More

    ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 182% ಲಾಭ ನೀಡಿದ ರಕ್ಷಣಾ ಕಂಪನಿ ಸ್ಟಾಕ್​: ಗುರುವಾರ ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

    ಮುಂಬೈ: ಅಸ್ಟ್ರಾ ಮೈಕ್ರೋವೇವ್ ಷೇರುಗಳ ಬೆಲೆ ಗುರುವಾರ ಒಂದೇ ದಿನದಲ್ಲಿ ಶೇಕಡಾ 14ರಷ್ಟು ಹೆಚ್ಚಳವಾಗಿ, ರೂ 528.95 ಕ್ಕೆ ತಲುಪಿತು. ಈ ಮೂಲಕ ಸಂಸ್ಥೆಯ ಮಾರುಕಟ್ಟೆ ಮೌಲ್ಯ 5,801 ಕೋಟಿ ರೂ.ಗೆ ಏರಿದೆ. ಘಾಜಿಯಾಬಾದ್‌ನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಿಂದ MPR ಉಪ-ವ್ಯವಸ್ಥೆಗಳ ಪೂರೈಕೆಗಾಗಿ 385.58 ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳನ್ನು ಪಡೆದುಕೊಂಡಿದ್ದಾಗಿ ಎಂದು ಈ ಏರೋಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ ಹೇಳಿದ ಹಿನ್ನೆಲೆಯಲ್ಲಿ ಷೇರುಗಳ ಬೆಲೆಯಲ್ಲಿ ಭಾರೀ ಜಿಗಿತ ಕಂಡುಬಂದಿದೆ.

    ಈ ಆರ್ಡರ್‌ಗಳನ್ನು ಪೂರ್ಣಗೊಳಿಸಲು ನಿಗದಿಯಾಗಿರುವ ಅವಧಿಯು 36 ತಿಂಗಳು ಆಗಿದೆ.

    ಸಂಸ್ಥೆಯ ಒಟ್ಟು 0.72 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ 4.18 ಕೋಟಿ ರೂಪಾಯಿ ವಹಿವಾಟು ನಡೆಸಿವೆ. ರಕ್ಷಣಾ ಸ್ಟಾಕ್ ಒಂದು ವರ್ಷದಲ್ಲಿ 182.21 ಪ್ರತಿಶತದಷ್ಟು ಏರಿಕೆಯಾಗಿದೆ. ಅಲ್ಲದೆ, 2024 ರಲ್ಲಿ ಇದುವರೆಗೆ ಶೇಕಡಾ 1.31ರಷ್ಟು ಹೆಚ್ಚಳ ಕಂಡಿದೆ.

    ಈ ಸ್ಟಾಕ್ ಫೆಬ್ರವರಿ 9, 2024 ರಂದು ರೂ 690ಕ್ಕೆ ಏರಿಕೆಯಾಗಿ, 52 ವಾರದ ಗರಿಷ್ಠ ಮಟ್ಟವನ್ನು ತಲುಪಿತ್ತು. ಮಾರ್ಚ್ 29, 2023 ರಂದು ರೂ 217.85 ತಲುಪಿ 52 ವಾರಗಳ ಕನಿಷ್ಠಕ್ಕೆ ಕುಸಿದಿತ್ತು. ಕಳೆದ ಮೂರು ವರ್ಷಗಳಲ್ಲಿ, ಈ ಷೇರುಗಳ ಬೆಲೆ 362% ಏರಿಕೆಯಾಗಿದೆ.

    ಅಸ್ಟ್ರಾ ಮೈಕ್ರೊವೇವ್ ಕಂಪನಿಯು ರೇಡಿಯೋ ಫ್ರೀಕ್ವೆನ್ಸಿ ಮತ್ತು ರಕ್ಷಣಾ, ಬಾಹ್ಯಾಕಾಶ, ಹವಾಮಾನ ಮತ್ತು ದೂರಸಂಪರ್ಕದಲ್ಲಿ ಬಳಸುವ ಮೈಕ್ರೋವೇವ್ ಸಿಸ್ಟಮ್‌ಗಳಿಗಾಗಿ ಉಪ-ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಮತ್ತು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.

    ರಾಕೆಟ್​ನಂತೆ ಜಿಗಿದ ವಿಐಪಿ ಷೇರು ಬೆಲೆ: ಒಂದೇ ದಿನದಲ್ಲಿ 15% ಹೆಚ್ಚಳ ಆಗಿದ್ದೇಕೆ?

    ಟಾಟಾ, ಅದಾನಿ, ಅಂಬಾನಿ ಸಮೂಹವಲ್ಲ; ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರಿಗೆ ಈ ಗ್ರೂಪ್​ನ ಕಂಪನಿಗಳು ಅಚ್ಚುಮೆಚ್ಚು…

    ಸೊನಾಟಾ ಫೈನಾನ್ಸ್ ಸ್ವಾಧೀನ ಮಾಡಿಕೊಂಡ ಕೊಟಕ್ ಮಹೀಂದ್ರಾ ಬ್ಯಾಂಕ್: ರೂ. 537 ಕೋಟಿ ಡೀಲ್​ ನಂತರ ಷೇರಿಗೆ ಡಿಮ್ಯಾಂಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts