More

    ಬ್ಯಾಂಕಿಂಗ್, ಆಟೋ, ತೈಲ ಸ್ಟಾಕ್​ಗಳ ಖರೀದಿ ಜೋರು: ಷೇರು ಸೂಚ್ಯಂಕ ಸಾಕಷ್ಟು ಏರಿಕೆ

    ಮುಂಬೈ: ಸಕಾರಾತ್ಮಕ ಮ್ಯಾಕ್ರೋ ಡೇಟಾದ (ದೇಶದ ಸ್ಥೂಲ ಆರ್ಥಿಕತೆ ಕುರಿತ ಮಾಹಿತಿ) ನಂತರ ಬ್ಯಾಂಕಿಂಗ್, ಆಟೋ ಮತ್ತು ತೈಲ ಷೇರುಗಳಲ್ಲಿನ ಖರೀದಿಯ ಹಿನ್ನೆಲೆಯಲ್ಲಿ ಬುಧವಾರದಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿತು.

    30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 526.01 ಅಂಕಗಳು ಅಥವಾ ಶೇಕಡಾ 0.73 ರಷ್ಟು ಏರಿಕೆಯಾಗಿ 72,996.31 ಕ್ಕೆ ಸ್ಥಿರವಾಯಿತು. ಈ ಪೈಕಿ 18 ಷೇರುಗಳ ಬೆಲೆ ಹೆಚ್ಚಾದರೆ, 12 ಸ್ಟಾಕ್​ಗಳ ಬೆಲೆ ಕುಸಿದವು. ದಿನದ ವಹಿವಾಟಿನ ಅವಧಿಯಲ್ಲಿ, ಇದು 668.43 ಅಂಕಗಳು ಅಥವಾ 0.92 ಶೇಕಡಾ ಜಿಗಿದು 73,138.73 ಕ್ಕೆ ತಲುಪಿತ್ತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 118.95 ಅಂಕಗಳು ಅಥವಾ ಶೇಕಡಾ 0.54 ರಷ್ಟು ಚೇತರಿಕೆ ಕಂಡು 22,123.65 ಕ್ಕೆ ತಲುಪಿತು. ನಿಫ್ಟಿ ಸೂಚ್ಯಂಕದಲ್ಲಿನ 22 ಷೇರುಗಳು ಲಾಭ ಗಳಿಸಿದರೆ, 27 ಸ್ಟಾಕ್​ಗಳು ಕುಸಿತ ಕಂಡವು. ಒಂದು ಷೇರು ಬೆಲೆ ಯಥಾಸ್ಥಿತಿಯಲ್ಲಿ ಮುಕ್ತಾಯವಾಯಿತು.

    ಆಟೋ, ಬ್ಯಾಂಕಿಂಗ್ ಮತ್ತು ಇಂಧನ ಷೇರುಗಳು ಚೇತರಿಕೆಗೆ ಬೆಂಬಲ ನೀಡಿದರೆ, ಎಫ್‌ಎಂಸಿಜಿ ಮತ್ತು ಐಟಿ ಷೇರುಗಳು ಕುಸಿದವು.

    ಸೆನ್ಸೆಕ್ಸ್ ಷೇರುಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 3.6 ರಷ್ಟು ಏರಿಕೆ ಕಂಡಿತು. ಮಾರುತಿ, ಬಜಾಜ್ ಫೈನಾನ್ಸ್, ಟೈಟಾನ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಲಾರ್ಸೆನ್ ಆ್ಯಂಡ್ ಟೂಬ್ರೊ ಪ್ರಮುಖವಾಗಿ ಲಾಭ ಗಳಿಸಿದವು.
    ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ನೆಸ್ಲೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಟಾಟಾ ಮೋಟಾರ್ಸ್ ಷೇರುಗಳ ಬೆಲೆ ಕುಸಿದವು.

    “ಹೂಡಿಕೆದಾರರು ಚೌಕಾಶಿ ಅವಕಾಶಗಳನ್ನು ಪಡೆದಿರುವುದರಿಂದ ಮಿಡ್ ಮತ್ತು ಸ್ಮಾಲ್ ಕ್ಯಾಪ್​ಗಳ ವಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    ಬಿಎಸ್‌ಇ ಸ್ಮಾಲ್‌ಕ್ಯಾಪ್ ಗೇಜ್ ಶೇಕಡಾ 0.70 ಮತ್ತು ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.01 ರಷ್ಟು ಏರಿತು.
    ವಲಯವಾರು ಸೂಚ್ಯಂಕಗಳಲ್ಲಿ, ಸೇವೆಗಳು ಶೇಕಡಾ 1.01, ಬಂಡವಾಳ ಸರಕುಗಳು ಶೇಕಡಾ 1, ಗ್ರಾಹಕ ಬೆಲೆಬಾಳುವ ವಸ್ತುಗಳು (ಶೇ 0.98), ಕೈಗಾರಿಕೆಗಳು (ಶೇ 0.97) ಮತ್ತು ರಿಯಾಲ್ಟಿ (ಶೇ 0.93) ಏರಿಕೆ ದಾಖಲಿಸಿದವು.

    ಸರಕುಗಳು, ಐಟಿ, ಉಪಯುಕ್ತತೆಗಳು, ಲೋಹ ಮತ್ತು ಟೆಕ್ ಹಿನ್ನಡೆ ಕಂಡವು.

    ಏಷ್ಯಾ ಮಾರುಕಟ್ಟೆಗಳ ಪೈಕಿ, ಟೋಕಿಯೊ ಲಾಭ ಗಳಿಸಿದರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು. ಐರೋಪ್ಯ ಮಾರುಕಟ್ಟೆಗಳು ಮಿಶ್ರ ನೋಟಿನಲ್ಲಿ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಮಂಗಳವಾರ ನಕಾರಾತ್ಮಕವಾಗಿ ಕೊನೆಗೊಂಡಿತು.

    ವಿನಿಮಯ ಕೇಂದ್ರ ಮಾಹಿತಿಯ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 10.13 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರು.

    ಮಂಗಳವಾರ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 361.64 ಅಂಕಗಳು ಅಥವಾ 0.50 ರಷ್ಟು ಕುಸಿದು 72,470.30 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 92.05 ಅಂಕಗಳು ಅಥವಾ ಶೇಕಡಾ 0.42 ರಷ್ಟು ಕುಸಿದು 22,004.70 ಕ್ಕೆ ತಲುಪಿತ್ತು.

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಭಾರೀ ಬೇಡಿಕೆ: ಸ್ಟಾಕ್​ ಬೆಲೆ ಹೆಚ್ಚಳವಾಗಿದ್ದೇಕೆ?

    ಮಾರ್ಚ್​ 28ರಿಂದ 25 ಷೇರುಗಳಲ್ಲಿ ಟ್ರೇಡಿಂಗ್​ ವೈಖರಿ ಬದಲು : ಏನಿದು T+0 ಸೆಟಲ್‌ಮೆಂಟ್?

    ಜವಳಿ ಕಂಪನಿ ಷೇರು ಗಗನಕ್ಕೆ: 11 ರೂಪಾಯಿ ಸ್ಟಾಕ್​ ಒಂದೇ ದಿನದಲ್ಲಿ 18.75% ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts