More

    ಕರೊನಾದ ಹೊಸ ಔಷಧಕ್ಕೆ ಎಷ್ಟು ಬೆಲೆ ಗೊತ್ತಾ?; ಡಿಆರ್​ಡಿಒ ಕಂಡುಹಿಡಿದ 2-ಡಿಜಿ ಮದ್ದಿನ ದರ ಬಹಿರಂಗ!

    ನವದೆಹಲಿ: ದೇಶದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಕರೊನಾ ಸೋಂಕಿನ ವಿರುದ್ಧ ಔಷಧ ಕಂಡುಹಿಡಿದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಇದನ್ನು ಈಗಾಗಲೇ ಪ್ರಾಯೋಗಿಕವಾಗಿ ಉಚಿತವಾಗಿ ಕೆಲವು ಆಸ್ಪತ್ರೆಗಳಿಗೆ ವಿತರಿಸಲಾಗಿದ್ದು, ಇದೀಗ ಇದರ ಮಾರುಕಟ್ಟೆ ಬೆಲೆ ಏನಿರಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

    ಡಿಆರ್​ಡಿಒ ಅಧೀನದ ಇನ್​ಸ್ಟಿಟ್ಯೂಟ್​ ಆಫ್​ ನ್ಯೂಕ್ಲಿಯರ್ ಮೆಡಿಸಿನ್ ಆ್ಯಂಡ್ ಅಲೈಡ್​ ಸೈನ್ಸಸ್ ಕರೊನಾ ಸೋಂಕಿತರಿಗಾಗಿ ‘2 ಡಿಯಾಕ್ಸಿ ಡಿ ಗ್ಲುಕೋಸ್’ ಅಥವಾ ಸರಳವಾಗಿ ಹೇಳುವುದಾದರೆ 2-ಡಿಜಿ ಎಂಬ ಔಷಧವನ್ನು ಕಂಡುಹಿಡಿದಿದೆ. ಕೆಲವು ದಿನಗಳ ಹಿಂದೆ ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಂದಷ್ಟು ಆಸ್ಪತ್ರೆಗಳಿಗೆ ಉಚಿತವಾಗಿ ವಿತರಣೆ ಮಾಡಿಸುವ ಮೂಲಕ ಈ ಔಷಧವನ್ನು ಲೋಕಾರ್ಪಣೆ ಮಾಡಿದ್ದರು.

    ಇದನ್ನೂ ಓದಿ: ಮಗ ಮಾಡಿದ ಆ ಒಂದು ಕೆಲಸ ಅಮ್ಮನನ್ನೂ ಬಲಿ ಪಡೆಯಿತಾ?; ಪತಿ ಸತ್ತ ಕೆಲವೇ ಕ್ಷಣಗಳಲ್ಲಿ ಪತ್ನಿಗೂ ಸಾವು!

    ಇದೀಗ ಈ ಔಷಧದ ಮಾರುಕಟ್ಟೆ ಬೆಲೆ ಎಷ್ಟಿರಲಿದೆ ಎಂಬ ಮಾಹಿತಿಯೊಂದು ಮೂಲಗಳ ಮೂಲಕ ಬಹಿರಂಗಗೊಂಡಿದೆ. ಡಾ.ರೆಡ್ಡಿಸ್​ ಸಂಸ್ಥೆ ಮೂಲಕ ಈ ಔಷಧ ಮಾರುಕಟ್ಟೆಯಲ್ಲಿ ಲಭ್ಯ. ಇದು ಪುಡಿಯ ರೂಪದಲ್ಲಿ ಸ್ಯಾಚೆಟ್​ನಲ್ಲಿ ಸಿಗಲಿದ್ದು, ಸೋಂಕಿತರು ನೀರಿನಲ್ಲಿ ಕರಗಿಸಿಕೊಂಡು ಕುಡಿಯುವಷ್ಟು ಸರಳರೂಪದ ಮದ್ದು. ಸದ್ಯ ಈ ಔಷಧದ ಒಂದು ಸ್ಯಾಚೆಟ್​​ಗೆ 990 ರೂ. ನಿಗದಿ ಪಡಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಹೆಂಡತಿಯನ್ನು ಇನ್ನೊಬ್ಬನ ಜತೆ ನೋಡಬಾರದ ಸ್ಥಿತಿಯಲ್ಲಿ ನೋಡಿದ ಗಂಡ; ಇಬ್ಬರನ್ನೂ ಹೊರಕ್ಕೆಳೆದು ಕಂಬಕ್ಕೆ ಕಟ್ಟಿ ಥಳಿಸಿದ..

    ಅಪ್ಪನ ಹೆಣ ಬೇಡ, ಅವರ ಹಣ ಬೇಕು; ಅನಾಥ ಶವ ಎಂದರೂ ಸರಿ ಎಂದ, 6 ಲಕ್ಷ ಇದೆ ಎಂದಾಗ 5 ನಿಮಿಷ ಎಂದು ಹೇಳಿದ ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts