More

  ‘ತಲೈವರ್​ 171’ ಚಿತ್ರಕ್ಕೆ ಖ್ಯಾತ ನಟನ ಎಂಟ್ರಿ!; ಯಾವ ಚಿತ್ರರಂಗದ ಸ್ಟಾರ್​ ಇವರು?

  ತಮಿಳುನಾಡು: ‘ಲಿಯೋ’ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರಲು ಸಜ್ಜಾಗಿರುವ ‘ತಲೈವರ್​ 171’ ಚಿತ್ರಕ್ಕೆ ಇದೀಗ ಖ್ಯಾತ ನಟರೊಬ್ಬರ ಎಂಟ್ರಿಯಾಗಲಿದ್ದು, ಕಾಲಿವುಡ್​ ಸೂಪರ್​ಸ್ಟಾರ್​, ತಲೈವಾ ರಜನಿಕಾಂತ್​ ಜತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸದ್ಯ ತಮಿಳು ಚಿತ್ರರಂಗದ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

  ಇದನ್ನೂ ಓದಿ: ಆಯೋಗಕ್ಕಿರಲಿ ಪಕ್ಷಗಳ ಮಾನ್ಯತೆ ರದ್ದತಿ ಅಧಿಕಾರ

  ‘ಜೈಲರ್’​ ಬ್ಲಾಕ್​ಬಸ್ಟರ್​ ಹಿಟ್​ ಆದ ಬೆನ್ನಲ್ಲೇ ರಜನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ‘ತಲೈವರ್​ 171’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ. ಚಿತ್ರದ ಕುರಿತಂತೆ ಕಳೆದ ಒಂದು ತಿಂಗಳಿನಿಂದ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ರೀತಿಯ ಸುದ್ದಿಗಳು ಹರಿದಾಡುತ್ತಿವೆ.

  ಈ ಸಿನಿಮಾ ರಜನಿ ಅಭಿಮಾನಿಗಳಿಗೆ ಹಲವಾರು ಆಶ್ಚರ್ಯಗಳನ್ನು ನೀಡಲಿದೆ ಎಂದು ನಿರ್ದೇಶಕ ಲೋಕೇಶ್ ಹೇಳಿದ್ದರು. ಅದರಂತೆಯೇ ಸಿನಿಮಾದ ಹೊಚ್ಚ ಹೊಸ ಬೆಳವಣಿಗಗಳು ಕೂಡ ದಿನ ಕಳೆದಂತೆ ಹೊರಬರುತ್ತಿವೆ. ಇದೆಲ್ಲದರ ಮಧ್ಯೆಯೇ ಇದೀಗ ಬಂದ ಸುದ್ದಿ, ರಜನಿಕಾಂತ್​ ಅವರೊಂದಿಗೆ ಮತ್ತೊಬ್ಬ ಸ್ಟಾರ್​ ನಟ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ! ಹಾಗಾದ್ರೆ, ಯಾರು ಆ ನಟ? ಇಲ್ಲಿದೆ ಮಾಹಿತಿ.

  ಇದನ್ನೂ ಓದಿ: ‘ಸೋನಾ ಬೇಬಿ’ ಜತೆ ಭರ್ಜರಿ ಹೆಜ್ಜೆ ಹಾಕಿದ ಪ್ರಜ್ವಲ್!; ಯಾವ ಸಿನಿಮಾವಿದು?

  ತಮಿಳು ಚಿತ್ರರಂಗದ ಸ್ಟಾರ್​ ನಟ ಶಿವಕಾರ್ತಿಕೇಯನ್ ‘ತಲೈವರ್ 171’ ಚಿತ್ರದಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಕಾಲಿವುಡ್ ವಲಯಗಳು ವರದಿ ನೀಡಿವೆ. ಈ ಹಿಂದಿನಿಂದಲೂ ಹಲವರಿಗೆ ತಿಳಿದಿರುವ ಸಂಗತಿ ಶಿವಕಾರ್ತಿಕೇಯನ್ ನಟ ರಜನಿಕಾಂತ್​ ಅವರ ಅಪ್ಪಟ ಅಭಿಮಾನಿ ಎಂಬುದು. ಈ ಕಾರಣದಿಂದಲೇ ಅವರು ರಜನಿ ಅವರೊಡನೆ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ ಎಂದು ಫ್ಯಾನ್ಸ್​ ಊಹಿಸಿದ್ದಾರೆ. ಆದ್ರೆ, ವದಂತಿ ಕುರಿತಂತೆ ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಘೋಷಣೆ ಪ್ರಕಟಿಸಿಲ್ಲ ಎಂಬುದು ಗಮನಾರ್ಹ.

  ಶಿವಕಾರ್ತಿಕೇಯನ್ ಅವರಲ್ಲದೆ, ದಕ್ಷಿಣದ ಜನಪ್ರಿಯ ನಟರಾದ ಪೃಥ್ವಿರಾಜ್ ಸುಕುಮಾರನ್ ಮತ್ತು ರಾಘವ ಲಾರೆನ್ಸ್ ಅವರನ್ನು ಚಿತ್ರದಲ್ಲಿ ಪ್ರಮುಖ ಪಾತ್ರಗಳಿಗಾಗಿ ಸಂಪರ್ಕಿಸಲಾಗಿದೆ ಎಂದು ವದಂತಿಗಳಿವೆ. ಸನ್ ಪಿಕ್ಚರ್ಸ್‌ನ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್​ ಮಾಡಲಿದ್ದಾರೆ ಎಂದು ಸಿನಿ ವರದಿ ತಿಳಿಸಿದೆ,(ಏಜೆನ್ಸೀಸ್).

  ‘ಸೋನಾ ಬೇಬಿ’ ಜತೆ ಭರ್ಜರಿ ಹೆಜ್ಜೆ ಹಾಕಿದ ಪ್ರಜ್ವಲ್!; ಯಾವ ಸಿನಿಮಾವಿದು?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts