ಈ ಬಾರಿಯೂ ಗೊರವಯ್ಯ ರಾಮಣ್ಣನೇ ನುಡಿಯಲಿದ್ದಾನೆ ಮೈಲಾರಲಿಂಗೇಶ್ವರ ಕಾರ್ಣಿಕ

Mailara Lingeshwara Karnika
Published on

ಹೂವಿನಹಡಗಲಿ: ಫೆ.11ರಂದು ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಗೊರವಯ್ಯ ರಾಮಣ್ಣನೇ ನುಡಿಯುತ್ತಾನೆ ಎಂದು ದೇವಸ್ಥಾನದ ಇಒ ಪ್ರಕಾಶ್ ರಾವ್ ತಿಳಿಸಿದರು. ಧಾರವಾಡ ಹೈಕೋರ್ಟ್ ವಿಚಾರಣೆಯನ್ನು ಮಾ.2ಕ್ಕೆ ಮುಂದೂಡಿದ್ದರಿಂದ ನ್ಯಾಯಾಲಯದ ಆದೇಶದ ಪ್ರಕಾರ ಗೊರವಯ್ಯ ರಾಮಣ್ಣ ಕಾರ್ಣಿಕವನ್ನು ನುಡಿಯಲಿದ್ದು, ಭಕ್ತರು ಆತಂಕ ಪಡಬೇಕಿಲ್ಲ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಈಗಾಗಲೇ ಜಾತ್ರೆಗಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ, ಜಿಪಂ, ತಾಲೂಕು ಆಡಳಿತದಿಂದ ಸಿದ್ಧತೆ ಕಾರ್ಯ ನಡೆದಿದೆ. ತಾತ್ಕಾಲಿಕ ಆಸ್ಪತ್ರೆ, ಶೌಚಗೃಹ, ಪಶು ಆಸ್ಪತ್ರೆ, ಸಾರಿಗೆ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಲಕ್ಷಾಂತರ ಭಕ್ತರಿಗೆ ಕಾರ್ಣಿಕದ ನುಡಿ ಸ್ಪಷ್ಟವಾಗಿ ಕೇಳುವಂತೆ ಹೈಟೆಕ್ ಧ್ವನಿವರ್ಧಕ ಅಳವಡಿಸಲಾಗವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net