ಮಹಿಳೆಯರನ್ನು ಅಗೌರವಿಸಿದವರ ಸರ್ವನಾಶ; ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ...

yogi
Published on

ಬೆಂಗಳೂರು: ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣ ಹಿನ್ನೆಲೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಅತ್ಯಾಚಾರಿಗಳ ಕುರಿತು ಸರ್ಕಾರ ಸಾಫ್ಟ್​ ಕಾರ್ನರ್​ ಹೊಂದಿದೆ ಎಂಬ ಆರೋಪಗಳು ಕೂಡ ಕೇಳಿಬಂದಿದ್ದವು. ಆದರೆ ಇದೀಗ ಅವೆಲ್ಲವಕ್ಕೂಉತ್ತರವೆಂಬಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪ್ರತಿಕ್ರಿಯಿಸಿದ್ದಾರೆ.

ಯಾರು ಮಹಿಳೆಯರ ಗೌರವವನ್ನು ಹಾಳು ಮಾಡಬಹುದು ಎಂದು ಭಾವಿಸುತ್ತಾರೋ ಅವರೆಲ್ಲರೂ ಸರ್ವನಾಶವನ್ನು ಎದುರಿಸುತ್ತಾರೆ. ಭವಿಷ್ಯದಲ್ಲಿ ಸಾರ್ವಜನಿಕರು ನೆನಪಿಟ್ಟುಕೊಳ್ಳುವಂಥ ಶಿಕ್ಷೆಯನ್ನು ಅವರಿಗೆ ನೀಡಲಾಗುತ್ತದೆ. ನಮ್ಮ ಸರ್ಕಾರ ಎಲ್ಲ ತಾಯಂದಿರು ಹಾಗೂ ಸೋದರಿಯರ ಭದ್ರತೆ ಹಾಗೂ ಅಭಿವೃದ್ಧಿಗೆ ಬದ್ಧವಾಗಿದೆ. ಇದು ನಮ್ಮ ಭರವಸೆ, ಬದ್ಧತೆ ಎಂಬುದಾಗಿ ಅವರು ಹಿಂದಿಯಲ್ಲಿ ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net