

CPR : ತಂದೆಯೊಬ್ಬ ತನ್ನ ಮೂರು ತಿಂಗಳ ಮಗುವಿಗೆ ಸಿಪಿಆರ್ ನೀಡುವ ಮೂಲಕ ಜೀವ ಉಳಿಸಿದ್ದಾರೆ. ಈ ಘಟನೆ ನಿನ್ನೆ (ಸೆ.19) ಕೇರಳದ ಕೋಯಿಕ್ಕೋಡ್‌ನ ವಡಕಾರದಲ್ಲಿ ನಡೆದಿದೆ.
ವಡಕಾರ ಅಗ್ನಿಶಾಮಕ ಠಾಣೆಯ ನಾಗರಿಕ ರಕ್ಷಣಾ ಸದಸ್ಯ ಮತ್ತು ಮಣಿಯೂರು ಮೂಲದ ಲಿಗಿತ್ ಸರಿಯಾದ ಸಮಯದಲ್ಲಿ ಸಿಪಿಆರ್ ನೀಡುವ ಮೂಲಕ ತಮ್ಮ ಮಗುವಿನ ಜೀವವನ್ನು ಉಳಿಸಿಕೊಂಡಿದ್ದಾರೆ.
ಜ್ವರದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಗು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಇದು ಲಿಗಿತ್ ದಂಪತಿ ಎದೆಯಲ್ಲಿ ಭಾರಿ ಸಂಕಟ ಹಾಗೂ ನೋವನ್ನು ಉಂಟು ಮಾಡಿತು. ಆದಾಗ್ಯೂ, ವಡಕರ ನಾಗರಿಕ ರಕ್ಷಣಾ ಪಡೆಯ ಸದಸ್ಯರಾಗಿರುವ ಲಿಗಿತ್ ತಮ್ಮ ತರಬೇತಿಯನ್ನು ಬಳಸಿಕೊಂಡು ಮಗುವಿಗೆ ತ್ವರಿತವಾಗಿ ಸಿಪಿಆರ್ ನೀಡಿದರು. ನಂತರ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಅಗತ್ಯ ಚಿಕಿತ್ಸೆಯನ್ನು ನೀಡಲಾಯಿತು. ಇದರಿಂದ ಮಗುವಿನ ಜೀವ ಉಳಿಯಿತು.
ಅಂದಹಾಗೆ, ಲಿಗಿಟ್ ಅವರ ಸಕಾಲಿಕ ಹಸ್ತಕ್ಷೇಪ ಮತ್ತು ನಾಗರಿಕ ರಕ್ಷಣಾ ಸದಸ್ಯರಾಗಿ ಸಿಪಿಆರ್ ಒದಗಿಸುವ ವಿಚಾರದಲ್ಲಿ ಅವರು ಪಡೆದಿದ್ದ ತರಬೇತಿಯು ತಮ್ಮ ಮಗುವನ್ನೇ ಉಳಿಸಲು ಸಹಾಯ ಮಾಡಿತು. ನಿಜಕ್ಕೂ ಈ ಒಂದು ಘಟನೆ ಮನಕಲುಕವಂತಿದೆ. (ಏಜೆನ್ಸೀಸ್)