ಪುರುಷರೇ ಎಚ್ಚರ! ನಿಮ್ಮ ಹೆಂಡತಿಗೆ ಈ ವಿಷಯವನ್ನು ಹೇಳುವ ಮೊದಲು ನೂರು ಬಾರಿ ಯೋಚಿಸಿ.. Relationship

untitled-design-2025-10-09t124312592-68e76093a34ae
Published on

Relationship: ವೈವಾಹಿಕ ಜೀವನದಲ್ಲಿ ಕೆಲವೊಮ್ಮೆ ಅನವಶ್ಯಕ ವಾದ-ವಿವಾದಗಳು ಸಾಮನ್ಯವಾಗಿ ಏರ್ಪಡುತ್ತವೆ. ಇದಾದ ಬಳಿಕ ತಾವು ಏನು ಮಾತನಾಡಿದ್ದೇವೆ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ಅನೇಕರು ಮಾನಾಡುವ ಮೊದಲು ಯೋಚಿಸುವುದಿಲ್ಲ. ಇದರಿಂದ ನಾವು ಮಾತನಾಡಿದ ಸಣ್ಣ ತಪ್ಪುಗಳು ದೊಡ್ಡದಾಗಿ ಸಂಸಾರದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತವೆ.

ಸಂತೋಷ ಮತ್ತು ಶಾಂತಿಯುತ ದಾಂಪತ್ಯಕ್ಕೆ ಪ್ರೀತಿ ಒಂದೇ ಮುಖ್ಯವಲ್ಲ. ಬದಲಿಗೆ ಯಾವ ಸಮಯದಲ್ಲಿ ಏನು ಮಾತನಾಡುತ್ತೇವೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಯಾವುದೇ ಪುರುಷನು ಕೆಳಗೆ ತಿಳಿಸಲಾದ ಮಾತುಗಳನ್ನು ಹೆಂಡತಿಗೆ ಹೇಳುವ ಮುಂಚೆ ನೂರು ಬಾರಿ ಯೋಚಿಸಿ, ಇಲ್ಲದಿದ್ದರೆ ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಬಹುದು...

ತಾಯಿ- ಸಹೋದರಿಯೊಂದಿಗೆ ಹೋಲಿಕೆ ಮಾಡುವುದು

ಯಾವುದೇ ಪುರುಷನು ಮಾತನಾಡುವ ಸಮಯದಲ್ಲಿ ಹೆಂಡತಿಯನ್ನು ನಿಮ್ಮ ತಾಯಿಗೆ ಅಥವಾ ಸಹೋದರಿಗೆ ಹೋಲಿಸಬೇಡಿ. ಏಕೆಂದರೆ ಇದು ಬೆಂಕಿಯ ಮೇಲೆ ಎಣ್ಣೆ ಸುರಿದಂತೆ. ಪ್ರತಿಯೊಬ್ಬರೂ ವಿಭಿನ್ನ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ರೀತಿ ಹೋಲಿಕೆ ಮಾಡುವುದರಿಂದ ಆಕೆಯ ನಂಬಿಕೆಗೆ ಮಸಿ ಬಳಿದ ರೀತಿಯಲ್ಲಿ ಆಗಬಹುದು. ಹಾಗಾಗಿ ನೀವು ಏನನ್ನಾದರೂ ಹೇಳಲು ಬಯಸಿದರೆ ನೇರವಾಗಿ ಹೇಳಿ ಬದಲಿಗೆ ಯಾರ ಜೊತೆಗೂ ಹೋಲಿಸಬೇಡಿ....

ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ

ನಿಮ್ಮ ಹೆಂಡತಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವಳಿಗೆ ಏನು ಗೊತ್ತಿಲ್ಲ, ತಿಳಿದಿಲ್ಲ, ಬುದ್ಧಿವಂತಳಲ್ಲ ಎಂದು ಎಂದಿಗೂ ಹೇಳಬೇಡಿ ಇದು ಆಕೆಯ ಸ್ವಾಭಿಮಾನಕ್ಕೆ ನೇರವಾಗಿ ಹೊಡೆತ ಬೀಳುತ್ತದೆ. ಪರಸ್ಪರ ಅವಲಂಬನೆ ಇಬ್ಬರಲ್ಲೂ ಸ್ವಾವಲಂಬಿಯಾಗಿ ಬದುಕಲು ಸಹಾಯ ಮಾಡುತ್ತದೆ. ಒಬ್ಬರನ್ನೊಬ್ಬರು ಅಂದಾಜು ಮಾಡಿಕೊಳ್ಳುವುದನ್ನು ಬಿಟ್ಟು, ಹೊಂದಿಕೊಂಡಿ ಹೋಗಬೇಕು.

