More

    ಮತ್ತೊಂದು ಸಾಲ ಮರುಪಾವತಿ ಮಾಡಿದ ರಿಲಯನ್ಸ್ ಪವರ್​: ಷೇರು ಬೆಲೆ 8 ದಿನಗಳಲ್ಲಿ 35% ಹೆಚ್ಚಳ; ಇನ್ನಷ್ಟು ಏರುತ್ತದೆ ಎನ್ನುತ್ತಾರೆ ತಜ್ಞರು

    ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಅನಿಲ್ ಅಂಬಾನಿ ಕಂಪನಿ ರಿಲಯನ್ಸ್ ಪವರ್ ಸಾಲ ಮರುಪಾವತಿಗೆ ಒತ್ತು ನೀಡುತ್ತಿದೆ. ಈ ಸರಣಿಯಲ್ಲಿ ಕಂಪನಿಯು ಈಗ 1,023 ಕೋಟಿ ರೂಪಾಯಿ ಸಾಲವನ್ನು ಮರುಪಾವತಿ ಮಾಡಿದೆ. ರಿಲಯನ್ಸ್ ಪವರ್‌ನ ಅಂಗಸಂಸ್ಥೆಗಳಾದ ಕಲೈ ಪವರ್ ಮತ್ತು ರಿಲಯನ್ಸ್ ಕ್ಲೀನ್​ಜೆನ್​, ಆರ್‌ಸಿಎಫ್‌ಎಲ್‌ಗೆ 1,023 ಕೋಟಿ ರೂಪಾಯಿ ಸಾಲವನ್ನು ಮರುಪಾವತಿಸಿವೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ರಿಲಯನ್ಸ್ ಪವರ್​ ಕಂಪನಿ ತಿಳಿಸಿದೆ.

    ರಿಲಯನ್ಸ್ ಪವರ್ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ 45 ಮೆಗಾ ವ್ಯಾಟ್ ಪವನ ಶಕ್ತಿ ಯೋಜನೆಯನ್ನು ರೂ. 132 ಕೋಟಿಗೆ ಜೆಎಸ್‌ಡಬ್ಲ್ಯೂ ರಿನ್ಯೂವಬಲ್​ ಎನರ್ಜಿಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿತ್ತು. ನಂತರ ರಿಲಯನ್ಸ್ ಪವರ್ ತನ್ನ ಸಾಲವನ್ನು ಮರುಪಾವತಿಸಲು ಮಾರಾಟದಿಂದ ಬಂದ ಈ ಹಣವನ್ನು ಬಳಸುವುದಾಗಿ ಹೇಳಿತ್ತು, ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಾಲ ಮುಕ್ತವಾಗುವ ಗುರಿಯನ್ನು ಕಂಪನಿ ಹೊಂದಿದೆ. ರಿಲಯನ್ಸ್ ಪವರ್ ಕಳೆದ ಮೂರು ತಿಂಗಳಲ್ಲಿ ಮೂರು ಬ್ಯಾಂಕ್‌ಗಳಾದ ಡಿಬಿಎಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳಿಗೆ ತನ್ನ ಬಾಕಿಯನ್ನು ಪಾವತಿಸಿದೆ.

    ಷೇರುಗಳಲ್ಲಿ ಏರಿಕೆ:

    ಸಾಲ ಮರುಪಾವತಿಯ ಸುದ್ದಿಯ ಪರಿಣಾಮ ಕಂಪನಿಯ ಷೇರುಗಳ ಮೇಲೂ ಗೋಚರಿಸಿದೆ. ವಾಸ್ತವವಾಗಿ, ರಿಲಯನ್ಸ್ ಪವರ್ ಷೇರುಗಳ ಬೆಲೆ ಹಲವಾರು ದಿನಗಳಿಂದ ಏರುತ್ತಿದೆ. ಕಳೆದ ವಾರ, ಮಂಗಳವಾರ ಹೊರತುಪಡಿಸಿ, ಎಲ್ಲಾ ವಹಿವಾಟಿನ ದಿನಗಳಲ್ಲಿ ರಿಲಯನ್ಸ್ ಪವರ್ ಷೇರುಗಳು ಅಪ್ಪರ್ ಸರ್ಕ್ಯೂಟ್‌ ಹಿಟ್​ ಅಗಿದ್ದವು. ಮಾರ್ಚ್ 27 ರ ಬುಧವಾರದ ವಹಿವಾಟಿನಲ್ಲಿ, ರಿಲಯನ್ಸ್ ಪವರ್ ಷೇರುಗಳ ಬೆಲೆ ಇಂಟ್ರಾ ಡೇ ವಹಿವಾಟಿನಲ್ಲಿ 2 ಶೇಕಡಾ ಏರಿಕೆಯಾಗಿ 28.55 ರೂ. ತಲುಪಿತ್ತು. ಕಳೆದ ಎಂಟು ಸತತ ಸೆಷನ್‌ಗಳಲ್ಲಿ ರಿಲಯನ್ಸ್ ಪವರ್ ಷೇರುಗಳ ಬೆಲೆ ಎನ್‌ಎಸ್‌ಇಯಲ್ಲಿ ರೂ. 20.40 ರಿಂದ ರೂ. 28 ಕ್ಕೆ ಏರಿದೆ. ಇದು ಶೇಕಡಾ 35ರಷ್ಟು ಹೆಚ್ಚಳವಾಗಿದೆ.

