ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ಕೇಸ್​: ಸಿಟಿ ರವಿಗೆ ಬೆದರಿಕೆ ಪತ್ರ Threat To CT Ravi

ct ravi
Published on

 ಬೆಂಗಳೂರು: ( Threat To CT Ravi )  ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಜೀವ ಬೆದರಿಕೆ ಹಾಕಿ ಅನಾಮಧೇಯ ಪತ್ರವೊಂದು ಬಂದಿದೆ. ಬಸವನಹಳ್ಳಿಯಲ್ಲಿರುವ ಸಿ.ಟಿ.ರವಿ ಅವರ ನಿವಾಸಕ್ಕೆ ಪತ್ರ ಬಂದಿದ್ದು, ಈ ಸಂಬಂಧ ಸಿ.ಟಿ.ರವಿ ಆಪ್ತ ಸಹಾಯಕ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆದರಿಕೆ ಪತ್ರದಲ್ಲಿ ಏನಿದೆ?: 

ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅವಾಚ್ಯ ಪದ ಬಳಸಿರುವ ಕಾರಣಕ್ಕೆ ರವಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಿಟಿ ರವಿ ಅವರನ್ನು ಉದ್ದೇಶಿಸಿ ಪತ್ರ ಬರೆದಿರುವ ಅಪರಿಚಿತರು.... ನಮ್ಮ ತಂಡ ಬೆಳಗಾವಿಯಿಂದ ಚಿಕ್ಕಮಗಳೂರಿಗೆ ನಿನ್ನನ್ನು ಹುಡುಕಿಕೊಂಡು ಬಂದಿದ್ದೇವೆ. ಇನ್ನು 15 ದಿನದ ಒಳಗಾಗಿ ಬೆಳಗಾವಿಯ ಅಭಿನೇತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಲನ್ನು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ನಿಮ್ಮ ಮನೆಗೆ ನುಗ್ಗಿ ಕೈ ಮತ್ತು ಕಾಲನ್ನು ಮುರಿಯುವುದು ಖಚಿತ. ನೀವು ಯಾವ ವಿಳಾಸದಲ್ಲಿ ಇದ್ದರೂ ನಿಮ್ಮನ್ನು ಬಿಡುವುದಿಲ್ಲ. ನಿಮ್ಮ ಜೀವ ಜೀವನಕ್ಕೂ ಅಪಾಯವಿದೆ ಎಂದು ಬೆದರಿಕೆಯೊಡ್ಡಿದ್ದಾರೆ.

Threat To CT Ravi Over Laxmi Hebbalkar Row

ಸಿ.ಟಿ.ರವಿ ಅವರ ಮನೆಗೆ ಪತ್ರ ಬರುತ್ತಿದ್ದಂತೆ ಆಪ್ತಸಹಾಯಕ ಚೇತನ್ ಬಸವನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಹಳ್ಳಿ ಪೊಲೀಸರು ಪತ್ರ ಬರೆದವರು ಯಾರು? ಎಲ್ಲಿಂದ ಪತ್ರ ಬಂದಿದೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net