ಸಾಕ್ಷಿದಾರಗೆ ಬೆದರಿಕೆ, ಮೂರು ಮಂದಿ ವಿರುದ್ಧ ಕೇಸ್

Published on

ಕಾಸರಗೋಡು: ಕೊಲೆ ಪ್ರಕರಣವೊಂದರ ಸಾಕ್ಷಿದಾರನಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಮಂದಿ ವಿರುದ್ಧ ವಿದ್ಯಾನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಕೂಡ್ಲು ಎರಿಯಾಲ್ ನಿವಾಸಿ ಆಬಿದ್ ಕೊಲೆ ಪ್ರಕರಣದ ಸಾಕ್ಷಿದಾರ ಇಬ್ರಾಹಿಂ ಖಲೀಲ್ ಎಂಬುವವರು ನೀಡಿದ ದೂರಿನನ್ವಯ ರಫೀಕ್, ಜಲೀಲ್ ಹಾಗೂ ಮಾರ್ಕೆಟ್ ರಫೀಕ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ.

ಎರಿಯಾಲ್ ಬಳ್ಳೀರ್ ಎಂಬಲ್ಲಿ 2007 ನ.20ರಂದು ಆಬಿದ್ ಅವರನ್ನು ಬೈಕಲ್ಲಿ ಆಗಮಿಸಿದ್ದ ತಂಡ ಇರಿದು ಕೊಲೆಗೈದಿರುವ ಬಗ್ಗೆ ನಗರಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ತೃತೀಯ)ದಲ್ಲಿ ನಡೆಯುತ್ತಿದ್ದು, ಸಾಕ್ಷಿದಾರ ಇಬ್ರಾಹಿಂ ಖಲೀಲ್ ಅವರಿಂದ ಗುರುವಾರ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಹೇಳಿಕೆ ನೀಡಿ ನ್ಯಾಯಾಲಯದಿಂದ ಹೊರಬರುವ ವೇಳೆ ಮೂರು ಮಂದಿಯ ತಂಡ ಬೆದರಿಕೆಯೊಡ್ಡಿದ್ದಾಗಿ ಇಬ್ರಾಹಿಂ ಖಲೀಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net