Fire Accident| ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡು ಭೀಕರ ಅಗ್ನಿ ಅವಘಡ; ಟೆಂಟ್​ನಲ್ಲಿ ಮಲಗಿದ್ದ ಮೂವರು ಸಜೀವ ದಹನ

Fire engine
Published on

ನವದೆಹಲಿ: ತಾತ್ಕಾಲಿಕ ಟೆಂಟ್​ಗೆ ಬೆಂಕಿ ಹೊತ್ತಿಕೊಂಡ (Fire Accident) ಪರಿಣಾಮ ಮೂವರು ಸಜೀವದಹನವಾಗಿರುವ ಘಟನೆ ನವದೆಹಲಿಯ ಆನಂದ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಶ್ಯಾಮ್ ಸಿಂಗ್ (40), ಕಾಂತಾ ಪ್ರಸಾದ್ (37), ಜಗ್ಗಿ (30) ಎಂದು ಗುರುತಿಸಲಾಗಿದೆ. ಮೂವರು ಉತ್ತರಪ್ರದೇಶದ ಔರಿಯಾ ಮೂಲದವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Fire Accident

ಘಟನೆ ಸಂಬಂಧ ಪ್ರಕಟಣೆ ಹೊರಡಿಸಿರುವ ಅಗ್ನಿಶಾಮಕ ಇಲಾಖೆಯೂ, ಮಂಗಳವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕೂಲರ್​ ಮೇಲೆ ಇರಿಸಲಾಗಿದ್ದ ಡೀಸೆಲ್ ಸ್ಟಾಂಡ್​ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ತಿಳಿದು ಬಂದಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಟೆಂಟ್ಅನ್ನು ಆವರಿಸಿದ್ದು, ಮೂವರು ಸಜೀವ ದಹನವಾಗಿದ್ದಾರೆ.

ಆನಂದ್ ವಿಹಾರ್ ಪ್ರದೇಶದ ಮಂಗಲಂ ರಸ್ತೆಯ ಡಿಡಿಎ ಪ್ಲಾಟ್ ಬಳಿ ಇರುವ ಖಾಲಿ ಜಾಗದಲ್ಲಿ ಇವರುಗಳು ತಾತ್ಕಾಲಿಕ ಟೆಂಟ್​ಅನ್ನು ಹಾಕಿಕೊಂಡು ವಾಸಿಸುತ್ತಿದ್ದರು. ಬೆಂಕಿ ಹೊತ್ತಿಕೊಂಡಾಗ ಗ್ಯಾಸ್ ಸಿಲಿಂಡರ್ ಕೂಡ ಸ್ಫೋಟಗೊಂಡಿದ್ದು, ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆಯೂ ಪ್ರಕಟಣೆಯನ್ನು ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net