಲ. ಹಾಗಾಗಿ ಅವರ ಪತ್ನಿ ಲಾಕೆಟ್ ಕೊಟ್ಟಿದ್ದರಿಂದಾಗಿ, ಮನೆಯಲ್ಲಿ ಯಾವುದೇ ತಪಾಸಣೆ ಮಾಡಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಲಯ ಸಂರಕ್ಷಣಾಧಿಕಾರಿ ರವೀಂದ್ರ, ಅದು 40 ವರ್ಷದ ಹಳೆಯದಾದ ಲಾಕೆಟ್ ಆಗಿದೆ. ಕೊಳೆತ ರೀತಿಯಲ್ಲಿ ಇರೋದ್ರಿಂದ ಡಿಎನ್​ಎ ಪರೀಕ್ಷೆಗಾಗಿ ಡೆಹ್ರಾಡೂನ್ ಲ್ಯಾಬ್​ಗೆ ಕಳಿಸ್ತೀವಿ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net