ಯಾರು ಕೇಳಿದ್ರು ನನ್ನ ವೀರ್ಯ ಕೊಡುತ್ತೇನೆ: ಎಲಾನ್​ ಮಸ್ಕ್​ ರಹಸ್ಯ ಬಿಚ್ಚಿಟ್ಟ ಮಾಜಿ ಗರ್ಲ್​ಫ್ರೆಂಡ್​! Elon Musk

Elon Musk
Published on

Elon Musk : ಜಾಗತಿಕ ಬಿಲಿಯನೇರ್ ಎಲಾನ್​ ಮಸ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ರಚಿಸಿದ ಮಧ್ಯಂತರ ಆಯೋಗದ ಅಧಿಕಾರದಿಂದ ಈ ವಾರ ಕೆಳಗಿಳಿದರು. ಸರ್ಕಾರದಲ್ಲಿನ ಅನಗತ್ಯ ದುಂದು ವೆಚ್ಚಗಳನ್ನು ಕಡಿತಗೊಳಿಸಲು ಸರ್ಕಾರಿ ದಕ್ಷತಾ ಇಲಾಖೆಯ ಮುಖ್ಯಸ್ಥನಾಗಿ ಅವರನ್ನು ನೇಮಿಸಲಾಗಿತ್ತು. ತಮ್ಮ ಕೆಲಸ ಮುಗಿದ ಹಿನ್ನೆಲೆಯಲ್ಲಿ ಅಧಿಕಾರದಿಂದ ಕೆಳಗಿಳಿದಿದ್ದಾರೆ.

ಮಸ್ಕ್​ ಅವರ ನಿರ್ಗಮನದ ಬಳಿಕ ಅವರಿಗೆ ಅದ್ಧೂರಿ ಸೆಂಡ್​ ಆಫ್​ ಕೊಡಲಾಯಿತು. ಈ ಸಮಾರಂಭದ ವೇಳೆ ಮಸ್ಕ್​ ಅವರ ಮುಖದ ಮೇಲೆ ಕಂಡ ಗಾಯದ ಗುರುತು ವಿವಾದವನ್ನು ಹುಟ್ಟುಹಾಕಿತು. ಮಸ್ಕ್ ಅತಿಯಾದ ಮಾದಕ ದ್ರವ್ಯ ಸೇವನೆಯ ವ್ಯಸನಿಯಾಗಿದ್ದಾನೆ ಎಂಬ ವರದಿಗಳು ಬಂದವು. ಆದಾಗ್ಯೂ, ತನ್ನ ಮಗ x ಜೊತೆ ಆಟವಾಡುವಾಗ ತನಗೆ ಪಂಚ್​ ಮಾಡಿದನು ಎಂದು ಮಸ್ಕ್ ವಿವರಿಸಿದರು. ಇದೇ ಸಂದರ್ಭದಲ್ಲಿ ಮಸ್ಕ್ ಜಪಾನಿನ ಪಾಪ್ ತಾರೆಯ ಮಗುವಿಗೆ ತಂದೆಯಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ನ್ಯೂಯಾರ್ಕ್ ಟೈಮ್ಸ್ ಮಸ್ಕ್​ ಅವರ ಮಾಜಿ ಗೆಳತಿ ಆಶ್ಲೇ ಸೇಂಟ್ ಕ್ಲೇರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಮಸ್ಕ್​ ಅವರು ತಮ್ಮ ವೀರ್ಯವನ್ನು ಅಗತ್ಯವಿರುವ ಯಾರಿಗಾದರೂ ನೀಡುತ್ತಿದ್ದರು. ಅದತಂತೆ ನನಗೂ ವೀರ್ಯ ನೀಡಿದರು ಎಂದು ಪಾಪ್ ತಾರೆ ಹೇಳಿಕೊಂಡಿದ್ದಾರೆ. ಅಲ್ಲದೆ, ತಾನು ಜನ್ಮ ನೀಡಿರುವ ರೊಮುಲಸ್, ಎಲಾನ್ ಮಸ್ಕ್ ಅವರ ಸ್ವಂತ ಮಗ ಎಂದಿದ್ದಾರೆ.

ಮಗುವನ್ನು ಹೊಂದಲು ಬಯಸುವ ಯಾರಿಗಾದರೂ ತನ್ನ ವೀರ್ಯವನ್ನು ನೀಡಲು ಸಿದ್ಧನಿದ್ದೇನೆ ಎಂದು ಮಸ್ಕ್​ ಹೇಳಿದರು. ಸೆಪ್ಟೆಂಬರ್‌ನಲ್ಲಿ ನನ್ನ ಗರ್ಭಧಾರಣೆಯನ್ನು ಘೋಷಿಸಿದ ನಂತರ, ಮಸ್ಕ್ ಅವರು ಸಿಗ್ನಲ್ ಮೂಲಕ ತನ್ನನ್ನು ಸಂಪರ್ಕಿಸಿ, ಮಗು ಮತ್ತು ನಮ್ಮ ಸಂಬಂಧ ಎರಡನ್ನೂ ರಹಸ್ಯವಾಗಿಡಲು ಕೇಳಿಕೊಂಡರು. ಆರಂಭದಲ್ಲಿ ಪಿತೃತ್ವವನ್ನು ನಿರಾಕರಿಸಿದ ಅವರು, ಮೌನವಾಗಿರುವುದಕ್ಕೆ 15 ಮಿಲಿಯನ್ ಡಾಲರ್​ ಅನ್ನು ಮುಂಗಡವಾಗಿ ಮತ್ತು ಮಗುವಿಗೆ 21 ವರ್ಷ ತುಂಬುವವರೆಗೆ ಮಾಸಿಕ $100,000 ನೀಡುವುದಾಗಿ ಹೇಳಿದ್ದರು ಎಂದು ಕ್ಲೇರ್​ ಹೇಳಿದ್ದಾರೆ.

ವಿವಿಧ ಸಂಬಂಧಗಳಲ್ಲಿ 14 ಮಕ್ಕಳಿಗೆ ತಂದೆಯಾಗಿರುವುದನ್ನು ಸ್ವತಃ ಮಸ್ಕ್​ ದೃಢಪಡಿಸಿದ್ದಾರೆ. ಇದರಲ್ಲಿ ಅವರ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು, ಗಾಯಕಿ ಗ್ರಿಮ್ಸ್ ಅವರೊಂದಿಗೆ ಮೂರು, ನ್ಯೂರಾಲಿಂಕ್ ಕಾರ್ಯನಿರ್ವಾಹಕಿ ಶಿವೋನ್ ಜಿಲಿಸ್ ಅವರೊಂದಿಗೆ ಮೂರು ಮತ್ತು ಈಗ ರೊಮುಲಸ್ ಸೇರಿದ್ದಾರೆ. ಆದರೆ ಸೇಂಟ್ ಕ್ಲೇರ್ ಅವರ ಹೇಳಿಕೆಗಳು ನಿಜವಾಗಿದ್ದರೆ, ಆ ಸಂಖ್ಯೆ ಇನ್ನೂ ಅಪೂರ್ಣವಾಗಿರಬಹುದು ಎನ್ನಲಾಗಿದೆ.

ಪ್ರಪಂಚ ಅಂತ್ಯವಾಗುವ ಮೊದಲು ತನ್ನ ಮಕ್ಕಳಿಂದ ಜಗತ್ತನ್ನು ತುಂಬಬೇಕೆಂದು ಮಸ್ಕ್ ಹೇಳಿದ್ದರು ಎಂದು ಆಶ್ಲೇ ಸೇಂಟ್ ಕ್ಲೇರ್ ಕಳೆದ ಏಪ್ರಿಲ್​ನಲ್ಲೇ ಬಹಿರಂಗಪಡಿಸಿದ್ದರು. ಈ ಕ್ರಮವನ್ನು ಕೈಗೊಳ್ಳಲು ಮಸ್ಕ್ ತಂಡವು ಹಣ ಮತ್ತು ಕಟ್ಟುನಿಟ್ಟಾದ ರಹಸ್ಯ ಒಪ್ಪಂದಗಳನ್ನು ಬಳಸುತ್ತಿದೆ ಎಂದು ಆಶ್ಲೇ ವಿವರಿಸಿದರು.

ಏಪ್ರಿಲ್‌ನಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ನಂತರ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಹೊಸ ಲೇಖನವೊಂದು ಬಂದಿತು. ಜಪಾನಿನ ಅಧಿಕಾರಿಗಳು ಪ್ರಮುಖ ಮಹಿಳೆಯೊಬ್ಬರಿಗೆ ವೀರ್ಯ ದಾನ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಮಸ್ಕ್ ಹೇಳಿಕೊಂಡಿದ್ದರು. ಅವರು ನನ್ನನ್ನು ಅವರ ವೀರ್ಯ ದಾನಿಯಾಗಿಸಲು ಬಯಸುತ್ತಾರೆ. ಯಾವುದೇ ಪ್ರಣಯ ಅಥವಾ ಬೇರೇನೂ ಇಲ್ಲ, ಕೇವಲ ವೀರ್ಯ ಮಾತ್ರ ಎಂದು ಸೇಂಟ್ ಕ್ಲೇರ್‌ಗೆ ಕಳುಹಿಸಿದ ಪಠ್ಯ ಸಂದೇಶವನ್ನು ಉಲ್ಲೇಖಿಸಿ ಇಂಡಿಪೆಂಡೆಂಟ್ ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net