ಮತ್ತೆ ಪೊಲೀಸ್ ಠಾಣೆಗೆ ಬಂದ ಮಹಿಳೆ - ಆಡಿಯೋ ಪ್ರಕರಣದ ಬಳಿಕ ಬೆದರಿಕೆ

Published on


ಪುತ್ತೂರು: ರಾಜಕೀಯದಲ್ಲಿ ಸಂಚಲನ ಮೂಡಿಸಿದ ಆಡಿಯೋ ಪ್ರಕರಣದಲ್ಲಿರುವ ಮಹಿಳೆ ಶನಿವಾರ ಮತ್ತೆ ನಗರ ಠಾಣೆಗೆ ಆಗಮಿಸಿ ಕುತೂಹಲ ಮೂಡಿಸಿದ್ದಾರೆ.


ಗುರುವಾರ ಸಾಯಂಕಾಲದಿಂದ ತಡರಾತ್ರಿಯವರೆಗೆ ಠಾಣೆಯಲ್ಲಿ ಇದ್ದು, ಮನೆಯ ಹತ್ತಿರ ಯಾರೋ ಓಡಾಡಿದಂತಾಗುತ್ತದೆ. ರಕ್ಷಣೆ ಬೇಕು ಎಂಬ ವಿಚಾರದಲ್ಲಿ ಠಾಣೆಯಲ್ಲಿ ಅಽಕಾರಿಗಳಲ್ಲಿ ಹೇಳಿಕೊಂಡಿದ್ದು, ದೂರು ಬರೆದವರು ನೀಡದೆ ಹಿಂತಿರುಗಿದ್ದರು. ಆ ಬಳಿಕ ಠಾಣೆಯಿಂದ ಮನೆಯಿರುವ ಭಾಗಕ್ಕೆ ಗಸ್ತು ಹೆಚ್ಚಿಸುವ ಜತೆಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸುತ್ತಿವೆ.


ಶನಿವಾರ ಸಾಯಂಕಾಲ ಠಾಣೆಗೆ ಆಗಮಿಸಿದ ಮಹಿಳೆ ಕೆಲವೊಂದು ದಾಖಲೆಗಳನ್ನು ತಂದಿದ್ದು, ಪೊಲೀಸರ ಕೆಲವು ಪ್ರಶ್ನೆಗೆ ಸ್ಪಂದಿಸದೆ ಮತ್ತೆ ಬರುವುದಾಗಿ ಹೇಳಿ ರಿಕ್ಷಾದಲ್ಲಿ ತೆರಳಿದ್ದಾರೆ. ಶಿರಸಿ, ಬೆಂಗಳೂರು ಭಾಗದಲ್ಲಿ ಕೆಲಸ ನಿರ್ವಹಿಸಿದ್ದ ಮಹಿಳೆ ಎರಡು ತಿಂಗಳಿಂದ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಆಡಿಯೋ ವೈರಲ್ ಆಗಿದ್ದು, ಮಹಿಳೆಗೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net