More

    ರಾಕೆಟ್​ನಂತೆ ಜಿಗಿದ ವಿಐಪಿ ಷೇರು ಬೆಲೆ: ಒಂದೇ ದಿನದಲ್ಲಿ 15% ಹೆಚ್ಚಳ ಆಗಿದ್ದೇಕೆ?

    ಮುಂಬೈ: ವಿಐಪಿ ಇಂಡಸ್ಟ್ರೀಸ್ ಷೇರುಗಳಿಗೆ ರಾಕೆಟ್ ವೇಗ ದೊರೆತಿದೆ. ಕಂಪನಿಯ ಷೇರುಗಳ ಬೆಲೆ ಗುರುವಾರ ಶೇ. 15 ಕ್ಕಿಂತ ಹೆಚ್ಚು ಏರಿಕೆ ಕಂಡು 539.40 ರೂ.ಗೆ ತಲುಪಿತ್ತು. ಆಗಸ್ಟ್ 12, 2021 ರ ನಂತರದ ಒಂದು ದಿನದಲ್ಲಿ ವಿಐಪಿ ಇಂಡಸ್ಟ್ರೀಸ್ ಷೇರುಗಳಲ್ಲಿ ಇದು ಅತಿದೊಡ್ಡ ಹೆಚ್ಚಳವಾಗಿದೆ. ಆಗಸ್ಟ್ 12, 2021 ರಂದು, ಈ ಕಂಪನಿಯ ಷೇರುಗಳ ಬೆಲೆ 20% ರಷ್ಟು ಹೆಚ್ಚಾಗಿತ್ತು.

    ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 722.70 ಹಾಗೂ ಕನಿಷ್ಠ ಬೆಲೆ 449.40 ರೂ. ಆಗಿದೆ.

    ಕಂಪನಿಯು ವ್ಯವಹಾರದ ಬಗ್ಗೆ ದೊಡ್ಡ ನವೀಕರಣವನ್ನು ನೀಡಿದೆ. ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಿಂದ ಎರಡಂಕಿಯ ಆದಾಯದ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡಿದೆ ಎಂದು ವಿಐಪಿ ಇಂಡಸ್ಟ್ರೀಸ್ ಬುಧವಾರ ವಿಶ್ಲೇಷಕರ ಸಭೆಯಲ್ಲಿ ತಿಳಿಸಿದೆ. ಅಲ್ಲದೆ, 2025 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ ಕಂಪನಿಯು ಶೇಕಡಾ 15 ರಷ್ಟು ಲಾಭ ಸಾಧಿಸಲು ಬಯಸುತ್ತದೆ. ವಿಐಪಿ ಇಂಡಸ್ಟ್ರೀಸ್ ಆಡಳಿತವು ಗೋದಾಮು, ಸರಕು ಸಾಗಣೆ ಮತ್ತು ಇ-ಕಾಮರ್ಸ್ ಮೇಲಿನ ಹೆಚ್ಚಿದ ವೆಚ್ಚಗಳು ಸ್ಥಿರಗೊಂಡ ನಂತರ, ಲಾಭ ಪ್ರಮಾಣ ಸುಧಾರಿಸುತ್ತದೆ ಎಂದು ಹೇಳಿದೆ.

    ಕಂಪನಿಯ ಷೇರುಗಳ ರೇಟಿಂಗ್ ಅನ್ನು ಅಪ್‌ಗ್ರೇಡ್ ಮಾಡಲಾಗಿದೆ.ವಿಶ್ಲೇಷಕರ ಸಭೆಯ ನಂತರ, ಬ್ರೋಕರೇಜ್ ಹೌಸ್ ಪ್ರಭುದಾಸ್ ಲೀಲಾಧರ್​, ಈ ರೇಟಿಂಗ್ ಅನ್ನು ಅಪ್‌ಗ್ರೇಡ್ ಮಾಡಿದ್ದಾರೆ. ಬ್ರೋಕರೇಜ್ ಹೌಸ್ ಕಂಪನಿಯ ಷೇರುಗಳಿಗೆ ಖರೀದಿ ರೇಟಿಂಗ್ ನೀಡಿದೆ.
    ಪ್ರಭುದಾಸ್ ಲೀಲಾಧರ್​ ಈ ಹಿಂದೆ ವಿಐಪಿ ಇಂಡಸ್ಟ್ರೀಸ್ ಷೇರುಗಳಿಗೆ ಹೋಲ್ಡ್ ರೇಟಿಂಗ್ ನೀಡಿತ್ತು. ಈ ದೇಶೀಯ ಬ್ರೋಕರೇಜ್ ಸಂಸ್ಥೆಯು ಸಹ ವಿಐಪಿ ಇಂಡಸ್ಟ್ರೀಸ್‌ನ ಷೇರುಗಳ ಗುರಿ ಬೆಲೆಯನ್ನು ರೂ 603 ಕ್ಕೆ ಹೆಚ್ಚಿಸಿದೆ. ಬ್ರೋಕರೇಜ್ ಸಂಸ್ಥೆ ಈ ಹಿಂದೆ ಕಂಪನಿಯ ಷೇರುಗಳಿಗೆ 589 ರೂ. ಗುರಿ ಬೆಲೆ ನೀಡಿತ್ತು. ವಿಐಪಿ ಇಂಡಸ್ಟ್ರೀಸ್ ಅನ್ನು ಟ್ರ್ಯಾಕ್ ಮಾಡುವ 14 ವಿಶ್ಲೇಷಕರಲ್ಲಿ, 7 ಕಂಪನಿಯ ಷೇರುಗಳಿಗೆ ಖರೀದಿ ರೇಟಿಂಗ್ ನೀಡಿದ್ದಾರೆ. 5 ವಿಶ್ಲೇಷಕರು ಕಂಪನಿಯ ಷೇರುಗಳನ್ನು ಹಿಡಿದಿಡಲು ಸಲಹೆ ನೀಡಿದ್ದಾರೆ.

    ಈ ವರ್ಷ ಇಲ್ಲಿಯವರೆಗೆ ಕಂಪನಿಯ ಷೇರುಗಳು ಅಂದಾಜು 13% ರಷ್ಟು ಕುಸಿದಿವೆ. ವರ್ಷದ ಆರಂಭದಲ್ಲಿ, ಜನವರಿ 1, 2024 ರಂದು, ವಿಐಪಿ ಇಂಡಸ್ಟ್ರೀಸ್ ಷೇರುಗಳ ಬೆಲೆ ರೂ 610.20 ರಷ್ಟಿತ್ತು, ಇದು ಮಾರ್ಚ್ 28, 2024 ರಂದು ರೂ 539.40 ತಲುಪಿತು.

    ಟಾಟಾ, ಅದಾನಿ, ಅಂಬಾನಿ ಸಮೂಹವಲ್ಲ; ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರಿಗೆ ಈ ಗ್ರೂಪ್​ನ ಕಂಪನಿಗಳು ಅಚ್ಚುಮೆಚ್ಚು…

    ಸೊನಾಟಾ ಫೈನಾನ್ಸ್ ಸ್ವಾಧೀನ ಮಾಡಿಕೊಂಡ ಕೊಟಕ್ ಮಹೀಂದ್ರಾ ಬ್ಯಾಂಕ್: ರೂ. 537 ಕೋಟಿ ಡೀಲ್​ ನಂತರ ಷೇರಿಗೆ ಡಿಮ್ಯಾಂಡು

    ನಿಮ್ಮ ಬಳಿ ಈ ಷೇರು ಇದೆಯೇ?: ಈ ಕಂಪನಿಯ 3 ಷೇರುಗಳನ್ನು ನೀವು ಉಚಿತವಾಗಿ ಪಡೆಯುತ್ತೀರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts