More

    ರೂ. 2700 ಕೋಟಿಯ ಎನ್​ಸಿಡಿ ಹಂಚಿಕೆಗೆ ಅನುಮೋದನೆ: ಟಾಟಾ ಸ್ಟೀಲ್​ ಷೇರು ಬೆಲೆ ಏರಿಕೆ, ಟಾರ್ಗೆಟ್​ ಪ್ರೈಸ್ ಹೆಚ್ಚಳ

    ಮುಂಬೈ: ಟಾಟಾ ಗ್ರೂಪ್ ಬೆಂಬಲಿತ ಅತಿದೊಡ್ಡ ಉಕ್ಕು ತಯಾರಕ ಕಂಪನಿಯಾದ ಟಾಟಾ ಸ್ಟೀಲ್ ಲಿಮಿಟೆಡ್ ಷೇರು ಬೆಲೆ ಬುಧವಾರ 52 ವಾರಗಳ ಗರಿಷ್ಠ ಮಟ್ಟ ಸಮೀಪಿಸಿತು.

    ಕಂಪನಿಯು 2,700 ಕೋಟಿ ರೂ. ಮೊತ್ತದ ಲಿಸ್ಟೆಡ್ ನಾನ್-ಕನ್ವರ್ಟಿಬಲ್ ಡಿಬೆಂಚರ್‌ಗಳ (ಎನ್‌ಸಿಡಿ) ಹಂಚಿಕೆ ಮಾಡಿದ್ದು ಹೂಡಿಕೆದಾರರಿಗೆ ಲಾಭವನ್ನು ತಂದಿತು.

    ಟಾಟಾ ಸ್ಟೀಲ್ ಷೇರಿನ ಬೆಲೆಯು ಸಾರ್ವಕಾಲಿಕ ಗರಿಷ್ಠ ಬೆಲೆಯನ್ನು ಮುಟ್ಟಲು ಇನ್ನು ಕೇವಲ 7 ರೂಪಾಯಿಯ ದೂರದಲ್ಲಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 159.15 ಇದೆ.

    ಮಾರ್ಚ್ 27ರಂದು, ಗುರುತಿಸಲಾದ ಹೂಡಿಕೆದಾರರಿಗೆ ತಲಾ 1,00,000 ಮುಖಬೆಲೆಯ 2,70,000 ಅಸುರಕ್ಷಿತ, ರಿಡೀಮ್ ಮಾಡಬಹುದಾದ, ರೇಟೆಡ್ ಮತ್ತು ಪಟ್ಟಿ ಮಾಡಲಾದ ಎನ್‌ಸಿಡಿಗಳ ಹಂಚಿಕೆಯನ್ನು ಟಾಟಾ ಸ್ಟೀಲ್ ಅನುಮೋದಿಸಿದೆ ಎಂದು ಪ್ರಕಟಿಸಲಾಗಿದೆ. ಎನ್​ಸಿಡಿಗಳು 7.79%ನ ಸ್ಥಿರ ಕೂಪನ್ ದರವನ್ನು ಹೊಂದಿವೆ. ಖಾಸಗಿ ಆಧಾರದ ಮೇಲೆ ಮತ್ತು 3 ವರ್ಷಗಳ ಅವಧಿಗೆ ಈ ಹಂಚಿಕೆ ಮಾಡಲಾಗಿದೆ.