    ತಜ್ಞರು ಏನು ಹೇಳುತ್ತಾರೆ?:

    ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ರಿಲಯನ್ಸ್ ಪವರ್ ಹೂಡಿಕೆದಾರರು ಸ್ಟಾಪ್ ಲಾಸ್ ಅನ್ನು ರೂ. 22 ನಲ್ಲಿ ಕಾಯ್ದುಕೊಳ್ಳುವ ಮೂಲಕ ಷೇರುಗಳನ್ನು ಹಿಡಿದಿಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಈ ಷೇರು ರೂ. 30 ರ ಬ್ರೇಕ್‌ಔಟ್ ದಾಟಿದರೆ ರೂ. 34 ಕ್ಕೆ ಏರಬಹುದು. ರಿಲಯನ್ಸ್ ಪವರ್ ಷೇರುಗಳನ್ನು ಪೋರ್ಟ್ ಫೋಲಿಯೊದಲ್ಲಿ ಇಟ್ಟುಕೊಳ್ಳುವುದು ಸೂಕ್ತ ಎಂದು ಚಾಯ್ಸ್ ಬ್ರೋಕಿಂಗ್ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಹೇಳಿದ್ದಾರೆ.

    ಜನವರಿ 8, 2024 ರಂದು ಈ ಷೇರು 52 ವಾರಗಳ ಗರಿಷ್ಠ ಬೆಲೆ ರೂ 33.10 ಕ್ಕೆ ತಲುಪಿತ್ತು. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 499.74 ಮತ್ತು ಕನಿಷ್ಠ ಬೆಲೆ ರೂ. 1 ಇದೆ.

    ಸಾಲ ಕಡಿತದ ಚರ್ಚೆಯಿಂದಾಗಿ ರಿಲಯನ್ಸ್ ಪವರ್‌ನ ಷೇರು ಬೆಲೆ ಹೆಚ್ಚಾಗುತ್ತಿದೆ. ರಿಲಯನ್ಸ್ ಪವರ್ ಷೇರುಗಳ ಏರಿಕೆಗೆ ಸ್ವಲ್ಪ ಕ್ರೆಡಿಟ್ ಅನ್ನು ಬಂಡವಾಳ ಹೂಡಿಕೆ ಸುದ್ದಿಗಳಿಗೂ ನೀಡಬಹುದು. ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ನ ಬಂಡವಾಳದ ಒಳಹರಿವು ಮತ್ತು ಹೂಡಿಕೆಯ ಪ್ರಸ್ತಾಪಗಳಿಂದ ಸ್ಟಾಕ್ ಬೆಂಬಲವನ್ನು ಪಡೆಯುತ್ತಿದೆ ಎಂದು ಸ್ಟಾಕ್‌ಬಾಕ್ಸ್‌ನ ಸಂಶೋಧನಾ ವಿಶ್ಲೇಷಕ ಪಾರ್ಥಶಾ ಹೇಳುತ್ತಾರೆ.

     

    ಹೂಡಿಕೆದಾರರಿಗೆ ಸುವರ್ಣಾವಕಾಶ: ಟಾಟಾ ಗ್ರೂಪ್​ನಿಂದ ಬರಲಿವೆ 8 ಕಂಪನಿಗಳ ಐಪಿಒ

    ರೂ. 4,101 ಕೋಟಿ ಬಿಡ್ ಮೂಲಕ ಪವರ್​ ಕಂಪನಿ ಸ್ವಾಧೀನ: ಅದಾನಿ ಕಂಪನಿ ಷೇರು ಬೆಲೆ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts