

ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಇದುವರೆಗೂ ಒಮ್ಮೆಯೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಸಾಕಷ್ಟು ಟೀಕೆಗಳು ಹಾಗೂ ಟ್ರೋಲ್ಗಳಿಗೆ ಗುರಿಯಾಗಿದೆ. ಮಾಜಿ ಕ್ರಿಕೆಟಿಗರು ಸೇರಿದಂತೆ ಕ್ರೀಡಾ ಪಂಡಿತರು ಕೂಡ ಆರ್ಸಿಬಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ. ತಮ್ಮ ಎಡವಟ್ಟುಗಳಿಂದಲೇ ಎಷ್ಟೋ ಬಾರಿ ಅಭಿಮಾನಿಗಳ ಆಕ್ರೋಶಕ್ಕೂ ಆರ್ಸಿಬಿ ಫ್ರಾಂಚೈಸಿ ಗುರಿಯಾಗಿದೆ. ಈ ಬಾರಿಯೂ ಅದೇ ಮಿಸ್ಟೇಕ್ ಮಾಡಲು ಹೊರಟಿದ್ದ ಆರ್ಸಿಬಿ ಕೊನೆ ಗಳಿಗೆಯಲ್ಲಿ ತನ್ನ ಬುದ್ಧಿವಂತಿಕೆ ಪ್ರದರ್ಶಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.
ನ.24ರ ಭಾನುವಾರ ಮತ್ತು ನ.25 ಸೋಮವಾರ ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ 2025ರ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ. ಮೊದಲ ದಿನದ ಹರಾಜಿನಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಅದಕ್ಕೆ ಕಾರಣ ಕನ್ನಡಿಗ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರಿಗೆ ಬಿಡ್ ಮಾಡದೇ ಇರುವುದು. ಆದರೆ, ಎರಡನೇ ದಿನದ ಹರಾಜಿನಲ್ಲಿ ಬಹಳ ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟ ಆರ್ಸಿಬಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಂಡದಲ್ಲಿ ಸಮತೋಲವನ್ನು ಕಾಯ್ದುಕೊಂಡಿದೆ.
ಈ ಹಿಂದೆ ಆರ್ಸಿಬಿಯಲ್ಲಿ ಸಾಮಾನ್ಯವಾಗಿ ಕಾಡುತ್ತಿದ್ದ ಸಮಸ್ಯೆಯೆಂದರೆ, ತಂಡದ ಸಮತೋಲನ. ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದರೆ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಅಲ್ಲದೆ, ಆಲ್ರೌಂಡರ್ಗಳ ಕೊರತೆಯೂ ಕಾಡುತ್ತಿತ್ತು. ಆದರೆ, ಈ ಬಾರಿ ಈ ಮಿಸ್ಟೇಕ್ಗಳನ್ನು ಪುನಾರಾವರ್ತಿಸದೇ ಸಮತೋಲಿತ ತಂಡವನ್ನು ಕಟ್ಟಿದ್ದಾರೆ. ರಾಹುಲ್ಗೆ ಬಿಡ್ ಮಾಡದಿದ್ದಕ್ಕೆ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಆದರೆ, ರಾಹುಲ್ ಪ್ರದರ್ಶನ ಇತ್ತೀಚೆಗೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ. ಹೀಗಾಗಿ ಒಂದು ಹಂತದವರೆ ಬಿಡ್ ಮಾಡಿದ್ದ ಆರ್ಸಿಬಿ ಬಿಡ್ ಮೊತ್ತ ಹೆಚ್ಚಾದಾಗ ಸ್ಪರ್ಧೆಯಿಂದ ಹಿಂದೆ ಸರಿಯಿತು.
