ನಿಮ್ಮ ಮೂತ್ರಪಿಂಡಗಳು ಆರೋಗ್ಯವಾಗಿದಿಯೇ ಎಂದು ಈ ಲಕ್ಷಣಗಳು ಹೇಳುತ್ತವೆ!| Health tips

untitled-design-2025-09-08t172445895-68bec40b2b92a
Published on

Health tips: ಮೂತ್ರಪಿಂಡದ ಆರೋಗ್ಯವು ನಮ್ಮ ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಮೂತ್ರವನ್ನು ಶುದ್ಧೀಕರಿಸುವ, ದೇಹದಲ್ಲಿರುವ ದ್ರವ ಸಮತೋಲನವನ್ನು ನಿಯಂತ್ರಿಸಲು ಹಾಗೂ ತ್ಯಾಜ್ಯವನ್ನು ತೆಗೆದುಹಾಕುವ ಕೆಲಸ ಮಾಡುತ್ತವೆ.

ಆದರೆ, ಮೂತ್ರಪಿಂಡದ ಕಾಯಿಲೆಯ ಲಕ್ಷಣಗಳನ್ನು ಆರಂಭದಲ್ಲಿ ಗುರುತಿಸಲು ಕಷ್ಟವಾಗುತ್ತದೆ. ಈ ಕೆಳಗಿನ ಐದು ಲಕ್ಷಣಗಳು ನಿಮ್ಮ ಮೂತ್ರಪಿಂಡ ಆರೋಗ್ಯಕರವಾಗಿದೆಯೇ ಅಥವಾ ಕೆಟ್ಟದಾಗಿದೆಯೇ ಎಂದು ಸೂಚಿಸಲು ಸಹಾಯವಾಗುತ್ತದೆ ಹಾಗಾಗಿ ಈ ಲಕ್ಷಣಗಳು ಯಾರಿಗಾದರೂ ಕಂಡುಬಂದಲ್ಲಿ ಕೂಡಲೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ.

* ಮೂತ್ರದ ಬದಲಾವಣೆ

ಆರೋಗ್ಯಕರ ಮೂತ್ರಪಿಂಡಗಳು ಸಾಮಾನ್ಯವಾಗಿ ತಿಳಿ ಹಳದಿ ಬಣ್ಣದ ಮೂತ್ರವನ್ನು ಉತ್ಪಾದಿಸುತ್ತವೆ. ಆದರೆ, ಮೂತ್ರದಲ್ಲಿ ರಕ್ತ, ಗಾಡವಾದ ಬಣ್ಣ, ಆಗ್ಗಾಗ ಕಡಿಮೆ ಮೂತ್ರ ವಿಸರ್ಜನೆ ಕಂಡುಬಂದರೆ ಅಂತವರಲ್ಲಿ ಇದು ಮೂತ್ರಪಿಂಡದ ಸಮಸ್ಯೆ ಸೂಚನೆಯಾಗಿರಬಹುದು. ಮೂತ್ರದಲ್ಲಿ ಫೀನಿನಂತಹ ಗುಳ್ಳೆಗಳು ಕಾಣಿಸಿಕೊಂಡಾಗ ಇದು ಪ್ರೋಟೀನ್​ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಿಡ್ನಿ ಕಾಯಿಲೆಯ ಲಕ್ಷಣವಾಗಿರಬಹುದು. ಆದರಿಂದ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಸೂಕ್ತ.

* ಕಾಲುಗಳು ಮತ್ತು ಕೈಗಳಲ್ಲಿ ಊತ

ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ವಿಫಲವಾದಾಗ, ನಮ್ಮ ಕಾಲುಗಳು, ಕೈಗಳು, ಮತ್ತು ಮುಖದಲ್ಲಿ ಊತ ಕಾಣಿಸಿಕೊಳ್ಳಬಹುದು. ಇದು ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾಗಿರುವ ಸಂಕೇತವಾಗಿರಬಹುದು. ನಿಮ್ಮಲ್ಲಿ ಏನಾದರೂ ಈ ರೀತಿಯಾಗಿ ಕಂಡುಬಂದರೆ, ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ.

* ತೀವ್ರ ಆಯಾಸ

ಮೂತ್ರಪಿಂಡಗಳು ಎರಿಥ್ರೋಪೊಯಿಟಿನ್ ಎಂಬ ಹಾರ್ಮೋನ್​ನನ್ನು ಉತ್ಪಾದಿಸುತ್ತವೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾದಾಗ, ರಕ್ತಹೀನತೆ ಉಂಟಾಗಿ, ಆಯಾಸ, ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತವೆ. ಆದರಿಂದ ಮೂತ್ರಪಿಂಡದ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಉತ್ತಮ.

* ಬೆನ್ನುನೋವು ಅಥವಾ ಸೊಂಟದ ನೋವು

ಮೂತ್ರಪಿಂಡಗಳು ಸೊಂಟದ ಬಳಿ ಇರುವುದರಿಂದ ಕಿಡ್ನಿ ಕಲ್ಲುಗಳು ಅಥವಾ ಸೋಂಕಿನಿಂದಾಗಿ ಸೊಂಟದ ಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳಬಹುದು. ಈ ನೋವು ಕೆಲವೊಮ್ಮೆ ಕೆಳಗಿನ ಬೆನ್ನಿಗೆ ಅಥವಾ ತೊಡೆಗೆ ಹರಡಿ ವ್ಯಕ್ತಿಯ ಸದೃಡತೆಗೆ ಅಪಾಯವನ್ನುಂಟು ಮಾಡುತ್ತದೆ. ಇದು ಮನುಷ್ಯನನ್ನು ಕುಗ್ಗಿಸಲು ಪ್ರೇರೇಪಿಸುತ್ತದೆ.

* ಹೆಚ್ಚಿನ ರಕ್ತದೊತ್ತಡ

ಮೂತ್ರಪಿಂಡಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆರೋಗ್ಯವಂತ ಮೂತ್ರಪಿಂಡಗಳು ರಕ್ತದೊತ್ತಡವನ್ನು ಸಾಮಾನ್ಯವಾಗಿಡಲು ