ಡಾ.ಎಂಎನ್​ಆರ್​, ರೋಹನ್​ ಮೋಂತೆರೋ, ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್​

Mng_VV
Published on

ಮಂಗಳೂರು: ಮಂಗಳೂರು ವಿಶ್ವವಿದ್ಯಾಲದ ಘಟಿಕೋತ್ಸವ ಶನಿವಾರ ನಡೆಯಲಿದ್ದು, ಮೂವರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನಿಸಲಾಗುತ್ತಿದೆ. ಸಮಾಜ ಸೇವೆ ಕ್ಷೇತ್ರದ ಸಾಧನೆಗಾಗಿ ಎಸ್​ಸಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಎಂ.ಎನ್​.ರಾಜೇಂದ್ರ ಕುಮಾರು, ರೋಹನ್​ ಸಿಟಿ ಕಾರ್ಪೊರೇಷನ್​ ಎಂಡಿ ರೋಹನ್​ ಮೊಂತೆರೋ ಹಾಗೂ ಮುಂಬೈ ಹೇರಂಬಾ ಇಂಡಸ್ಟ್ರೀಸ್​ನ ಅಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ನಾಳೆ 43ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅವರು ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಲಿದ್ದಾರೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್​.ಧರ್ಮ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net