More

    ಸೊನಾಟಾ ಫೈನಾನ್ಸ್ ಸ್ವಾಧೀನ ಮಾಡಿಕೊಂಡ ಕೊಟಕ್ ಮಹೀಂದ್ರಾ ಬ್ಯಾಂಕ್: ರೂ. 537 ಕೋಟಿ ಡೀಲ್​ ನಂತರ ಷೇರಿಗೆ ಡಿಮ್ಯಾಂಡು

    ಮುಂಬೈ: ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಸೊನಾಟಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು 537 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ.

    ಈ ಸ್ವಾಧೀನದೊಂದಿಗೆ, ಸೋನಾಟಾ ಈಗ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಸ್ಟಾಕ್ ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ, ಬ್ಯಾಂಕ್ ಹೀಗೆ ಹೇಳಿದೆ. ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾದ ಸೊನಾಟಾ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ (ಎನ್‌ಬಿಎಫ್‌ಸಿ) ನ ಬಂಡವಾಳದ 100 ಪ್ರತಿಶತವನ್ನು ಬ್ಯಾಂಕ್ ಅಂದಾಜು ರೂ. 537 ಕೋಟಿಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಬ್ಯಾಂಕ್​ ಹೇಳಿದೆ.

    ಈ ಸುದ್ದಿಯ ನಡುವೆ ಹೂಡಿಕೆದಾರರು ಗುರುವಾರ ಕೊಟಕ್ ಬ್ಯಾಂಕ್ ಷೇರುಗಳ ಖರೀದಿಗೆ ಮುಗಿಬಿದ್ದರು. ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳ ಬೆಲೆ ಶೇಕಡಾ 1.5ರಷ್ಟು ಏರಿಕೆ ಕಂಡು 1802 ರೂ. ತಲುಪಿತು. ಮೇ 2023 ರಲ್ಲಿ ಈ ಷೇರಿನ ಬೆಲೆಯು ರೂ 2,063 ಕ್ಕೆ ಏರಿದ್ದು, ಇದು 52 ವಾರಗಳ ಗರಿಷ್ಠ ಬೆಲೆ ಆಗಿದೆ.

    ಈ ಬ್ಯಾಂಕಿನ ಶೇ. 25.91 ರಷ್ಟು ಪಾಲು ಪ್ರವರ್ತಕರ ಬಳಿ ಇದೆ. ಸಾರ್ವಜನಿಕ ಷೇರುಗಳು ಶೇಕಡಾ 74.09 ರಷ್ಟಿವೆ. ಪ್ರವರ್ತಕ ಉದಯ್ ಕೋಟಕ್ ಕಂಪನಿಯಲ್ಲಿ ಶೇಕಡಾ 25.71 ಪಾಲನ್ನು ಹೊಂದಿದ್ದಾರೆ. ಇದು 51,10,27,100 ಷೇರುಗಳಿಗೆ ಸಮನಾಗಿದೆ.

    ಸೋನಾಟಾ ಫೈನಾನ್ಸ್ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ನೋಂದಾಯಿಸಲಾದ ಸಣ್ಣ ಹಣಕಾಸು ಸಂಸ್ಥೆಯಾಗಿದೆ. ಕಂಪನಿಯು 10 ರಾಜ್ಯಗಳಾದ್ಯಂತ 549 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಅಲ್ಲದೆ, ಡಿಸೆಂಬರ್ 31, 2023 ರಂತೆ ಅಂದಾಜು 2,620 ಕೋಟಿ ರೂ.ಗಳ ನಿರ್ವಹಣೆಯ (AUM) ಆಸ್ತಿ ಹೊಂದಿದೆ. ಅಕ್ಟೋಬರ್ 20, 2023 ರಂದು, ಸೋನಾಟಾ ಫೈನಾನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಅದನ್ನು ಅಂಗಸಂಸ್ಥೆಯನ್ನಾಗಿ ಮಾಡಿಕೊಳ್ಳಲು ಕೋಟಕ್ ಮಹೀಂದ್ರಾಗೆ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿದೆ.

    ಇದೇ ತಿಂಗಳಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಫಿನ್ ಟೆಕ್ನಾಲಜೀಸ್‌ನಲ್ಲಿ ತನ್ನ ಶೇಕಡಾ 2 ಪಾಲನ್ನು 208 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದೆ. ಅಂಕಿಅಂಶಗಳ ಪ್ರಕಾರ, ಕೊಟಕ್ ಮಹೀಂದ್ರಾ ಬ್ಯಾಂಕ್ 34,70,000 ಷೇರುಗಳನ್ನು ಮಾರಾಟ ಮಾಡಿದೆ, ಕೆಫಿನ್​ ಟೆಕ್ನಾಲಜೀಸ್‌ನಲ್ಲಿ 2.03 ಶೇಕಡಾ ಪಾಲಿನ ಷೇರುಗಳನ್ನು ಕೂಡ ಬ್ಯಾಂಕ್​ ಮಾರಾಟ ಮಾಡಿದೆ. ಷೇರುಗಳನ್ನು ಸರಾಸರಿ 600.28 ರೂ.ಗೆ ಮಾರಾಟ ಮಾಡಲಾಗಿದ್ದು, ಈ ವಹಿವಾಟಿನ ಮೌಲ್ಯವನ್ನು 208.29 ಕೋಟಿ ರೂ. ಇದೆ. ಇದರ ನಂತರ, ಕೆಫಿನ್​ ಟೆಕ್ನಾಲಜೀಸ್‌ನಲ್ಲಿನ ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಪಾಲು ಶೇಕಡಾ 9.80 ರಿಂದ (ಡಿಸೆಂಬರ್, 2023 ರ ಹೊತ್ತಿಗೆ) ಶೇಕಡಾ 7.77 ಕ್ಕೆ ಇಳಿದಿದೆ.

     

    ನಿಮ್ಮ ಬಳಿ ಈ ಷೇರು ಇದೆಯೇ?: ಈ ಕಂಪನಿಯ 3 ಷೇರುಗಳನ್ನು ನೀವು ಉಚಿತವಾಗಿ ಪಡೆಯುತ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts