More

    ದೇಹಸೌಂದರ್ಯ ಹೆಚ್ಚಿಸಿ ಮನಸ್ಸಿಗೆ ಏಕಾಗ್ರತೆ ನೀಡುತ್ತೆ, ಈ ಸುಲಭ ಯೋಗಾಸನ!

    ಬೆಂಗಳೂರು : ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಹೇಳಿಮಾಡಿಸಿದಂತಹ ಯೋಗ ಭಂಗಿ ಎಂದರೆ ಪದ್ಮಾಸನ. ಸರಳವಾದ ಈ ಆಸನ ಮಾಡುವುದರಿಂದ ಕಾಲಿನ ನರ, ಹೊಟ್ಟೆ, ಸೊಂಟ, ಬೆನ್ನು, ಮಂಡಿ ಮುಂತಾದ ಅಂಗಗಳಿಗೆ ಹೊಸ ಹುರುಪು ಬರುತ್ತದೆ.

    ಪದ್ಮಾಸನ ಮಾಡುವುದರಿಂದ ಉಸಿರಾಟ ಸುಗಮವಾಗುತ್ತದೆ. ಹೊಟ್ಟೆ ತೆಳ್ಳಗಾಗಿ, ಶರೀರದ ಸೌಂದರ್ಯ ಹೆಚ್ಚುತ್ತದೆ. ತೊಡೆಗಳ ಬೊಜ್ಜು ಸಹ ಕರಗುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವ ಈ ಆಸನವನ್ನು ವಿದ್ಯಾರ್ಥಿ ದೆಸೆಯಲ್ಲಿ ಕಲಿತರೆ ಬಹಳ ಒಳ್ಳೆಯದು. ಆದರೆ, ಮಂಡಿ ನೋವು ಅಥವಾ ಸೊಂಟ ನೋವು ಇರುವವರು ಪದ್ಮಾಸನವನ್ನು ಅಭ್ಯಾಸ ಮಾಡಬಾರದು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಂಚಲಿವೆ ಮೇಡ್ ಇನ್ ಇಂಡಿಯಾ ಕ್ರೀಡಾ ಸಾಮಗ್ರಿಗಳು!

    ಮಾಡುವ ವಿಧಾನ : ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು. ಬಲಗಾಲನ್ನು ಮಡಿಸಿಕೊಂಡು ಎಡತೊಡೆಯ ಮೇಲೆ, ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ ಇಡುವುದು. ಬೆನ್ನು, ಕುತ್ತಿಗೆ ನೇರ ಮಾಡಿ ಕೂರುವುದು. ತೋರ್​ಬೆರಳು ಮತ್ತು ಹೆಬ್ಬೆಟ್ಟನ್ನು ಒಟ್ಟಿಗೆ ಹಿಡಿದು(ಚಿನ್ಮುದ್ರೆ) ಸಹಜ ಉಸಿರಾಟ ನಡೆಸುವುದು. ಮತ್ತೆ ಇದೇ ರೀತಿ ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ, ಬಲಗಾಲನ್ನು ಮಡಿಸಿಕೊಂಡು ಎಡತೊಡೆಯ ಮೇಲೆ ಇಡುವುದು. ಬಲಗಾಲನ್ನು ಮಡಿಸಿಕೊಂಡು ಎಡತೊಡೆಯಯ ಮೇಲೆ, ಎಡಗಾಲನ್ನು ಮಡಿಸಿಕೊಂಡು ಬಲತೊಡೆಯ ಮೇಲೆ ಇಡುವುದು. ಮತ್ತೆ ಚಿನ್ಮುದ್ರೆಯಲ್ಲಿ ಸಹಜ ಉಸಿರಾಟ ನಡೆಸುವುದು.

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    “ಕರೊನಾ ತಡೆಯಲ್ಲಿ ಮುಂದಿನ 125 ದಿನಗಳು ಭಾರೀ ಮಹತ್ವದ್ದಾಗಿವೆ”

    ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts