ಗೋಕರ್ಣ:ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಗುರುವಾರದ ಸಂತೆಯ ವೇಳೆ ಸಂಜೆ ಆಕಸ್ಮಿಕವಾಗಿ ಸುರಿದ ಭಾರಿ ಮಳೆ ಮತ್ತು ಸಿಡಿಲಿಗೆ (Thunder )ನಾಲ್ವರು ಆಘಾತಗೊಂಡ ಘಟನೆ ನಡೆದಿದೆ.ಮಳೆಯಿಂದ ರಕ್ಷಣೆಗಾಗಿ ಸಂತೆ ಪೇಟೆಯ ಮರದ ಅಡಿಯಲ್ಲಿ ನಿಂತಿದ್ದ ಇಲ್ಲಿನ ಬಿದ್ರಗೆರೆಯ ಪರಮೇಶ್ವರ ಗೌಡ,ರೆಸಾರ್ಟ್ ಕಟ್ಟಡ ಕೆಲಸಕ್ಕೆ ಬಂದ ಬಿಹಾರ ಮೂಲದ ಕಾರ್ಮಿಕರಾದ ಮಹಮ್ಮದ್ ಆಝಾದ್,ಆಯುಷ್‌ಕುಮಾರ ಮತ್ತು ನೂರುಲ್ಲಾ ಇವರಿಗೆ ಭಾರೀ ಸಿಡಲು ಬಡಿದು ಅಸ್ವಸ್ಥರಾದರು. ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮತ್ತು ಡಾ.ದಿವ್ಯಾ ಮತ್ತು ಸಿಬ್ಬಂದಿ ಎರಡು ಗಂಟೆಗೂ ಅಧಿಕ ಸಮಯ ಯುಕ್ತ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರುಮಾಡಿದರು.
ಇದನ್ನೂ ಓದಿ: https://www.vijayavani.net/gp-employees-strike-from-nov-27
https://www.facebook.com/share/p/18Dg9QMo1f/
GP Employees Strike ನ.27 ರಿಂದ ಗ್ರಾಪಂ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