More

    ಎರಡು ಘಟಕಗಳಾಗಿ ಟಾಟಾ ಮೋಟಾರ್ಸ್ ಕಂಪನಿ ಶೀಘ್ರದಲ್ಲೇ ವಿಭಜನೆ: ಸ್ಟಾಕ್ ಟಾರ್ಗೆಟ್​ ಪ್ರೈಸ್ ಹೆಚ್ಚಿಸಿದ ಬ್ರೋಕರೇಜ್ ಸಂಸ್ಥೆ

    ಮುಂಬೈ: ಮಂಗಳವಾರದ ಮಾರುಕಟ್ಟೆಯಲ್ಲಿ ಏರಿಳಿತಗಳ ನಡುವೆಯೂ ಟಾಟಾ ಗ್ರೂಪ್‌ನ 79 ವರ್ಷದ ಆಟೋ ವಲಯದ ದೈತ್ಯ ಟಾಟಾ ಮೋಟಾರ್ಸ್ ಷೇರು ಬೆಲೆ 1,000 ರೂಪಾಯಿ ಬಳಿ ಸಮೀಪಿಸಿತು. ಟಾಟಾ ಮೋಟಾರ್ಸ್ ಲಿಮಿಟೆಡ್ ಷೇರುಗಳ ಬೆಲೆ ಬುಧವಾರ ಇಂಟ್ರಾ ಡೇ ವಹಿವಾಟಿನಲ್ಲಿ 995 ರೂಪಾಯಿ ಮುಟ್ಟಿತ್ತು. ಅಂತಿಮವಾಗಿ 980 ರೂಪಾಯಿ ತಲುಪಿತು.

    ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಸಿಎಲ್​ಎಸ್​ಇ ಈ ಕಂಪನಿಯ ಷೇರನ್ನು 1,133 ರೂ ಗುರಿ ಬೆಲೆಯೊಂದಿಗೆ (ಟಾರ್ಗೆಟ್​ ಪ್ರೈಸ್​) ಖರೀದಿಸಲು ಶಿಫಾರಸು ಮಾಡಿದೆ. ಈ ಷೇರು ಉತ್ತಮ ಪ್ರದರ್ಶನವನ್ನು ಮುಂದುವರಿಸುವ ನಿರೀಕ್ಷೆ ಇದೆ ಎಂದು ಅದು ಹೇಳಿದೆ.

    ಬ್ರೋಕರೇಜ್ ಉಲ್ಲೇಖಿಸಿದ ಗುರಿ ಬೆಲೆ ಪ್ರಕಾರ, ಟಾಟಾ ಮೋಟಾರ್ಸ್‌ನಲ್ಲಿ ಅದರ ಪ್ರಸ್ತುತ ಬೆಲೆಗಿಂತ 15% ನಷ್ಟು ಸಾಮರ್ಥ್ಯವಿದೆ. ಈ ಕಂಪನಿಯು ತನ್ನ ವ್ಯವಹಾರವನ್ನು ಎರಡು ಪಟ್ಟಿ ಮಾಡಲಾದ ಘಟಕಗಳಾಗಿ ವಿಭಜಿಸಲು ಯೋಜಿಸುತ್ತಿದೆ.

    ಟಾಟಾ ಮೋಟಾರ್ಸ್ ಮಾರುಕಟ್ಟೆ ಮೌಲ್ಯ 3,27,689.23 ಕೋಟಿ ರೂ. ಇದೆ. ಈ ಷೇರು ಪ್ರಸ್ತುತ ತನ್ನ ಸಾರ್ವಕಾಲಿಕ ಗರಿಷ್ಠವಾದ ರೂ 1,065.60 ರ ಸಮೀಪದಲ್ಲಿದೆ. ಇದು 52 ವಾರಗಳ ಕನಿಷ್ಠ ಬೆಲೆಯಾದ ರೂ 400.40 ರಿಂದ 146.26% ಹೆಚ್ಚಾಗಿದೆ.

    ಟಾಟಾ ಮೋಟಾರ್ಸ್‌ನ ಲಾಭವು ಹೆಚ್ಚಾಗಲಿದೆ ಎಂದು ಸಿಎಲ್​ಎಸ್​ಎ ನಿರೀಕ್ಷಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರ ಐಷಾರಾಮಿ ಕಾರ್ ಬ್ರಾಂಡ್ ಜಾಗ್ವಾರ್ ಲ್ಯಾಂಡ್ ರೋವರ್ 2024 ರ ಜನವರಿ ಮತ್ತು ಫೆಬ್ರವರಿ ನಡುವೆ ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ 10% ಬೆಳವಣಿಗೆಯನ್ನು ದಾಖಲಿಸಿದೆ.

    ದೇಶೀಯ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಮಾರುಕಟ್ಟೆ ಪಾಲನ್ನು ಹೆಚ್ಚಾಗುವುದೆಂದು ಬ್ರೋಕರೇಜ್ ನಿರೀಕ್ಷಿಸುತ್ತದೆ. ಹೀಗಾಗಿ, ತನ್ನ ‘ಔಟ್‌ಪರ್‌ಫಾರ್ಮ್’ ರೇಟಿಂಗ್ ಅನ್ನು ಉಳಿಸಿಕೊಂಡು ಟಾಟಾ ಮೋಟಾರ್ಸ್ ಅನ್ನು ರೂ 1133 ಗುರಿಗೆ ಖರೀದಿಸಲು ಅದು ಸಲಹೆ ನೀಡಿದೆ.

    ಬ್ರಿಟನ್ನಿನ ಸೊಸೈಟಿ ಆಫ್ ಮೋಟಾರ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಟ್ರೇಡರ್ಸ್ (SMMT) ಯ ಇತ್ತೀಚಿನ ಮಾಹಿತಿಯ ಪ್ರಕಾರ, ಬ್ರಿಟನ್ನಿನಲ್ಲಿ ಒಟ್ಟು ಹೊಸ ಕಾರು ನೋಂದಣಿಗಳು ಫೆಬ್ರವರಿಯಲ್ಲಿ 84,886 ಯುನಿಟ್‌ಗಳಿಗೆ ವರ್ಷದಿಂದ ವರ್ಷಕ್ಕೆ 14% ಏರಿಕೆಯಾಗಿದೆ. 2024 ರ ಮೊದಲ ಎರಡು ತಿಂಗಳುಗಳಲ್ಲಿ ಹೊಸ ಕಾರು ನೋಂದಣಿಗಳು ವರ್ಷದಿಂದ ವರ್ಷಕ್ಕೆ 10.3% ರಷ್ಟು 227,762 ಯುನಿಟ್‌ಗಳಿಗೆ ಏರಿಕೆಯಾಗಿದೆ. ಒಟ್ಟಾರೆಯಾಗಿ, ಟಾಟಾ ಮೋಟಾರ್ಸ್‌ನ ಐಷಾರಾಮಿ ಬ್ರಾಂಡ್ ಜಾಗ್ವಾರ್ ಬ್ರಿಟನ್ನಿನಲ್ಲಿ ಹೊಸ ಕಾರು ನೋಂದಣಿಯಲ್ಲಿ 136.54% ರಷ್ಟು ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ. 738 ಯುನಿಟ್‌ಗಳನ್ನು ತಲುಪಿದೆ, ಆದರೆ, ಅದರ ಲ್ಯಾಂಡ್ ರೋವರ್ ಫೆಬ್ರವರಿ 2024 ರಲ್ಲಿ 11.71% ರಷ್ಟು ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿದೆ, ಇದು 1,517 ಯುನಿಟ್‌ಗಳನ್ನು ತಲುಪಿದೆ.

    ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ದೇಶೀಯ ಮಾರುಕಟ್ಟೆಗಳಲ್ಲಿ ಕ್ರಮವಾಗಿ 54.63% ವರ್ಷ ಮತ್ತು 36.4% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿವೆ.

    ವಾಣಿಜ್ಯ ವಾಹನ ವ್ಯಾಪಾರ ಒಂದು ಘಟಕವಾಗಿ ಹಾಗೂ ಪ್ಯಾಸೆಂಜರ್ ವೆಹಿಕಲ್​, ಎಲೆಕ್ಟ್ರಿಕ್​ ವೆಹಿಕಲ್​, ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ಪ್ರಯಾಣಿಕ ವಾಹನ ವ್ಯಾಪಾರವನ್ನು ಇನ್ನೊಂದು ಘಟಕವಾಗಿ ವಿಭಜಿಸಲು ಟಾಟಾ ಗ್ರೂಪ್​ ಮುಂದಾಗಿದೆ. ಟಾಟಾ ಮೋಟಾರ್ಸ್​ ಕಂಪನಿಯನ್ನು ಎರಡು ಪ್ರತ್ಯೇಕ ಪಟ್ಟಿ ಮಾಡಲಾದ ಕಂಪನಿಗಳಾಗಿ ವಿಭಜಿಸಲು ಟಾಟಾ ಮೋಟಾರ್ಸ್ ಮಂಡಳಿಯು ಅನುಮೋದನೆ ನೀಡಿದೆ. ಈ ವಿಭಜನೆಯು ಏಪ್ರಿಲ್ ಮತ್ತು ಮೇ ನಡುವೆ ನಡೆಯುವ ಸಾಧ್ಯತೆಯಿದೆ.

    ಬ್ರೋಕರೇಜ್ ಸಂಸ್ಥೆಯಾದ ಮೋತಿಲಾಲ್ ಓಸ್ವಾಲ್, ಟಾಟಾ ಮೋಟಾರ್ಸ್‌ನ ಮೇಲೆ 1,000 ರೂ ಗುರಿಯ ಬೆಲೆಯೊಂದಿಗೆ ತಟಸ್ಥ ನಿಲುವನ್ನು ಇಟ್ಟುಕೊಂಡಿದ್ದರೆ, ಇನ್ನೆರಡು ಬ್ರೋಕರೇಜ್​ ಸಂಸ್ಥೆಗಳಾದ ಶೇರ್‌ಖಾನ್ ಮತ್ತು ಕೆಆರ್ ಚೋಕ್ಸಿ ಕ್ರಮವಾಗಿ ರೂ 1,188 ಮತ್ತು ರೂ 1,178 ಗುರಿ ಬೆಲೆಯನ್ನು ನಿಗದಿಪಡಿಸಿದೆ.

    ಬ್ಯಾಂಕಿಂಗ್, ಆಟೋ, ತೈಲ ಸ್ಟಾಕ್​ಗಳ ಖರೀದಿ ಜೋರು: ಷೇರು ಸೂಚ್ಯಂಕ ಸಾಕಷ್ಟು ಏರಿಕೆ

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಭಾರೀ ಬೇಡಿಕೆ: ಸ್ಟಾಕ್​ ಬೆಲೆ ಹೆಚ್ಚಳವಾಗಿದ್ದೇಕೆ?

    ಮಾರ್ಚ್​ 28ರಿಂದ 25 ಷೇರುಗಳಲ್ಲಿ ಟ್ರೇಡಿಂಗ್​ ವೈಖರಿ ಬದಲು : ಏನಿದು T+0 ಸೆಟಲ್‌ಮೆಂಟ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts