

Zodiac Signs : ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ನಾಯಕತ್ವದ ಗುಣಗಳೊಂದಿಗೆ ಜನಿಸುತ್ತಾರೆ. ಅಂದರೆ, ಮಹಾನ್ ನಾಯಕರಾಗಲೆಂದೇ ಹುಟ್ಟುತ್ತಾರಂತೆ. ಹಾಗಾದರೆ, ಆ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ರಾಶಿಚಕ್ರದ ಮೊದಲ ಚಿಹ್ನೆಯಾದ ಮೇಷ ರಾಶಿಯವರು ಎಲ್ಲದರಲ್ಲೂ ಮೊದಲಿಗರಾಗಲು ಇಷ್ಟಪಡುತ್ತಾರೆ. ಅವರು ಸ್ವಾಭಾವಿಕವಾಗಿಯೇ ಶಕ್ತಿಯುತ ಮತ್ತು ಆತ್ಮವಿಶ್ವಾಸದ ನಾಯಕರು. ಇವರು ಯಾವುದೇ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಅಲ್ಲದೆ, ಯಾವುದೇ ಕ್ಷೇತ್ರದಲ್ಲಿ ಓರ್ವ ಉತ್ತಮ ವ್ಯಾಪಾರ ಮಾಲೀಕರು, ತಂಡದ ನಾಯಕರು ಮತ್ತು ಪ್ರವರ್ತಕರಾಗಿರುತ್ತಾರೆ. ಕೆಲವೊಮ್ಮೆ, ಮೇಷ ರಾಶಿಯವರು ತುಂಬಾ ವೇಗವಾಗಿ ಚಲಿಸಬಹುದು ಮತ್ತು ಯೋಚಿಸದೆ ವರ್ತಿಸಬಹುದ ಆದರೆ, ಅವರು ತಾಳ್ಮೆಯಿಂದಿರಲು ಮತ್ತು ಇತರರೊಂದಿಗೆ ಕೆಲಸ ಮಾಡಲು ಕಲಿತರೆ, ಇನ್ನೂ ಉತ್ತಮ ನಾಯಕರಾಗಬಹುದು.
ಸಿಂಹ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಶ್ರೇಷ್ಠ ಆಡಳಿತಗಾರರು. ಇವರು ಪ್ರೀತಿಯಿಂದ, ಸ್ನೇಹಪರತೆಯಿಂದ ಕೂಡಿರುತ್ತಾರೆ ಮತ್ತು ಇತರರಿಗೆ ಹೇಗೆ ಸ್ಫೂರ್ತಿ ನೀಡಬೇಕೆಂದು ತಿಳಿದಿರುತ್ತಾರೆ. ತಾವು ಇತರರಿಗೆ ಬಹಳ ಮುಖ್ಯವೆಂದು ಭಾವಿಸುವಂತೆ ಮಾಡುತ್ತಾರೆ. ಈ ಕಾರಣದಿಂದಾಗಿ ಜನರು ಅವರನ್ನು ಅನುಸರಿಸುತ್ತಾರೆ. ಸಿಂಹ ರಾಶಿಯವರು ಕೆಲಸದಲ್ಲಿರಲಿ, ಸಾಮಾಜಿಕ ಗುಂಪಿನಲ್ಲಿರಲಿ ಅಥವಾ ಪಾರ್ಟಿಯಲ್ಲಿರಲಿ, ಜವಾಬ್ದಾರಿಯನ್ನು ವಹಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರು ಒತ್ತಡವನ್ನು ಚೆನ್ನಾಗಿ ನಿಭಾಯಿಸುತ್ತಾರೆ ಮತ್ತು ಇತರರನ್ನು ಪ್ರೇರೇಪಿಸುತ್ತಾರೆ. ಆದರೆ, ಅವರನ್ನು ಹೊಗಳುವುದು ಕೂಡ ಅಗತ್ಯ. ಅವರನ್ನು ನಿರ್ಲಕ್ಷಿಸಲಾಗಿದೆ ಎಂದು ಭಾವಿಸಿದರೆ, ಅವರು ಅಸಮಾಧಾನಗೊಳ್ಳಬಹುದು.
ವೃಶ್ಚಿಕ ರಾಶಿಯವರು ಗಂಭೀರ ಮತ್ತು ದೃಢನಿಶ್ಚಯದವರು. ಈ ರಾಶಿಯವರು ಜನರಿಗೆ ಏನು ಮಾಡಬೇಕೆಂದು ಹೇಳುವುದಷ್ಟೇ ಅಲ್ಲ, ಅದನ್ನು ತಮ್ಮ ನಡವಳಿಕೆಯ ಮೂಲಕ ಪ್ರತಿಬಿಂಬಿಸುತ್ತಾರೆ. ಅವರು ಮಕ್ಕಳನ್ನು ಬುದ್ಧಿವಂತ ರೀತಿಯಲ್ಲಿ ಮುನ್ನಡೆಸುತ್ತಾರೆ. ಜನರನ ಮನಸ್ಸನ್ನು ಓದುವುದರಲ್ಲಿ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಅವರು ನಿಪುಣರು. ಇದು ಅವರನ್ನು ಅತ್ಯಂತ ಶಕ್ತಿಶಾಲಿ ನಾಯಕರನ್ನಾಗಿ ಮಾಡುತ್ತದೆ. ವೃಶ್ಚಿಕ ರಾಶಿಯವರು ಹೆಚ್ಚು ಮಾತನಾಡುವುದಿಲ್ಲ ಆದರೆ, ಕೆಲಸಗಳನ್ನು ಹೇಗೆ ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ನಿಗೂಢ ಮತ್ತು ಭಾವನಾತ್ಮಕರು. ಆದರೆ ಕೆಲವೊಮ್ಮೆ, ಅವರು ತುಂಬಾ ರಹಸ್ಯಗಳನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಅವರು ಇತರರನ್ನು ಹೆಚ್ಚು ನಂಬಲು ಕಲಿತರೆ, ಅವರು ಇನ್ನೂ ಬಲವಾದ ನಾಯಕರಾಗುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.