More

    ಮುಖೇಶ್​ ಅಂಬಾನಿ ಭಾರತದ ನಂ.1 ಶ್ರೀಮಂತ: ಕುಬೇರರ ಪಟ್ಟಿಯಲ್ಲಿ ಚೀನಾದ ಬೀಜಿಂಗ್​ ಹಿಂದಿಕ್ಕಿದ ಮುಂಬೈ

    ನವದೆಹಲಿ: ಹುರುನ್ ಶ್ರೀಮಂತರ ಪಟ್ಟಿ: ಟಾಪ್ 10ರಲ್ಲಿ ಮುಖೇಶ್ ಅಂಬಾನಿ, ಅದಾನಿ ಸಂಪತ್ತು ಕೂಡ ಹೆಚ್ಚಿದೆ, ಮುಂಬೈ ಕೋಟ್ಯಾಧಿಪತಿಗಳ ಭದ್ರಕೋಟೆಯಾಗಿದೆ.ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಿಲಿಯನೇರ್‌ಗಳ (ಶತಕೋಟ್ಯಧೀಶರ) ಸಂಖ್ಯೆಯಲ್ಲಿ ಚೀನಾದ ಬೀಜಿಂಗ್‌ಗಿಂತ ಹಿಂದೆ ಬಿದ್ದಿದೆ. ವಿಶ್ವದ ಅತಿ ಹೆಚ್ಚು ಕೋಟ್ಯಾಧಿಪತಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ.
    ಹುರುನ್ ಶ್ರೀಮಂತರ ಪಟ್ಟಿ:

    ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. ಅವರು ಜಾಗತಿಕವಾಗಿ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ, ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 115 ಶತಕೋಟಿ ಡಾಲರ್​ ನಿವ್ವಳ ಮೌಲ್ಯದೊಂದಿಗೆ ಶ್ರೀಮಂತ ಭಾರತೀಯರಾಗಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಎಂದು ಹುರುನ್ ವರದಿ ಮಾಡಿದೆ.

    ಅಂಬಾನಿ ಅವರ ಸಂಪತ್ತು ಕಳೆದ ವರ್ಷ 40 ಪ್ರತಿಶತ ಅಥವಾ 33 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ.

    ಹಿಂಡೆನ್‌ಬರ್ಗ್ ವರದಿಯ ನಂತರ ಉಂಟಾದ ನಷ್ಟವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳುವಲ್ಲಿ ಗೌತಮ್ ಅದಾನಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಕಳೆದ ವರ್ಷ ಅವರ ಒಟ್ಟು ಸಂಪತ್ತು ಶೇಕಡಾ 62 ರಷ್ಟು ಹೆಚ್ಚಾಗಿದೆ. ಗೌತಮ್ ಅದಾನಿ ಹುರುನ್​ ಪಟ್ಟಿಯಲ್ಲಿ ಜಾಗತಿಕವಾಗಿ 15 ನೇ ಸ್ಥಾನದಲ್ಲಿದ್ದಾರೆ.

    ಜಾಗತಿಕ ಬಿಲಿಯನೇರ್‌ಗಳಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು 231 ಶತಕೋಟಿ ಡಾಲರ್​ ಮೌಲ್ಯದ ಸಂಪತ್ತಿನೊಂದಿಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

    ಬೀಜಿಂಗ್ ಹಿಂದಿಕ್ಕಿದ ಮುಂಬೈ:

    ಬಿಲಿಯನೇರ್‌ಗಳ (ಶತಕೋಟ್ಯಧೀಶರ) ಸಂಖ್ಯೆಯಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ಮಹಾನಗರವು ಚೀನಾದ ಬೀಜಿಂಗ್ ಅನ್ನು ಹಿಂದಿಕ್ಕಿದೆ. ವಿಶ್ವದ ಅತಿ ಹೆಚ್ಚು ಶತಕೋಟ್ಯಧಿಪತಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

    ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ, ಮುಂಬೈ ಒಟ್ಟು 92 ಬಿಲಿಯನೇರ್‌ಗಳಿಗೆ ನೆಲೆಯಾಗಿದೆ, ಆದರೆ, ಬೀಜಿಂಗ್‌ನಲ್ಲಿ ಈ ಸಂಖ್ಯೆ 91 ಆಗಿದೆ. ಪಟ್ಟಿಯ ಪ್ರಕಾರ, ಭಾರತದಲ್ಲಿ 271 ಬಿಲಿಯನೇರ್‌ಗಳಿದ್ದರೆ, ಚೀನಾದಲ್ಲಿ ಈ ಸಂಖ್ಯೆ 814 ಆಗಿದೆ. ಹೊಸ ಬಿಲಿಯನೇರ್‌ಗಳ ವಿಷಯದಲ್ಲಿ ಭಾರತವೂ ಚೀನಾವನ್ನು ಹಿಂದೆ ಹಾಕಿದೆ ಎಂದು ವರದಿ ಹೇಳಿದೆ. ಭಾರತದಿಂದ 94 ಹೊಸ ಹೆಸರುಗಳು ಪಟ್ಟಿಯಲ್ಲಿವೆ ಸೇರ್ಪಡೆಗೊಂಡಿದ್ದರೆ, ಚೀನಾದಿಂದ 55 ಹೊಸ ಹೆಸರುಗಳು ಸೇರಿಕೊಂಡಿವೆ.

    ಈ ಪಟ್ಟಿಯ ಪ್ರಕಾರ, ಜಾಗತಿಕವಾಗಿ ಅಗ್ರ 10 ಬಿಲಿಯನೇರ್‌ಗಳ ಸಂಪತ್ತು ಈ ರೀತಿ ಇದೆ.
    1. ಎಲೋನ್ ಮಸ್ಕ್ (231 ಬಿಲಿಯನ್ ಡಾಲರ್​)
    2. ಜೆಫ್ ಬೆಜೋಸ್ (185 ಬಿಲಿಯನ್ ಡಾಲರ್​)
    3. ಬರ್ನಾರ್ಡ್ ಅರ್ನಾಲ್ಟ್ (175 ಬಿಲಿಯನ್ ಡಾಲರ್​)
    4. ಮಾರ್ಕ್ ಜುಕರ್‌ಬರ್ಗ್ (158 ಬಿಲಿಯನ್ ಡಾಲರ್​)
    5. ಲ್ಯಾರಿ ಎಲಿಸನ್ (144 ಬಿಲಿಯನ್ ಡಾಲರ್​)
    6. ವಾರೆನ್ ಬಫೆಟ್ (144 ಬಿಲಿಯನ್ ಡಾಲರ್​)
    7. ಸ್ಟೀವ್ ಬಾಲ್ಮರ್ (143 ಬಿಲಿಯನ್ ಡಾಲರ್​)
    8. ಬಿಲ್ ಗೇಟ್ಸ್ (138 ಬಿಲಿಯನ್ ಡಾಲರ್​)
    9. ಲ್ಯಾರಿ ಪೇಜ್ (123 ಬಿಲಿಯನ್ ಡಾಲರ್​)
    10. ಮುಖೇಶ್ ಅಂಬಾನಿ (115 ಬಿಲಿಯನ್​ ಡಾಲರ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts