ಪ್ಯಾರಿಸ್​ನಲ್ಲಿರುವ ಐತಿಹಾಸಿಕ ಲೌವ್ರೆ ವಸ್ತುಸಂಗ್ರಹಾಲಯಕ್ಕೆ ನುಗ್ಗಿ ನೆಪೋಲಿಯನ್ ಕಾಲದ ಆಭರಣ ಕದ್ದ ಕಳ್ಳರು | Louvre Museum

ವಿಜಯವಾಣಿ (77)
Published on

Louvre Museum: ಪ್ಯಾರಿಸ್​ನಲ್ಲಿರುವ 30 ಸಾವಿರಕ್ಕೂ ಹೆಚ್ಚು ಸಂದರ್ಶಕರನ್ನು ಆಕರ್ಷಿಸುತ್ತಿದ್ದ ಐತಿಹಾಸಿ ಲೌವ್ರೆ ವಸ್ತು ಸಂಗ್ರಹಾಲಯದಲ್ಲಿ ಕಳ್ಳತನ ನಡೆದಿದ್ದು, ಐತಿಹಾಸಿಕ ನೆಪೋಲಿಯನ್ ಕಾಲದ ಆಭರಣಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಭಾನುವಾರ(ಅ. 19) ವರದಿಯಾಗಿದೆ.

ಇಂದು ಬೆಳಗ್ಗೆ ವಸ್ತು ಸಂಗ್ರಹಾಲಯದ ನವೀಕರಣದ ಲಾಭ ಪಡೆದ ಮೂವರು ಕಳ್ಳರು, ಸರಕು ಸಾಗಣೆ ಲಿಫ್ಟ್ ಮೂಲಕ ಅಪೊಲೊ ಗ್ಯಾಲರಿಗೆ ನುಗ್ಗಿ ಕಿಟಕಿಯನ್ನು ಒಡೆದು ನೆಪೋಲಿಯನ್ ಕಾಲದ ಹಾರ, ಬ್ರೂಚ್ ಮತ್ತು ಕಿರೀಟ ಸೇರಿದಂತೆ ಹಲವಾರು ಆಭರಣಗಳನ್ನು ಕದ್ದಿದ್ದಾರೆ.

ಕೇವಲ ಏಳು ನಿಮಿಷದಲ್ಲಿ ಈ ದರೋಡೆ ನಡೆದಿದೆ. ಇಬ್ಬರು ದರೋಡೆಕೋರರು ಒಳಗೆ ದೋಚುತ್ತಿದ್ದರೆ, ಮೂರನೆಯವರು ಹೊರಗೆ ಕಾಯುತ್ತಿದ್ದನು ಎಂದು ವರದಿಗಳು ಉಲ್ಲೇಖಿಸಿವೆ. ಇನ್ನು ಕಳ್ಳತನ ಬಯಲಿಗೆ ಬರುತ್ತಿದ್ದಂತೆ ವಸ್ತುಸಂಗ್ರಹಾಲಯವನ್ನು ಇಂದು ಭಾನುವಾರ ಬಂದ್ ಮಾಡಲಾಗಿದೆ.

ಇನ್ನು ಕಳ್ಳತನ ನಡೆದಿರುವ ಬಗ್ಗೆ ಫ್ರೆಂಚ್ ಸಂಸ್ಕೃತಿ ಸಚಿವ ರಾಚಿಡಾ ದಾಟಿ ಖಚಿತಪಡಿಸಿದ್ದು, ಇಂದು ಮ್ಯೂಸಿಯಂ ಬಂದ್ ಮಾಡಲಾಗಿದೆ. ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net