

GST Reforms: ಈ ಹಿಂದೆ ಜಿಎಸ್‌ಟಿಯನ್ನು "ಗಬ್ಬರ್ ಸಿಂಗ್ ಟ್ಯಾಕ್ಸ್" ಎಂದು ಕರೆದಿದ್ದ ಕಾಂಗ್ರೆಸ್ ಇಂದು ಅದರ ಸುಧಾರಣೆಯ ಕ್ರೆಡಿಟ್ ತೆಗೆದುಕೊಳ್ಳುತ್ತಿರುವುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ.
ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸೀತಾರಾಮನ್, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 100 ರೂ. ಗಳಿಸಿದರೆ, 91 ರೂ. ತೆರಿಗೆ ಕಟ್ಟಲೆಂದೆ ಮೀಸಲಿಡುವ ಸ್ಥಿತಿ ಇತ್ತು, ಹಿಂದೆ ಈ ರೀತಿ ಅಧಿಕಾರ ನಡೆಸಿದವರು, ಜಿಎಸ್‌ಟಿಯನ್ನು ಗಬ್ಬರ್ ಸಿಂಗ್ ತೆರಿಗೆ ಎಂದು ಅಪಹಾಸ್ಯ ಮಾಡಿದವರು, ಇಂದು ಅದರ ಕ್ರೆಡಿಟ್ ಪಡೆಯಲು ಉತ್ಸುಕತೆ ತೋರಿತ್ತಿದ್ದಾರೆ, ಜಿಎಸ್ಟಿ ತಮ್ಮ ಪರಿಕಲ್ಪನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರು, ತಾವೂ ಅಧಿಕಾರದಲ್ಲಿದ್ದಾಗ ಏಕೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
2017 ರಲ್ಲಿ GST ಪರಿಚಯಿಸಿದಾಗ, ಇದನ್ನು 'ಗೇಮ್-ಚೇಂಜರ್' ಎಂದು ಕರೆಯಲಾಯಿತು ಏಕೆಂದರೆ ಇದು ದೇಶಾದ್ಯಂತ ಬಹು ಪರೋಕ್ಷ ತೆರಿಗೆಗಳನ್ನು ಒಂದೇ ವ್ಯವಸ್ಥೆಯೊಂದಿಗೆ ಬದಲಾಯಿಸಿತು. ಅದು GST 1.0, ಭಾರತವನ್ನು ಒಂದು ರಾಷ್ಟ್ರ, ಒಂದು ತೆರಿಗೆ ಅಡಿಯಲ್ಲಿ ಒಗ್ಗೂಡಿಸುವ ಒಂದು ಕ್ರಮ ಎಂದು ಅನೇಕರು ಬಣ್ಣಿಸಿದ್ದರು.
ಸರ್ಕಾರವು ಈಗ GST 2.0 ಅನ್ನು ಅನಾವರಣಗೊಳಿಸಿದ್ದು, ಇದು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ. ಈ ಕ್ರಮದಲ್ಲಿನ ಅತಿದೊಡ್ಡ ಬದಲಾವಣೆಯೆಂದರೆ ಎರಡು-ಸ್ಲ್ಯಾಬ್ ತೆರಿಗೆ ರಚನೆ, ಇದು ವ್ಯವಹಾರಗಳು ಮತ್ತು ಗ್ರಾಹಕರಿಗೆ ವ್ಯವಸ್ಥೆಯನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರ ಮೇಲೆ ಗಮನ ಕೇಂದ್ರೀಕರಿಸಿರುವ ಕೇಂದ್ರ ಸರ್ಕಾರ, ಮೂಲಭೂತ ಅಗತ್ಯಗಳಿಗೆ ಕಡಿಮೆ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ, ಐಷಾರಾಮಿ ಸರಕುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ, ಉಪ್ಪು ಮತ್ತು ಸಕ್ಕರೆಯನ್ನು ಒಂದೇ ದರದಲ್ಲಿ ಇರಿಸಲಾಗುತ್ತದೆ, ಹೆಚ್ಚಿನ ಸಕ್ಕರೆ ಉತ್ಪನ್ನಗಳಿಗೆ ವಿಭಿನ್ನ ತೆರಿಗೆ ವಿಧಿಸುತ್ತದೆ.
ಶೈಕ್ಷಣಿಕ ವಲಯಕ್ಕೂ ಇದರಿಂದ ಸ್ಪಷ್ಟತೆ ಸಿಕ್ಕಿದ್ದು, ನಿಯಮಿತ ಶಾಲಾ ಶಿಕ್ಷಣವು ತೆರಿಗೆ ಮುಕ್ತವಾಗಿರಲಿದ್ದು, ವಾಣಿಜ್ಯ ತರಬೇತಿ ಕೇಂದ್ರಗಳಿಗೆ ಯಾವುದೇ ರೀತಿಯ ವಿನಾಯಿತಿ ಪಡೆಯುವುದಿಲ್ಲ. ಕಡಿಮೆ ತೆರಿಗೆಯ ಲಾಭವನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಬೇಕು ಎಂದು ಸೀತಾರಾಮನ್ ಒತ್ತಿ ಹೇಳಿದ್ದು, ಹೊಸ ಸುಧಾರಣೆಗಳು ಜಾರಿಗೆ ಬಂದ ನಂತರ ಈ ವಿಷಯವಾಗಿ ಜಾಗರುಕತೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದರು. ಸಾರ್ವಜನಿಕ ವಲಯದ ಕಂಪನಿಗಳನ್ನು ಅತ್ಯಂತ ಸಮೀಪದಿಂದ ಮೆಲ್ವಿಚಾರಣೆ ನಡೆಸಲಾಗುವುದು ಎಂದು ಈ ವೇಳೆ ತಿಳಿಸಿದರು.(ಏಜೆನ್ಸೀಸ್)