ಬಸ್​ ಸೀಟಿಗಾಗಿ ಹೊಡೆದಾಡಿಕೊಂಡ ಮೂವರು ಮಹಿಳೆಯರು

KSRTC BUS
KSRTC BUS
Published on

ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾದ ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್​ ದೊರೆತ್ತಿದ್ದು, ಬಸ್​ನಲ್ಲಿ ಪ್ರಯಾಣಿಸಲು ನೂಕುನುಗ್ಗಲು ಉಂಟಾಗುತ್ತಿದೆ.

ಯೋಜನೆಗೆ ಚಾಲನೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ಬಸ್​ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಲವೆಡೆ ಮಹಿಳೆಯರು ಬಸ್​ ಹತ್ತುವಾಗ ಡೋರ್​, ಕಿಟಕಿಯ ಸರಳುಗಳು ಕಿತ್ತುಕೊಂಡು ಬಂದಿರುವ ಫೋಟೋ ಹಾಗು ವಿಡಿಯೋವನ್ನು ನಾವು ನೋಡಿದ್ದೇವೆ. 

Fighting

ಕುಳಿತುಕೊಳ್ಳುವ ವಿಚಾರಕ್ಕೆ ಗಲಾಟೆ

ಇದೀಗ ಕಳಿತುಕೊಳ್ಳುವ ವಿಚಾರವಾಗಿ ಮೂವರು ಮಹಿಳೆಯರ ನಡುವೆ ಹೊಡೆದಾಟವಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆಯೂ ಸಿರವಾರ-ರಾಯಚೂರು ನಡುವಿನ ಮಾರ್ಗದಲ್ಲಿ ನಡೆದಿದೆ.

ಸಿರವಾರದಿಂದ-ರಾಯಚೂರಿನತ್ತ ಹೊರಟ ಬಸ್​ನಲ್ಲಿ ಕಳಿತುಕೊಳ್ಳುವ ವಿಚಾರವಾಗಿ ಇಬ್ಬರು ಮಹಿಳೆಯರ ನಡುವೆ ಮೊದಲಿಗೆ ಜಗಳ ಶುರುವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೂವರು ಮಹಿಳೆಯರು ಬಡಿದಾಡಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net