More

    ರೂ. 4,101 ಕೋಟಿ ಬಿಡ್ ಮೂಲಕ ಪವರ್​ ಕಂಪನಿ ಸ್ವಾಧೀನ: ಅದಾನಿ ಕಂಪನಿ ಷೇರು ಬೆಲೆ ಜಿಗಿತ

    ಮುಂಬೈ: ಲ್ಯಾಂಕೋ ಅಮರಕಂಟಕ್ ಪವರ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಸಿಸಿಐ (ಕಾಂಪೀಟೇಶನ್​ ಕಮೀಷನ್​ ಆಫ್​ ಇಂಡಿಯಾ) ನಿಂದ ಅನುಮೋದನೆ ಪಡೆದ ನಂತರ ಬುಧವಾರ ಬೆಳಗ್ಗೆ ಅದಾನಿ ಪವರ್ ಷೇರುಗಳ ಬೆಲೆ ಏರಿಕೆ ಕಾಣುತ್ತಿದೆ. ಆರಂಭಿಕ ವಹಿವಾಟಿನಲ್ಲಿ ಈ ಷೇರು ಬೆಲೆ ಶೇ. 4ರಷ್ಟು ಏರಿಕೆಯಾಗಿ 543 ರೂ.ಗೆ ತಲುಪಿದೆ.

    ಅದಾನಿ ಪವರ್‌ ಷೇರಿನ 52 ವಾರಗಳ ಗರಿಷ್ಠ ಬೆಲೆ 589.45 ರೂ. ಮತ್ತು ಕನಿಷ್ಠ ಬೆಲೆ 166.40 ರೂ. ಇದೆ.

    ಕಳೆದ ಐದು ದಿನಗಳಲ್ಲಿ ಅದಾನಿ ಪವರ್ ಷೇರು ಬೆಲೆ ಶೇ. 5ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಕಳೆದ ಆರು ತಿಂಗಳಲ್ಲಿ ಶೇಕಡಾ 43 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಅಂದಾಜು ಮೂರು ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಸುಮಾರು 194 ಪ್ರತಿಶತದಷ್ಟು ಜಿಗಿತ ಕಂಡುಬಂದಿದೆ.

    ದಿವಾಳಿ ಪ್ರಕ್ರಿಯೆಯ ಮೂಲಕ ಸಾಗುತ್ತಿರುವ ಲ್ಯಾಂಕೋ ಅಮರಕಂಟಕ್ ಪವರ್, ಲ್ಯಾಂಕೋ ಗ್ರೂಪ್‌ನ ಒಂದು ಭಾಗವಾಗಿದೆ. ಇದು ಭಾರತದಲ್ಲಿ ಉಷ್ಣ ವಿದ್ಯುತ್ ಉತ್ಪಾದನೆಯ ವ್ಯವಹಾರದಲ್ಲಿದೆ. ಲ್ಯಾಂಕೊ ಅಮರಕಂಟಕ್ ಪವರ್ ಪ್ರಸ್ತುತ ದಿವಾಳಿತನ ಮತ್ತು ದಿವಾಳಿತನ ಸಂಹಿತೆ, 2016 (IBC) ಅಡಿಯಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿದೆ. ಅದಾನಿ ಪವರ್ ಲಿಮಿಟೆಡ್ ಲ್ಯಾಂಕೋ ಅಮರಕಂಟಕ್ ಪವರ್‌ನ 100 ಪ್ರತಿಶತ ಈಕ್ವಿಟಿ ಷೇರು ಬಂಡವಾಳವನ್ನು ಸ್ವಾಧೀನಪಡಿಸಿಕೊಳ್ಳಲಿದೆ.

    ಸಿಸಿಐ ಪ್ರಕಾರ ಪ್ರಸ್ತಾವಿತ ವಹಿವಾಟು ಭಾರತದಲ್ಲಿ ಯಾವುದೇ ಸಂಭಾವ್ಯ ಸಂಬಂಧಿತ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಅದಾನಿ ಪವರ್ ಮೊದಲು ಸಾಲಗಾರರ ಸಮಿತಿಯು ದಿವಾಳಿಯಾದ ಲ್ಯಾಂಕೊ ಅಮರಕಂಟಕ್ ಪವರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ರೆಸಲ್ಯೂಶನ್ ಯೋಜನೆಯನ್ನು ಅನುಮೋದಿಸಿತ್ತು.

    ಸಾಲದ ಸುಳಿಗೆ ಸಿಲುಕಿರುವ ಕಂಪನಿಗೆ ಅದಾನಿ ಪವರ್ ರೂ. 4,101 ಕೋಟಿ ಮೌಲ್ಯದ ಬಿಡ್ ಅನ್ನು ಗೆದ್ದಿದೆ ಎಂದು ವರದಿಯಾಗಿದೆ. ಲ್ಯಾಂಕೊ ಅಮರಕಂಟಕ್ ಛತ್ತೀಸ್‌ಗಢದಲ್ಲಿ ತಲಾ 300-300 ಮೆಗಾ ವ್ಯಾಟ್‌ನ ಎರಡು ಉಷ್ಣ ವಿದ್ಯುತ್ ಘಟಕಗಳನ್ನು ಹೊಂದಿದೆ. ಈ ಒಪ್ಪಂದವು ಅದಾನಿ ಪವರ್ ಸಾಮರ್ಥ್ಯವನ್ನು ವಿಸ್ತರಿಸುತ್ತದೆ.

    ಮುಖೇಶ್​ ಅಂಬಾನಿ ಭಾರತದ ನಂ.1 ಶ್ರೀಮಂತ: ಕುಬೇರರ ಪಟ್ಟಿಯಲ್ಲಿ ಚೀನಾದ ಬೀಜಿಂಗ್​ ಹಿಂದಿಕ್ಕಿದ ಮುಂಬೈ

    ಸಚಿನ್​ ತೆಂಡೂಲ್ಕರ್ ಬೆಂಬಲಿತ ಆರ್​ಆರ್​ಪಿ ಎಲೆಕ್ಟ್ರಾನಿಕ್ಸ್: ಚಿಪ್ ಸೌಲಭ್ಯಕ್ಕಾಗಿ ರೂ. 5,000 ಕೋಟಿ ಹೂಡಿಕೆ

    ಒಂದೇ ವರ್ಷದಲ್ಲಿ 302% ಹೆಚ್ಚಳ ಕಂಡ ರೈಲ್ವೆ ಕಂಪನಿ ಷೇರುಗಳು: ಈಗ ಮತ್ತೆ ಜಿಗಿತ ಕಂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts