

ಬೆಂಗಳೂರು: ನೀವು ಚಿಕ್ಕ ಉಡುಪುಗಳು, ಮಿನಿ ಸ್ಕರ್ಟ್‌ಗಳು ಅಥವಾ ಬಿಕಿನಿಯನ್ನು ಧರಿಸಬೇಕಾದರೆ ಮೊದಲು ನೀವು ತೊಡೆಯ ಕೊಬ್ಬು ಮತ್ತು ಆ ಭಾಗದ ಬಣ್ಣದ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೀರಿ. ಕೊನೆಗೆ, ಆ ಬಟ್ಟೆ ಧರಿಸುವ ಆಲೋಚನೆಯನ್ನೇ ಬಿಟ್ಟುಬಿಡುತ್ತೀರಿ. ನೀವು ಇದೇ ಸಮಸ್ಯೆಯ ಕಾರಣದಿಂದ ಸಣ್ಣ ಉಡುಪುಗಳನ್ನು ಧರಿಸಲು ಸಾಧ್ಯವಾಗದಿದ್ದರೆ, ಇಲ್ಲಿ ಕೆಲವು ಸಲಹೆಗಳನ್ನು ಕೊಡಲಾಗಿದೆ. ಇದರ ಸಹಾಯದಿಂದ ನೀವು ತೊಡೆ, ಮೊಣಕಾಲು, ಮೊಣಕೈ ಅಥವಾ ಕಂಕುಳ ಕಪ್ಪನ್ನು ಸುಲಭವಾಗಿ ಕಡಿಮೆ ಮಾಡಬಹುದು. ಅಷ್ಟೇ ಅಲ್ಲ, ಈ ಪರಿಹಾರಗಳು ಮೊಣಕೈ ಮತ್ತು ಮೊಣಕಾಲುಗಳ ಕಪ್ಪು ಬಣ್ಣವನ್ನು ತೆಗೆದುಹಾಕುವಲ್ಲಿ ಸಹ ಬಹಳ ಪರಿಣಾಮಕಾರಿಯಾಗಿದೆ.
ತೆಂಗಿನ ಎಣ್ಣೆ ಮತ್ತು ನಿಂಬೆ ರಸ
ತೊಡೆ, ಮೊಣಕಾಲು, ಮೊಣಕೈ ಅಥವಾ ಕಂಕುಳಲ್ಲಿ ಚರ್ಮವು ಕಪ್ಪಾಗಿದ್ದರೆ, ತೆಂಗಿನ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣವು ಅದನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ತೊಡೆಯ ಒಳಭಾಗಕ್ಕೆ ಹಚ್ಚಿ, 15 ನಿಮಿಷಗಳ ಕಾಲ ಬಿಡಿ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ನಿಂಬೆಯು ಕಪ್ಪು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ. ತೆಂಗಿನ ಎಣ್ಣೆಯು ಚರ್ಮವನ್ನು ತೇವಾಂಶದಿಂದ ಇಡುತ್ತದೆ.
ಬೇಕಿಂಗ್ ಪೌಡರ್
ಬೇಕಿಂಗ್ ಪೌಡರ್ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಸಮಸ್ಯೆಯ ನಿವಾರಣೆಗೂ ಬೇಕಿಂಗ್ ಪೌಡರ್ ಅನ್ನು ಎರಡರಿಂದ ಮೂರು ಸ್ಪೂನ್ ಸಮಾನವಾಗಿ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿ. ಒಳ ತೊಡೆಯ ಮೇಲೆ ಹಚ್ಚಿ. ನೀವು ಕಂಕುಳ ಭಾಗಕ್ಕೂ ಈ ಪರಿಹಾರವನ್ನು ಬಳಸಬಹುದು. ಚರ್ಮದ ಕಪ್ಪನ್ನು ಹೋಗಲಾಡಿಸಲು ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ.
ಮಸೂರ್ ದಾಲ್ ಪ್ಯಾಕ್
ಈ ಪ್ಯಾಕ್ ಮಾಡಲು, ಹಿಂದಿನ ರಾತ್ರಿ ಬೇಳೆಯನ್ನು ನೆನೆಸಿಡಿ. ಬೆಳಗ್ಗೆ ಅದನ್ನು ರುಬ್ಬಿಕೊಳ್ಳಿ. ಅದರಲ್ಲಿ ಅರ್ಧ ಚಮಚ ಅರಿಶಿನವನ್ನು ಮಿಶ್ರಣ ಮಾಡಿ. ಈಗ ಅದನ್ನು ತೊಡೆಯ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ಕಾಲ ಬಿಡಿ. ಸ್ವಲ್ಪ ಒಣಗಿದ ನಂತರ ಸ್ಕ್ರಬ್ ಮಾಡಿ ನೀರಿನಿಂದ ತೊಳೆಯಿರಿ. ಕೆಂಪು ಮಸೂರವು ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿದೆ, ಇದು ಚರ್ಮವನ್ನು ಲೈಟ್ ಕಲರ್ ಕಾಣಲು ಸಹಾಯ ಮಾಡುತ್ತದೆ.
ಲ್ಯಾಕ್ಟಿಕ್ ಆಸಿಡ್ ಪ್ಯಾಕ್
ಈ ಪ್ಯಾಕ್‌ನ ನಿಯಮಿತ ಬಳಕೆಯ ಪರಿಣಾಮವನ್ನು ಕೆಲವೇ ವಾರಗಳಲ್ಲಿ ನೀವು ನೋಡಲಾರಂಭಿಸುತ್ತೀರಿ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ 1 ಚಮಚ ಆಲೂಗಡ್ಡೆ ರಸ, 1 ಚಮಚ ನಿಂಬೆ ರಸ, 2 ಚಮಚ ಮೊಸರು ಮತ್ತು 1 ಚಮಚ ಹಾಲಿನ ಪುಡಿಯನ್ನು ಮಿಶ್ರಣ ಮಾಡಿ. ಇದನ್ನು ತೊಡೆಯ ಮೇಲೆ ಹಚ್ಚಿ ಕನಿಷ್ಠ 10-15 ನಿಮಿಷಗಳ ಕಾಲ ಇರಿಸಿ. ನಂತರ ನೀರಿನಿಂದ ತೊಳೆಯಿರಿ. ಕಪ್ಪು ಚರ್ಮವು ಕ್ರಮೇಣ ಲೈಟ್ ಆಗಲು ಪ್ರಾರಂಭಿಸುತ್ತದೆ.