    ಎನ್‌ಸಿಡಿಗಳು ಒಟ್ಟು 2,700 ಕೋಟಿ ರೂ. ಮೊತ್ತದ್ದಾಗಿವೆ. ಟಾಟಾ ಸ್ಟೀಲ್ ಪ್ರಕಾರ, ಬಿಎಸ್‌ಇ ಲಿಮಿಟೆಡ್ ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಸೂಚಿಸಿದ ಬಹು ಇಳುವರಿ ಹಂಚಿಕೆ ವಿಧಾನಗಳ ಆಧಾರದ ಮೇಲೆ ಎನ್‌ಸಿಡಿಗಳನ್ನು ನೀಡಲಾಗಿದೆ. ಅದಕ್ಕೆ ಅನುಗುಣವಾಗಿ ಎನ್‌ಸಿಡಿಗಳ ಇಶ್ಯೂ ಬೆಲೆಯನ್ನು ನಿರ್ಧರಿಸಲಾಗಿದೆ. ಎನ್‌ಸಿಡಿಗಳನ್ನು ಬಿಎಸ್‌ಇ ಲಿಮಿಟೆಡ್‌ನ ಸಗಟು ಸಾಲ ಮಾರುಕಟ್ಟೆ ವಿಭಾಗದಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ.

    ಈ 3 ವರ್ಷದ ಅವಧಿಯು ಮಾರ್ಚ್ 27, 2024 ರಂದು ಪ್ರಾರಂಭವಾಗುತ್ತದೆ ಮತ್ತು ಮಾರ್ಚ್ 26, 2027 ರಂದು ಕೊನೆಗೊಳ್ಳುತ್ತದೆ.

    ಎನ್‌ಸಿಡಿಗಳ ಹಂಚಿಕೆಯ ನಂತರ, ಟಾಟಾ ಸ್ಟೀಲ್ ಷೇರುಗಳ ಬೆಲೆ ಬುಧವಾರ ಇಂಟ್ರಾ ಡೇ ವಹಿವಾಟಿನಲ್ಲಿ ರೂ 154.05 ಕ್ಕೆ ತಲುಪಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 159.50 ಇದೆ. ಈ ಷೇರು ಒಂದು ವರ್ಷದಲ್ಲಿ 49% ಹಾಗೂ 6 ತಿಂಗಳಲ್ಲಿ 21% ಏರಿಕೆಯಾಗಿದೆ.

    ಇತ್ತೀಚಿಗೆ, ಎರಡು ಬ್ರೋಕರೇಜ್‌ ಸಂಸ್ಥೆಗಳು ಟಾಟಾ ಸ್ಟೀಲ್‌ನಲ್ಲಿ ಪ್ರತಿ ಷೇರಿಗೆ ರೂ 170 ರ ಅತ್ಯಧಿಕ ಗುರಿ ಬೆಲೆ (ಟಾರ್ಗೆಟ್​ ಪ್ರೈಸ್​) ನಿಗದಿಪಡಿಸಿವೆ. ಜೆಪಿ ಮೋರ್ಗಾನ್ ಮತ್ತು ಫಿಸ್ಡಮ್ ಬ್ರೋಕರೇಜ್​ ಸಂಸ್ಥೆಗಳು ಟಾಟಾ ಸ್ಟೀಲ್ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿವೆ.

    ಬುಧವಾರ ಒಂದೇ ದಿನದಲ್ಲಿ 20% ಏರಿಕೆ ದಾಖಲಿಸಿದ ಷೇರುಗಳು: ಗುರುವಾರವೂ ಈ 5 ಸ್ಟಾಕ್​ಗಳಿಗೆ ಬೇಡಿಕೆ ಸಾಧ್ಯತೆ

    ಎರಡು ಘಟಕಗಳಾಗಿ ಟಾಟಾ ಮೋಟಾರ್ಸ್ ಕಂಪನಿ ಶೀಘ್ರದಲ್ಲೇ ವಿಭಜನೆ: ಸ್ಟಾಕ್ ಟಾರ್ಗೆಟ್​ ಪ್ರೈಸ್ ಹೆಚ್ಚಿಸಿದ ಬ್ರೋಕರೇಜ್ ಸಂಸ್ಥೆ

    ಬ್ಯಾಂಕಿಂಗ್, ಆಟೋ, ತೈಲ ಸ್ಟಾಕ್​ಗಳ ಖರೀದಿ ಜೋರು: ಷೇರು ಸೂಚ್ಯಂಕ ಸಾಕಷ್ಟು ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts