

Murder Plot: ಒಬ್ಬರಲ್ಲ, ಇಬ್ಬರಲ್ಲ ಒಟ್ಟು ಮೂವರನ್ನು ಮದುವೆಯಾಗಿದ್ದ ವ್ಯಕ್ತಿ, ತನ್ನ ಹೆಂಡತಿಯಿಂದಲೇ ಬರ್ಬರವಾಗಿ ಕೊಲೆಯಾದ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಸಕರಿಯ ಗ್ರಾಮದಲ್ಲಿ ಸಂಭವಿಸಿದೆ.
ಗೋಣಿ ಚೀಲ, ಸೀರೆ ಮತ್ತು ಬೆಡ್ಶೀಟ್ಗಳಿಂದ ಸುತ್ತಿಟ್ಟಿದ್ದ ವ್ಯಕ್ತಿಯ ಮೃತದೇಹ ಗ್ರಾಮದ ಬಾವಿಯಲ್ಲಿ ಸಿಕ್ಕಿದ್ದು, ಇದೊಂದು ಕೊಲೆ ಎಂಬುದು ಊರಿನವರಿಗೆ ತಿಳಿದುಬಂದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಖಾಕಿ ಪಡೆ, ಘಟನೆ ನಡೆದ 36 ಗಂಟೆಗಳಲ್ಲಿ ಕೊಲೆಗಾರರು ಯಾರು? ಎಂಬುದನ್ನು ಪತ್ತೆಹಚ್ಚುವ ಮೂಲಕ ಇಡೀ ಪ್ರಕರಣವನ್ನೇ ಭೇದಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಭಯ್ಯಾಲಾಲ್ ರಜಕ್ (60) ಎಂದು ಗುರುತಿಸಲಾಗಿದೆ. ಮೂರು ವಿವಾಹವಾಗಿದ್ದ ರಜಕ್ಗೆ ಇಬ್ಬರು ಹೆಂಡತಿಯರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಮೂರನೇ ಪತ್ನಿಯ ಕಾಮತೃಷೆಯೇ ಆತನ ಉಸಿರು ನಿಲ್ಲಿಸಿದ್ದು ದುರಂತ! ವರದಿಯ ಪ್ರಕಾರ, ಮೊದಲ ಪತ್ನಿಯನ್ನು ತೊರೆದಿದ್ದ ಮೃತ ವ್ಯಕ್ತಿ, ಎರಡನೇ ಹೆಂಡತಿ ಗುಡ್ಡಿ ಬಾಯಿಗೆ ಮಕ್ಕಳಾಗಲಿಲ್ಲ ಎಂದು ಆತನ ಸಹೋದರಿ ಮುನ್ನಿಯನ್ನೇ ಮದುವೆಯಾದ. ಈ ದಂಪತಿಗೆ ಎರಡು ಮಕ್ಕಳು ಜನಿಸಿತು. ಅಂದಿನಿಂದ, ಮೂವರು ಹೆಂಡತಿಯರ ಮುದ್ದಿನ ಗಂಡನ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು. ಆದರೆ, ಮುನ್ನಿಯ ಕಾಮದಾಟ ಮತ್ತು ಕೊಲೆ ಸಂಚು ಅದೆಲ್ಲವನ್ನೂ ಛಿದ್ರಗೊಳಿಸಿತು.
ಸ್ಥಳೀಯ ನಿವಾಸಿ, ವ್ಯಾಪಾರಿ ನಾರಾಯಣ್ ದಾಸ್ ಕುಶ್ವಾಹ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮುನ್ನಿ, ತಮ್ಮಿಬ್ಬರ ಕಾಮದಾಟಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂದು ಭಾವಿಸಿ, ಪ್ರಿಯರಕನೊಂದಿಗೆ ಸೇರಿ ಹಲವು ದಿನಗಳಿಂದ ಕೊಲೆಗೆ ಸಂಚನ್ನು ರೂಪಿಸಿದ್ದಳು. ಪೊಲೀಸರ ಮಾಹಿತಿ ಪ್ರಕಾರ, ಮುನ್ನಿ ಮತ್ತು ದಾಸ್, ರಜಕ್ ಉಸಿರು ನಿಲ್ಲಿಸಲು ದೊಡ್ಡ ಸಂಚನ್ನೇ ಹೂಡಿದ್ದರು. ಈ ಕೊಲೆಗೈಯಲು ಕೂಲಿ ಕೆಲಸ ಮಾಡುತ್ತಿದ್ದ ಧೀರಜ್ ಎಂಬ ಯುವಕನಿಗೆ ಸುಪಾರಿ ಕೊಟ್ಟಿದ್ದನ್ನು. ಅಂತೆಯೇ, ರಜಕ್ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಆತನ ತಲೆಗೆ ರಾಡ್ನಿಂದ ಹೊಡೆದು, ಮೃತದೇಹವನ್ನು ಸೀರೆ, ಬೆಡ್ಶೀಟ್ ಮತ್ತು ಗೋಣಿಚೀಲದಲ್ಲಿ ಸುತ್ತಿ, ಬಾವಿಗೆ ಎಸೆದಿದ್ದಾರೆ ಎಂದರು.
ಆ.30ರ ರಾತ್ರಿ ಈ ಘಟನೆ ಸಂಭವಿಸಿದೆ. ಮಧ್ಯರಾತ್ರಿ 2 ಗಂಟೆಗೆ ಕೊಲೆಗಾರರು ರಜಕ್ನ ದೇಹವನ್ನು ಗ್ರಾಮದ ಬಾವಿಗೆ ಎಸೆದು ಪರಾರಿಯಾಗಿದ್ದರು. ಆದರೆ, ವಿಧಿ ಆಟವೇ ಬೇರೆಯಿತ್ತು. ಮರುದಿನ ಬೆಳಗ್ಗೆ, ರಜಕ್ನ ಎರಡನೇ ಪತ್ನಿ ಗುಡ್ಡಿ, ಬಾವಿಯಲ್ಲಿ ಏನೋ ತೇಲುತ್ತಿರುವುದನ್ನು ಕಂಡು ಗಾಬರಿಯಾಗಿದ್ದಳು. ಈ ವೇಳೆ ಅದು ತನ್ನ ಪತಿಯ ಮೃತದೇಹವೆಂದು ಗುರುತಿಸಿದಳು. ಸ್ಥಳದಲ್ಲಿ ಸಿಕ್ಕ ರಜಕ್ ಮೊಬೈಲ್ ವಶಪಡಿಸಿಕೊಂಡ ಖಾಕಿ, ಘಟನೆ ನಡೆದ 36 ಗಂಟೆಗಳಲ್ಲಿ ಇಡೀ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ರಜಕ್ ತಲೆಗೆ ರಾಡ್ನಿಂದ ಗಂಭೀರ ಪೆಟ್ಟು ಬಿದ್ದಿದ್ದರಿಂದಲೇ ತೀವ್ರ ರಕ್ತಸ್ರಾವ ಉಂಟಾಗಿ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ. ಈ ಕೊಲೆ ಪ್ರಕರಣದಲ್ಲಿ ಮುನ್ನಿ, ದಾಸ್ ಮತ್ತು ಧೀರಜ್ನನ್ನು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).