ಖರ್ಚಿನ ಬಗ್ಗೆ ಪದೇ ಪದೇ ಪ್ರಶ್ನಿಸಿಬೇಡಿ

ನಿಮ್ಮ ಹೆಂಡತಿ ಮಾಡಿದ ಖರ್ಚನ್ನು ಪದೇ ಪದೇ ಲೆಕ್ಕ ಕೇಳಬೇಡಿ. ಹೀಗೆ ಮಾಡಿದ್ದಲ್ಲಿ ಆಕೆಯನ್ನು ನೀವು ನಂಬುವುದಿಲ್ಲ ಎಂದು ಆಕೆ ಯೋಚಿಸುತ್ತಾಳೆ. ಹಾಗಾಗಿ ಹಣದ ಚರ್ಚೆಯನ್ನು ಮುಕ್ತವಾಗಿ ನಡೆಸುವುದು ಆದಷ್ಟು ಒಳ್ಳೆಯದು. ಒಟ್ಟಿಗೆ ಕೂತು ತಮ್ಮ ಖರ್ಚುಗಳನ್ನು ಪಟ್ಟಿ ಮಾಡುವುದರಿಂದ ಯಾವುದೇ ರೀತಿಯ ತಾರತಮ್ಯ ಇಬ್ಬರಲ್ಲೂ ಮೂಡುವುದಿಲ್ಲ.

ಬೇರೆ ಹೆಣ್ಣಿನೊಂದಿಗೆ ಹೋಲಿಕೆ ಮಾಡಬೇಡಿ

ನಿಮ್ಮ ಹೆಂಡತಿಯನ್ನು ಬೇರೆಯವರ ಹೆಂಡತಿಯೊಂದಿಗೆ ಹೋಲಿಕೆ ಮಾಡುವುದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಪ್ರತಿಯೊಬ್ಬರಿಗೂ ಅವರದೇ ಆದಂತಹ ದೇಹ ಪ್ರಕಾರ ಇರುತ್ತದೆ. ಹಾಗಾಗಿ ಮತ್ತೊಬ್ಬ ಮಹಿಳೆಯ ದೇಹ ಪ್ರಕಾರವನ್ನು ಹೋಲಿಸುವ ಬದಲು ಆಕೆಯನ್ನು ಫಿಟ್​ ಆಗಿರಲು ಪ್ರಯತ್ನಿಸಿ, ಪ್ರೊತ್ಸಾಹಿಸಿ.

ನೀ ಸಿಗುವ ಮೊದಲೇ ಸಂತೋಷವಾಗಿದ್ದೆ!

ಯಾವುದೇ ಪುರುಷ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ನಿನ್ನ ಮದುವೆಯಾಗುವ ಮುಂಚೆಯೇ ನಾನು ಚೆನ್ನಾಗಿದ್ದೆ ಅಥವಾ ಸಂತೋಷವಾಗಿದ್ದೆ ಎಂದು ಹೇಳಬೆಡಿ. ಇದು ಆಕೆಯ ಸಂತೋಷಕ್ಕೆ ಕುತ್ತು ತರಬಹುದು. ಹಾಗಾಗಿ ಇಬ್ಬರಲ್ಲೂ ತಪ್ಪಿದ್ದರೆ ಒಟ್ಟಿಗೆ ಕೂತು ಪರಿಹರಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಂಬಂಧ ಹಾಳಾಗಬಹುದು.

ಯಾವುದೇ ಸಂಬಂಧಗಳಿಗೆ ಪ್ರೀತಿ, ಗೌರವ ಮತ್ತು ತಿಳುವಳಿಕೆ ಮುಖ್ಯ ಎಂಬುದನ್ನು ತಿಳಿಯಿರಿ. ನೀವು ಮಾತನಾಡುವ ಕೆಲವೊಂದು ಮಾತುಗಳು ನಿಮ್ಮ ಜೀವನವನ್ನೇ ಹಾಳುಮಾಡಬಹುದು. ಆದರಿಂದ ಬುದ್ಧಿವಂತಿಕೆಯಿಂದ ಮಾತನಾಡಿ... (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net