ಗಮನಾರ್ಹ ಸಂಗತಿ ಏನೆಂದರೆ, ಈ ಬಾರಿ ಆರ್ಸಿಬಿ ಸಂಪೂರ್ಣ ಹೊಸ ತಂಡದಂತಿದೆ. ಕೆಲವೇ ಮಂದಿಯನ್ನು ಹೊರತುಪಡಿಸಿ ಹಳೆಯ ಆಟಗಾರರಿಗೆ ಮತ್ತೆ ಮಣೆಯಾಕದೇ ಹೊಸ ಮುಖಗಳನ್ನು ಆರ್ಸಿಬಿಗೆ ಪರಿಚಯಿಸಿದೆ. ಗ್ಲೇನ್ ಮ್ಯಾಕ್ಸ್ವೆಲ್, ಫಾಫ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್, ಕೆಮರೂನ್ ಗ್ರೀನ್, ಲಾಕಿ ಫರ್ಗುಸನ್, ಮಹಿಪಾಲ್ ಲೊಮ್ರೋರ್ ಹಾಗೂ ಅನುಜ್ ರಾವತ್ ಸೇರಿದಂತೆ ಬಹುತೇಕ ಆಟಗಾರರಿಗೆ ಆರ್ಸಿಬಿ ಮತ್ತೆ ಮಣೆ ಹಾಕಲಿಲ್ಲ.
ಈ ಬಾರಿ ಉತ್ತಮ ಆಯ್ಕೆಗಳನ್ನು ಮಾಡಿದ್ದಾರೆ. ವಿಶ್ವ ನಂಬರ್ 2 ಟಿ20 ಬ್ಯಾಟ್ಸ್ಮನ್ ಫಿಲ್ ಸಾಲ್ಟ್ ಹಾಗೂ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ವೇಗದ ಬೌಲರ್ ಜೋಶ್ಹ್ಯಾಸಲ್ವುಡ್ ಹಾಗೂ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಆರ್ಸಿಬಿ ಪಾಳಯಕ್ಕೆ ಸೇರಿದ್ದು, ತಂಡಕ್ಕೆ ಬಲ ತುಂಬಿದ್ದಾರೆ. ಸಂಪೂರ್ಣ ಹೊಸತನಕ್ಕೆ ಆರ್ಸಿಬಿ ಸಾಕ್ಷಿಯಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಸಿಎಸ್ಕೆ ಹರಾಜಿನಲ್ಲಿ ಗಮನ ಸೆಳೆದಿದೆ.
ಸಿಎಸ್ಕೆ ತಂಡದಲ್ಲಿ ಹೊಸತನವೇನು ಕಾಣುತ್ತಿಲ್ಲ. ಬಹುತೇಕ ಹಳೆಯ ತಂಡವೇ ಮತ್ತೆ ರಚನೆಯಾಗಿದಂತಿದೆ. ಸಿಎಸ್ಕೆ ಈಗಾಗಲೇ ಎಂ.ಎಸ್. ಧೋನಿ ಅವರನ್ನು ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಕೇವಲ 4 ಕೋಟಿ ರೂ. ಉಳಿಸಿಕೊಂಡಿದೆ. ಧೋನಿಯ ಜತೆ ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ರನ್ನು ಹರಾಜಿಗೂ ಮುನ್ನ ರಿಟೇನ್ ಪಟ್ಟಿಯಲ್ಲಿ ಉಳಿಸಿಕೊಂಡಿತು. ಆಗ ತಂಡದಿಂದ ಕೈಬಿಟ್ಟಿದ್ದ ಡೆವೊನ್ ಕಾನ್ವೇ ಹಾಗೂ ರಚಿನ್ ರವೀಂದ್ರ ಅವರನ್ನು ಸಿಎಸ್ಕೆ ಮತ್ತೆ ಖರೀದಿ ಮಾಡಿದೆ. ಇನ್ನು ಈ ಹಿಂದೆ ಸಿಎಸ್ಕೆಯಲ್ಲಿದ್ದ ರವಿಚಂದ್ರನ್ ಅಶ್ವಿನ್ ಮತ್ತೆ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಆಡುವ ಹನ್ನೊಂದರ ಬಳಗದ ಬಹುತೇಕ ಆಟಗಾರರು ಹಿಂದಿನವರೇ ಎಂಬುದೇ ಗಮನಾರ್ಹ.ಹೀಗಾಗಿ ಸಿಎಸ್ಕೆಯಲ್ಲಿ ಹೊಸತನವೇನು ಕಂಡಿಲ್ಲ. ಅಲ್ಲದೆ, ಈ ಹಿಂದಿನ ಸೀಸನ್ನಲ್ಲಿ ಸಿಎಸ್ಕೆ ಪ್ರದರ್ಶನವೂ ಕೂಡ ನಿರೀಕ್ಷಿತವಾಗಿರಲಿಲ್ಲ. ಉಳಿದ ಎಲ್ಲ ತಂಡಗಳಿಗೆ ಹೋಲಿಸಿದರೆ ಈ ಬಾರಿ ಆರ್ಸಿಬಿ ಸಂಪೂರ್ಣ ಹೊಸತನದಿಂದ ಕಾಣಿಸಿಕೊಳ್ಳಲಿದೆ.
