Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ ಮತ್ತು ಅವರ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಬಲವಾಗಿ ನಂಬಲಾಗಿದೆ. ಈ ಕೆಲವು ನಕ್ಷತ್ರಗಳಲ್ಲಿ ಜನಿಸಿದವರಿಗೆ ಡಿಸೆಂಬರ್ ತಿಂಗಳು ಸಮೃದ್ಧಿ ಮತ್ತು ಸಂತೋಷದ ತರಲಿದೆ ಎಂದು ಹೇಳಲಾಗಿದೆ.
ವಿಶೇಷ ಪೂಜೆ, ಧ್ಯಾನ, ಆರಾಧನೆಯಂತಹ ದೈವಿಕ ಸ್ವರೂಪವನ್ನು ಹೊಂದಿರುವ ಮಾರ್ಗಝಿ ಮಾಸದಲ್ಲಿ ಜನಿಸಿದ ನಕ್ಷತ್ರಗಳು ಅಪಾರವಾದ ಲಾಭವನ್ನು ಪಡೆಯುತ್ತಾರೆ ಎಂಬುದನ್ನು ನಾವು ಈ ಲೇಖನದಲ್ಲಿ ನೋಡಬಹುದು. ಅಂದಹಾಗೆ ಮಾರ್ಗಝಿ ಎಂಬುದು ತಮಿಳು ಹಿಂದು ಕ್ಯಾಲೆಂಡರ್ ತಿಂಗಳಾಗಿದ್ದು, ಇದು ಹಲವಾರು ಅರ್ಥಗಳು ಮತ್ತು ಘಟನೆಗಳೊಂದಿಗೆ ಸಂಬಂಧ ಹೊಂದಿದೆ. ಮಾರ್ಗಜಿಯು ಧಾರ್ಮಿಕ ಸೇವೆಗಳಿಗೆ ಮಂಗಳಕರವೆಂದು ಪರಿಗಣಿಸಲ್ಪಟ್ಟ ಪವಿತ್ರ ತಿಂಗಳು. ಈ ಮಾರ್ಗಝಿ ತಿಂಗಳು ಡಿಸೆಂಬರ್ 16 ರಿಂದ ಜನವರಿ 13ರವರೆಗೆ ಇರುತ್ತದೆ.
ಚಿತ್ರಾ ನಕ್ಷತ್ರ
ಡಿಸೆಂಬರ್ ತಿಂಗಳಲ್ಲಿ ಚಿತ್ರಾ ನಕ್ಷತ್ರದಲ್ಲಿ ಜನಿಸಿದವರು ಒತ್ತಡ ಮತ್ತು ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿಯಿಂದ ಇರುತ್ತಾರೆ. ಬಹುಕಾಲದಿಂದ ಬಾಕಿ ಉಳಿದಿದ್ದ ಸಾಲದ ಸಮಸ್ಯೆಗಳು ಬಗೆಹರಿಯಲಿವೆ ಹಾಗೂ ಅನಿರೀಕ್ಷಿತ ಹಣದ ಹರಿವು ಬರಲಿದೆ.
ಸ್ವಾತಿ ನಕ್ಷತ್ರ
ಡಿಸೆಂಬರ್ ತಿಂಗಳಲ್ಲಿ ಸ್ವಾತಿ ನಕ್ಷತ್ರದಲ್ಲಿ ಜನಿಸಿದವರು ವೃತ್ತಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಉದ್ಯೋಗ ಬದಲಾವಣೆ, ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳು ಹೆಚ್ಚು. ವೈವಾಹಿಕ ಜೀವನದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ ಹಾಗೂ ಸಂಬಂಧಗಳು ಬಲಿಷ್ಠವಾಗುತ್ತವೆ.
ವಿಶಾಖ ನಕ್ಷತ್ರ
ಈ ನಕ್ಷತ್ರದಲ್ಲಿ ಜನಿಸಿದವರ ಜೀವನದಲ್ಲಿ ಈ ತಿಂಗಳು ಸುವರ್ಣ ಅವಧಿಯಾಗಲಿದೆ. ದೀರ್ಘ ದಿನದ ಪ್ರಾರ್ಥನೆಗಳು ನೆರವೇರುತ್ತವೆ. ಮನಸ್ಸಿನಲ್ಲಿರುವ ಗೊಂದಲಗಳೆಲ್ಲವೂ ದೂರವಾಗಿ ಸ್ಪಷ್ಟತೆ ಮೂಡುತ್ತದೆ. ಹೊಸ ಉದ್ಯಮಗಳ ಮೂಲಕ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಣದ ಹರಿವು ಅಗಾಧವಾಗಿರುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.
ಕಪ್ಪು ಕಲೆ ಇರುವ ಈರುಳ್ಳಿ ಬಳಸಿದರೆ ಏನಾಗುತ್ತದೆ? ಎಷ್ಟು ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ | Black Spot Onion
ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಚಿಕ್ಕ ವಯಸ್ಸಿನಲ್ಲೇ ಕೋಟಿ ರೂಪಾಯಿ ಗಳಿಸುವಿರಿ! Birth of Stars