More

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಭಾರೀ ಬೇಡಿಕೆ: ಸ್ಟಾಕ್​ ಬೆಲೆ ಹೆಚ್ಚಳವಾಗಿದ್ದೇಕೆ?

    ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳಿಗೆ ಬುಧವಾರ ಭಾರೀ ಬೇಡಿಕೆ ವ್ಯಕ್ತವಾಯಿತು. ಈ ಷೇರುಗಳ ಬೆಲೆ ಶೇಕಡಾ 4 ರಷ್ಟು ಏರಿಕೆಯಿತು. ಈ ಮೂಲಕ ಈ ಕಂಪನಿಯ ಮಾರುಕಟ್ಟೆ ಮೌಲ್ಯವು ಮತ್ತೆ ಐತಿಹಾಸಿಕ 20 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿತು.

    ಈ ಷೇರು ಬೆಲೆ 3.60 ಪ್ರತಿಶತದಷ್ಟು ಜಿಗಿದು ಬಿಎಸ್‌ಇಯಲ್ಲಿ 2,987.85 ರೂ. ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಶೇಕಡಾ 4 ರಷ್ಟು ಹೆಚ್ಚಳವಾಗಿ 2,999.90 ರೂ. ತಲುಪಿತ್ತು.

    ಬುಧವಾರ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು (ಎಂಕ್ಯಾಪ್) ರೂ 70,039.26 ಕೋಟಿಗಳಷ್ಟು ಜಿಗಿದು ರೂ 20,21,486.59 ಕೋಟಿಗೆ ತಲುಪಿದೆ.

    ಈ ಕಂಪನಿಯ 4.71 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ ಮತ್ತು 81.63 ಲಕ್ಷ ಷೇರುಗಳು ಎನ್‌ಎಸ್‌ಇಯಲ್ಲಿ ದಿನದ ವಹಿವಾಟಿನಲ್ಲಿ ವ್ಯಾಪಾರವಾಗಿವೆ. ಈ ಸ್ಟಾಕ್‌ನಲ್ಲಿನ ಏರಿಕೆಯು ಮಾರುಕಟ್ಟೆಯ ಸೂಚ್ಯಂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

    “ಕಚ್ಚಾ ತೈಲ ಬೆಲೆಯಲ್ಲಿನ ಕುಸಿತದಿಂದಾಗಿ ಈ ಉದ್ಯಮದಲ್ಲಿನ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇತರ ಇಂಧನ ಷೇರುಗಳ ಬೆಲೆ ಹೆಚ್ಚಳವಾಗಿದೆ” ಎಂದು ಸ್ಟಾಕ್ಸ್‌ಬಾಕ್ಸ್‌ನ ತಾಂತ್ರಿಕ ಮತ್ತು ಉತ್ಪನ್ನಗಳ ವಿಶ್ಲೇಷಕ ಅವಧತ್ ಬಗ್ಕರ್ ಹೇಳಿದ್ದಾರೆ.

    ಈ ವರ್ಷದ ಫೆಬ್ರವರಿ 13 ರಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಕಂಪನಿಯು ರೂ. 20 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಸಾಧಿಸಿದ ಮೊದಲ ಭಾರತೀಯ ಕಂಪನಿಯಾಗಿ ಹೊರಹೊಮ್ಮಿತ್ತು.

    ಕಂಪನಿಯು ಈ ಮಾರುಕಟ್ಟೆ ಮೌಲ್ಯಮಾಪನದ ಮೂಲಕ ಅತ್ಯಂತ ಮೌಲ್ಯಯುತವಾದ ದೇಶೀಯ ಕಂಪನಿಯಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ರೂ. 13,88,441.09 ಕೋಟಿ), ಎಚ್‌ಡಿಎಫ್‌ಸಿ ಬ್ಯಾಂಕ್ (ರೂ. 10,94,486.92 ಕೋಟಿ), ಐಸಿಐಸಿಐ ಬ್ಯಾಂಕ್ (7,61,126.88 ಕೋಟಿ) ಮತ್ತು ಭಾರ್ತಿ ಏರ್‌ಟೆಲ್ (ರೂ. 6,9280. ಕೋಟಿ) ಇವು ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ ಅಗ್ರ ಐದು ಕಂಪನಿಗಳಾಗಿವೆ. ಈ ವರ್ಷ ಇಲ್ಲಿಯವರೆಗೆ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಶೇ. 15.59ರಷ್ಟು ಹೆಚ್ಚಾಗಿದೆ.

     

    ಮಾರ್ಚ್​ 28ರಿಂದ 25 ಷೇರುಗಳಲ್ಲಿ ಟ್ರೇಡಿಂಗ್​ ವೈಖರಿ ಬದಲು : ಏನಿದು T+0 ಸೆಟಲ್‌ಮೆಂಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts