ದಿಗ್ವಿಜಯ ನ್ಯೂಸ್​ ಆ್ಯಂಕರ್​ಗೆ ಜೀವ ಬೆದರಿಕೆ ಕರೆ: ಗೌರಿ ಮಾದರಿಯಲ್ಲಿ ಹತ್ಯೆಯ ಎಚ್ಚರಿಕೆ

Attack, DighvijayNews, DJ halli riots,
Published on

ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಬಗೆಗಿನ ಸತ್ಯಾಂಶಗಳನ್ನು ತೆರೆದಿಟ್ಟಿದ್ದಕ್ಕೆ ದಿಗ್ವಿಜಯ ನ್ಯೂಸ್​ 24X7 ವಾಹಿನಿಯ ನ್ಯೂಸ್​ ಆ್ಯಂಕರ್​ಗೆ ಜೀವ ಬೆದರಿಕೆ ಕರೆ ಬಂದಿದೆ.

ಆ್ಯಂಕರ್​​ ರಕ್ಷತ್​ ಶೆಟ್ಟಿ ಅವರಿಗೆ ವಿದೇಶದಿಂದ ಪದೇಪದೆ ಕರೆ ಬರುತ್ತಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಪತ್ರಕರ್ತೆ ಗೌರಿ ಲಂಕೇಶ್​ ಮಾದರಿಯಲ್ಲಿ ಹತ್ಯೆಗೈಯುವ ಎಚ್ಚರಿಕೆ ನೀಡಿದ್ದು, ಎಸ್​ಡಿಪಿಐ ಬಗ್ಗೆ ಮಾತನಾಡದಂತೆ ಅನಾಮಧೇಯನೊಬ್ಬ ತಾಕೀತು ಮಾಡಿದ್ದಾನೆ.

ಗೊಡ್ಡು ಬೆದರಿಕೆಗೆ ಮಣಿಯಲ್ಲ

ಇಂತಹ ಅನಾಮಧೇಯರ ಗೊಡ್ಡು ಬೆದರಿಕೆಗೆ ದಿಗ್ವಿಜಯ ನ್ಯೂಸ್​ ಎಂದಿಗೂ ಮಣಿಯುವುದಿಲ್ಲ. ಸತ್ಯಾಂಶವನ್ನು ತೆರೆದಿಡಲು ನಿಷ್ಠುರವಾದ ಸುದ್ದಿಯ ಪ್ರಸಾರ ಮಾಡುವುದನ್ನು ಎಂದಿಗೂ ಬಿಡುವುದಿಲ್ಲ. ಜನರಿಗೆ ಸತ್ಯವನ್ನು ತಿಳಿಸುವುದೇ ದಿಗ್ವಿಜಯ ವಾಹಿನಿಯ ಧ್ಯೇಯವಾಗಿದ್ದು, ಯಾವುದೇ ಕಾರಣಕ್ಕೂ ಸುದ್ದಿ ನಿಲ್ಲಿಸುವ ಮಾತೇ ಇಲ್ಲ. ಇದು ಸಮಸ್ತ ವೀಕ್ಷಕ ಪ್ರಭುಗಳಿಗೆ ದಿಗ್ವಿಜಯ ನ್ಯೂಸ್​ನ ವಾಗ್ದಾನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net