14 ದಿನದ ಹೆಣ್ಣುಮಗುವಿನ ಹೊಟ್ಟೆಯಲ್ಲಿ 3 ಭ್ರೂಣ ಪತ್ತೆ!

baby
Published on

ಉತ್ತರಪ್ರದೇಶ: ಕೇವಲ 14 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಸರ್‌ ಸುಂದರ್‌ಲಾಲ್‌ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ.

ಹೆಣ್ಣುಮಗು ಹುಟ್ಟಿದಾಗ ಎಲ್ಲರಂತೆಯೇ ಸಾಮಾನ್ಯವಾಗಿತ್ತು:

ದಿನ ಕಳೆದಂತೆ ಹೊಟ್ಟೆಯಲ್ಲಿ ಊತ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಯಿತು. ಹುಟ್ಟಿದ ಮಗು 14 ದಿನ ಕಳೆಯುವಷ್ಟರಲ್ಲಿ ಪೋಷಕರು ಕೂಡಲೇ ಸರ್‌ ಸುಂದರ್‌ಲಾಲ್‌ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ದಾಖಲಾದ ಮಗುವನ್ನು ಸ್ಕ್ಯಾನ್‌ ಮಾಡಿದಾಗ, ಅದರ ಹೊಟ್ಟೆಯಲ್ಲಿ ಮೂರು ಭ್ರೂಣ ಇರುವುದು ಪತ್ತೆಯಾಗಿದೆ. ಆಪರೇಷನ್‌ ಮೂಲಕ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣಗಳನ್ನು ತೆಗೆಯಲಾಗಿದೆ.

ಮಗು ಈಗ ಆರೋಗ್ಯದಿಂದ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ವೈದ್ಯರಾದ ರುಚಿರಾ, ಗ್ರೀಷ್ಮಾ, ಅಮೃತಾ ಹಾಗೂ ಚೇತನ್‌ ಅವರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ವೈದ್ಯರು ಹೇಳಿದ್ದೇನು?:

ಹುಟ್ಟುವ ಐದು ಲಕ್ಷ ಮಕ್ಕಳಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಕಾಡುತ್ತದೆ. ಹೆಣ್ಣುಮಗುವು ತಾಯಿಯ ಹೊಟ್ಟೆಯಲ್ಲಿಯೇ ಸಮಸ್ಯೆ ಎದುರಿಸಿದೆ. ತಾಯಿಯ ಹೊಟ್ಟೆಯಲ್ಲಿದ್ದ ಮೂರು ಭ್ರೂಣಗಳು ದಿನ ಮಗುವಿನ ಹೊಟ್ಟೆ ಸೇರಿವೆ. ಸತತ ಮೂರು ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ಕೈಗೊಂಡು ಭ್ರೂಣಗಳನ್ನು ಹೊರತೆಗೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net