More

    ಈ ಒಟಿಟಿ ಪಾಲಾಯ್ತು ‘ಟಿಲ್ಲು ಸ್ಕ್ವೇರ್‌’ ಚಿತ್ರದ ಡಿಜಿಟಲ್ ಹಕ್ಕು!

    ಹೈದರಾಬಾದ್​​: ನಟ ಸಿದ್ದು ಜೊನ್ನಲಗಡ್ಡ ಮತ್ತು ನಟಿ ಅನುಪಮಾ ಪರಮೇಶ್ವರನ್​ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಟಾಲಿವುಡ್​ ಸೂಪರ್​​ ಹಿಟ್​ ಸಿನಿಮಾ ಡಿಜಿ ಟಿಲ್ಲು ಸೀಕ್ವೆಲ್​ ‘ಟಿಲ್ಲು ಸ್ಕ್ವೇರ್​’ ಇದೇ ಮಾರ್ಚ್​ 29ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಮೊದಲ ಭಾಗ ಸಿಕ್ಕಾಪಟ್ಟೆ ಹಿಟ್​ ಆಗಿದ್ದರಿಂದ ಸಹಜವಾಗಿಯೇ ಎರಡನೇ ಭಾಗದ ಮೇಲಿನ ನಿರೀಕ್ಷೆ ಈಗ ದುಪ್ಪಟ್ಟಾಗಿದೆ. ಈಗಾಗಲೇ ಟ್ರೇಲರ್​ ರಿಲೀಸ್ ಆಗಿದ್ದು, ಸಿನಿಪ್ರೇಕ್ಷಕರು ಏನೆಲ್ಲಾ ಊಹಿಸಿದ್ದರೋ ಅದೆಲ್ಲವೂ ಚಿತ್ರದಲ್ಲಿ ಇರುವುದು ಪಕ್ಕಾ ಎಂಬ ಸಂಗತಿ ತಿಳಿದು ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ.

    ಇದನ್ನೂ ಓದಿ: ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 182% ಲಾಭ ನೀಡಿದ ರಕ್ಷಣಾ ಕಂಪನಿ ಸ್ಟಾಕ್​: ಗುರುವಾರ ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

    ಚಿತ್ರದ ಟ್ರೇಲರ್​ ಬಿಡುಗಡೆಯಾದಗಿನಿಂದಲೂ ನಟಿ ಅನುಪಮಾ ಹಾಗೂ ನಟ ಸಿದ್ದು ಲಿಪ್​ಲಾಕ್​ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ತೀವ್ರ ಚರ್ಚೆ, ಟೀಕೆಗೆ ಗುರಿಯಾಯಿತು. ಪ್ರತ್ಯೇಕವಾಗಿ ಕಿಸ್ಸಿಂಗ್ ಸೀನ್​ ವಿಚಾರಕ್ಕೆ ನಟಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು, ಇಂತಹ ದೃಶ್ಯ ಏಕೆ? ಎಂದು ಪ್ರಶ್ನಿಸಿದ್ದರು. ಇನ್ನು ಭಾರೀ ಅಸಮಾಧಾನ ಹೊರಹಾಕಿದ ಅನುಪಮಾ ಅಭಿಮಾನಿಗಳು, ಲಿಪ್​ಲಾಕ್​ ದೃಶ್ಯ ಮಾಡಿದ್ದರಿಂದ ನಮ್ಮ ಹೃದಯ ನುಚ್ಚುನೂರಾಗಿದೆ. ಈ ಸೀನ್​ ನೀವು ಮಾಡಬಾರದಿತ್ತು. ಇದರಿಂದ ನೀವು ನಮ್ಮನ್ನು ಕಳೆದುಕೊಂಡಿದ್ದೀರಿ ಎಂದು ಅಭಿಪ್ರಾಯಿಸಿದ್ದರು.

    ಮಲ್ಲಿಕ್ ರಾಮ್ ನಿರ್ದೇಶಿಸಿದ, ಅನುಪಮಾ ಪರಮೇಶ್ವರನ್ ಮತ್ತು ಸಿದ್ದು ಜೊನ್ನಲಗಡ್ಡ ನಟಿಸಿರುವ ಈ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪ್ರಖ್ಯಾತ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆಸಕ್ತರ ಗಮನಕ್ಕಾಗಿ ಈ ಚಲನಚಿತ್ರದ ಪ್ರೀಕ್ವೆಲ್​ ಇದೀಗ ಪ್ರಸ್ತುತ ಆಹಾದಲ್ಲಿ ವೀಕ್ಷಿಸಲು ಲಭ್ಯವಿದೆ.

    ಇದನ್ನೂ ಓದಿ: ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಚಿತ್ರದಲ್ಲಿ ಅನುಪಮಾ ಪರಮೇಶ್ವರನ್, ಸಿದ್ದು ಜೊನ್ನಲಗಡ್ಡ, ಮಡೋನ ಸಬಾಸ್ಟಿಯನ್​, ವೆಂಕಟ್, ಮುರುಳಿಧರ್​, ಪ್ರಣಿತ್ ರೆಡ್ಡಿ, ರಾಜ್, ಶ್ರೀರಾಮ್ ರೆಡ್ಡಿ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಎಸ್​.ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts