

ತಮಿಳುನಾಡು: ಕಳೆದ ಒಂದೆರೆಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿರುವ ಬಹುಭಾಷಾ ತಾರೆ, 'ಲಿಯೋ' ಬೆಡಗಿ ತ್ರಿಶಾ ಕೃಷ್ಣನ್, ಇದೀಗ ಮತ್ತೊಮ್ಮೆ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರುವ 'ಅನಿಮಲ್' ಸಿನಿಮಾ ವೀಕ್ಷಿಸಿದ ನಟಿ, ನಿನ್ನೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದೇ ಒಂದು ಪದದಲ್ಲಿ ಮಾಡಿದ ಚಿತ್ರ ವಿಮರ್ಶೆಗೆ ಸದ್ಯ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಪ್ಯಾನ್ ಇಂಡಿಯಾ 'ಲಿಯೋ' ಚಿತ್ರದ ಯಶಸ್ಸಿನ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ತ್ರಿಶಾ ಕೃಷ್ಣನ್, ಇತ್ತೀಚೆಗಷ್ಟೇ ನಟ ಮನ್ಸೂರ್ ಅಲಿ ಖಾನ್ ತಮ್ಮ ವಿರುದ್ಧ ನೀಡಿದ್ದ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದರು. ಮನ್ಸೂರ್ ಮಾಡಿದ ಕಮೆಂಟ್ಗಳನ್ನು ವಿರೋಧಿಸಿ, ಧ್ವನಿಎತ್ತಿದ ನಟಿಗೆ ವ್ಯಾಪಕ ಬೆಂಬಲ ದೊರೆತಿತ್ತು. ಆದ್ರೆ, ಇದೀಗ 'ಅನಿಮಲ್' ಚಿತ್ರದ ವಿಮರ್ಶೆಗಾಗಿ ತ್ರಿಶಾ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿ, ಟೀಕಿಸಿದ್ದಾರೆ.
'ಅನಿಮಲ್' ವೀಕ್ಷಿಸಿದ ತ್ರಿಶಾ, 'ದಿ ಕಲ್ಟ್' ಎಂದು ಬರೆದ ಸ್ಟೋರಿ ಪೋಸ್ಟ್ ಮಾಡಿದ್ದರು. ಈ ಒಂದು ಪೋಸ್ಟ್ ನೋಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಟಿಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆಯರ ಘನತೆ ಉದ್ದೇಶಿಸಿ ಮಾತನಾಡಿದ್ದರು. ಆದ್ರೆ, ಈಗ ಮಹಿಳೆಯರನ್ನು ನಕಾರಾತ್ಮಕವಾಗಿ ತೋರಿಸಿರುವ ಸಿನಿಮಾವನ್ನು ಶ್ಲಾಘಿಸಿರುವುದು ಎಷ್ಟು ಸರಿ ಎಂದು ವ್ಯಾಪಕವಾಗಿ ಟೀಕಿಸಿದ್ದಾರೆ.
ಇದನ್ನೂ ಓದಿ: ಕೊಳವೆಬಾವಿ ಕಾಮಗಾರಿ ಗುತ್ತಿಗೆ 431 ಕೋಟಿ ರೂ. ಹಗರಣ
ಈ ವಿಚಾರಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ತ್ರಿಶಾ ವಿರುದ್ಧ ಸಾಕಷ್ಟು ಟ್ರೋಲ್ ಮತ್ತು ಮೀಮ್ಗಳನ್ನು ಹರಿಬಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ನಟಿ, ಕೂಡಲೇ ತಾವು ಹಾಕಿದ್ದ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ,(ಏಜೆನ್ಸೀಸ್).