ಜೋಶ್ ಹ್ಯಾಸಲ್‌ವುಡ್ (12.50 ಕೋಟಿ), ಫಿಲ್ ಸಾಲ್ಟ್ (11.50 ಕೋಟಿ), ಜಿತೇಶ್ ಶರ್ಮ (11 ಕೋಟಿ), ಲಿಯಾಮ್ ಲಿವಿಂಗ್‌ಸ್ಟೋನ್ (8.75 ಕೋಟಿ), ರಸಿಕ್ ಸಲಾಂ (6 ಕೋಟಿ), ಸುಯಶ್ ಶರ್ಮ (2.60 ಕೋಟಿ). ಭುವನೇಶ್ವರ್ ಕುಮಾರ್ (10.75 ಕೋಟಿ), ಕೃನಾಲ್ ಪಾಂಡ್ಯ (5.75 ಕೋಟಿ), ಟಿಮ್ ಡೇವಿಡ್ (3 ಕೋಟಿ), ಜೇಕಬ್ ಬೆಥೆಲ್ (2.60 ಕೋಟಿ), ದೇವದತ್ ಪಡಿಕ್ಕಲ್ (2 ಕೋಟಿ), ನುವಾನ್ ತುಷಾರ (1.60 ಕೋಟಿ), ರೊಮಾರಿಯೊ ಶೆರ್ಡ್ (1.50 ಕೋಟಿ), ಸ್ವಪ್ನಿಲ್ ಸಿಂಗ್ (50 ಲಕ್ಷ), ಮನೋಜ್ ಭಾಂಡಗೆ (30 ಲಕ್ಷ), ಸ್ವಸ್ತಿಕ್ ಚಿಕರ (30 ಲಕ್ಷ), ಮೋಹಿತ್ ರಾಥೀ (30 ಲಕ್ಷ), ಅಭಿನಂದನ್ ಸಿಂಗ್ (30 ಲಕ್ಷ), ಲುಂಗಿ ಎನ್‌ಗಿಡಿ (1 ಕೋಟಿ).
ಬ್ಯಾಟರ್ಗಳು: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ.
ವಿಕೆಟ್ ಕೀಪರ್ಸ್: ಫಿಲ್ ಸಾಲ್ಟ್ ಮತ್ತು ಜಿತೇಶ್ ಶರ್ಮ
ಆಲ್ರೌಂಡರ್ಸ್ : ಲಿಯಾಮ್ ಲಿವಿಂಗ್‌ಸ್ಟೋನ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮನೋಜ್ ಭಾಂಡಗೆ ಹಾಗೂ ಜಾಕೋಬ್ ಬೆಥೆಲ್.
ಫಾಸ್ಟ್ ಬೌಲರ್ಸ್: ಜೋಶ್ ಹ್ಯಾಸಲ್‌ವುಡ್, ರಸಿಖ್ ದಾರ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ಲುಂಗಿ ಎನ್‌ಗಿಡಿ ಹಾಗೂ ಅಭಿನಂದನ್ ಸಿಂಗ್.
ಸ್ಪಿನ್ನರ್‌ಗಳು: ಸುಯಶ್ ಶರ್ಮಾ ಹಾಗೂ ಮೋಹಿತ್ ರಾಥಿ.
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಲಿಯಾಮ್ ಲಿವಿಂಗ್‌ಸ್ಟೋನ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಸ್ಲ್ವುಡ್ ಹಾಗೂ ಸುಯಾಶ್ ಶರ್ಮಾ.
1. ಡೆವೊನ್ ಕಾನ್ವೇ – 6.25 ಕೋಟಿ ರೂ.
2. ರಾಹುಲ್ ತ್ರಿಪಾಠಿ – 3.4 ಕೋಟಿ ರೂ.
3. ರಚಿನ್ ರವೀಂದ್ರ – 4 ಕೋಟಿ ರೂ.
4. ರವಿಚಂದ್ರನ್ ಅಶ್ವಿನ್ – 9.75 ಕೋಟಿ ರೂ.
5. ಖಲೀಲ್ ಅಹಮದ್ – 4.80 ಕೋಟಿ ರೂ.
6. ನೂರ್ ಅಹಮದ್ – 10 ಕೋಟಿ ರೂ.
7. ಸ್ಯಾಮ್ ಕರನ್ – 2.40 ಕೋಟಿ ರೂ.
8. ವಿಜಯ್ ಶಂಕರ್ – 1.2 ಕೋಟಿ ರೂ.
9. ಶೇಕ್ ರಶೀದ್ – 30 ಲಕ್ಷ ರೂ.
10. ಅಂಶುಲ್ ಕಾಂಬೋಜ್ – 3.4 ಕೋಟಿ ರೂ.
11. ಮುಖೇಶ್ ಚೌಧರಿ – 30 ಲಕ್ಷ ರೂ.
12. ದೀಪಕ್ ಹೂಡಾ – 1.7 ಕೋಟಿ ರೂ.
13. ಗುರ್ಜಪ್ನೀತ್ ಸಿಂಗ್ – 2.2 ಕೋಟಿ ರೂ.
14. ನಾಥನ್ ಎಲ್ಲಿಸ್ – 2 ಕೋಟಿ ರೂ.
15. ಜೇಮಿ ಓವರ್ಟನ್ – 1.5 ಕೋಟಿ ರೂ.
16. ಕಮಲೇಶ್ ನಾಗರಕೋಟಿ – 30 ಲಕ್ಷ ರೂ.
17. ರಾಮಕೃಷ್ಣ ಘೋಷ್ – 30 ಲಕ್ಷ ರೂ.
18. ಶ್ರೇಯಸ್ ಗೋಪಾಲ್ – 30 ಲಕ್ಷ ರೂ.
19. ವಂಶ್ ಬೇಡಿ – 55 ಲಕ್ಷ ರೂ.
20. ಅಂದ್ರೆ ಸಿದ್ದಾರ್ಥ್ – 30 ಲಕ್ಷ ರೂ.
ರುತುರಾಜ್ ಗಾಯಕ್ವಾಡ್, ಮತೀಶಾ ಪತಿರಾನ, ಶಿವಂ ದುಬೆ, ರವೀಂದ್ರ ಜಡೇಜಾ ಮತ್ತು ಎಂ.ಎಸ್. ಧೋನಿ.
ಒಟ್ಟಾರೆ ಆರ್ಸಿಬಿ ತಂಡ ಈ ಬಾರಿ ಹರಾಜಿನಲ್ಲೇ ಭರವಸೆ ಮೂಡಿಸಿದ್ದು, ಈ ಸಲ ಕಪ್ ನಮ್ಮದೇ ಎಂದು ಜೋರಾಗಿ ಹೇಳುವಂತೆ ಮಾಡಿದೆ. ಏಕೆಂದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಈ ಬಾರಿ ಆರ್ಸಿಬಿ ತಂಡ ಸಮತೋಲನ ಕಾಯ್ದುಕೊಂಡಿದೆ. ಕಳೆದ 17 ಸೀಸನ್ಗಳಿಂದ ಕೇಳಿಬರುತ್ತಿದ್ದ ಈ ಸಲ ಕಮ್ ನಮ್ಮದೇ ಎಂಬ ಮಾತು ಈ ಬಾರಿಯಾದರೂ ನಿಲ್ಲುತ್ತಾ ಕಾಯಬೇಕಿದೆ. (ಏಜೆನ್ಸೀಸ್)