US: ಯುಎಸ್ ಕಾಂಗ್ರೆಸ್‌ನಲ್ಲಿ ನಡೆದ ಸಭೆಯ ಸಮಯದಲ್ಲಿ ಮೂವರು ಅಮೆರಿಕದ ಶಾಸಕರು ನಿದ್ರಿಸುತ್ತಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟೀಕೆಗೆ ಗುರಿಯಾಗಿದೆ.

ಬುಧವಾರ (ಮೇ.14) ಬೆಳಿಗ್ಗೆ ಯುಎಸ್ ಕಾಂಗ್ರೆಸ್‌ನಲ್ಲಿ ನಡೆದ ಸಭೆಯ ಸಮಯದಲ್ಲಿ ಮಿಚಿಗನ್‌ನ ಡೆಮಾಕ್ರಟಿಕ್ ಹೌಸ್ ಪ್ರತಿನಿಧಿಗಳಾದ 71 ವರ್ಷದ ಡೆಬ್ಬಿ ಡಿಂಗೆಲ್ ಮತ್ತು ಇಲಿನಾಯ್ಸ್‌ನ 80 ವರ್ಷದ ಜಾನ್ ಶಾಕೋವ್ಸ್ಕಿ ನಿದ್ರೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿನ ವೈರಲ್ ಆಗಿದೆ.
ಇದನ್ನೂ ಓದಿ: ‘ಚಿನ್ನ’ದ ಗ್ರಾಹಕರಿಗೆ ಬೇಕಿರುವುದು ಇದೇ! ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ-ಬೆಳ್ಳಿ ಬೆಲೆ | Gold Rates
ಮತ್ತೊಂದು ವಿಡಿಯೋದಲ್ಲಿ ಉತಾಹ್‌ನ ರಿಪಬ್ಲಿಕನ್ ಪ್ರತಿನಿಧಿ ಬ್ಲೇಕ್ ಮೂರ್ಗೆ ಪ್ರಶ್ನೆ ಕೇಳಿದಾಗ ಅವರು ಎಚ್ಚರವಾಗದೆ ಮತ್ತೊಬ್ಬ ಶಾಸಕರು ಅವರನ್ನು ನಿಧಾನವಾಗಿ ತಳ್ಳಿ ಎಚ್ಚರಿಸುತ್ತಿರುವುದನ್ನು ನೋಡಿ ಸುತ್ತಮುತ್ತಲಿನ ಕಾಂಗ್ರೆಸ್ ಸದಸ್ಯರು ನಕ್ಕಿದ್ದಾರೆ.
Democrat Rep. Debbie Dingell falls fast asleep during a Congressional hearing.
— Oli London (@OliLondonTV) May 14, 2025
ರಿಪಬ್ಲಿಕನ್ ಪಕ್ಷದ ಆಂತರಿಕ ಕಲಹದ ನಡುವೆಯೂ, ಭಾರಿ ತೆರಿಗೆಯನ್ನು ಒಳಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ MAGA ಮಸೂದೆಯ ಕುರಿತು ಶಾಸಕರು ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
WATCH:
Another @HouseDemocrats is asleep — this time it’s @janschakowsky https://t.co/RNw6W37YEp pic.twitter.com/mq6onS1hWm
— Matthew Foldi (@MatthewFoldi) May 14, 2025
ಡಿಂಗೆಲ್ ತನ್ನ ಸೀಟಿನಲ್ಲಿ ಗಾಢ ನಿದ್ರೆಯಲ್ಲಿ ಮುಳುಗಿದ್ದು, ಅವರ ಸುತ್ತಲೂ ಮೂರು ಬಾಟಲಿ ಪಾನೀಯಗಳು ಇರುವುದನ್ನು ಇದ್ದು ಟೀಕೆಗೆ ಗುರಿಯಾಗಿದೆ.
Aannnnnnnd another one.
Rep Blake Moore is asleep at the wheel. pic.twitter.com/ciweAjAad4
— Spitfire (@DogRightGirl) May 14, 2025
ನೆಟ್ಟಿಗರ ಪ್ರತಿಕ್ರಿಯೆ
“ಇವರು ನಿಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರು. ಯಾವುದೇ ನಾಚಿಕೆ ಇಲ್ಲ. ತೆರಿಗೆದಾರರ ಸಮಯದಲ್ಲಿ ಸ್ವಲ್ಪ ನಿದ್ದೆ ಮಾಡಿ” ಎಂದು ಬಳಕೆದಾರ ಹೇಳಿದರೆ, ಮತ್ತೊಬ್ಬ”ತಿಂಗಳಲ್ಲಿ ಎರಡು ದಿನ ಕೆಲಸ ಮಾಡುವುದು ತುಂಬಾ ಆಯಾಸಕರವಾಗಿರುತ್ತದೆ” ಎಂದು ಟೀಕಿಸಿದ್ದಾರೆ. “ಅವಳ ಪಕ್ಷ ಅಥವಾ ಲಿಂಗ ಯಾವುದೇ ಇರಲಿ – ಇದು ಮುಜುಗರದ ಸಂಗತಿ ಮತ್ತು ಅವಳು ಕ್ಷಮೆಯಾಚಿಸಬೇಕು” ಎಂದು ಡಿಂಗೆಲ್ ಅವರ ವಿಡಿಯೋಗೆ ಒಬ್ಬ ಬಳಕೆದಾರ ಹೇಳಿದ್ದಾರೆ. (ಏಜೆನ್ಸೀಸ್)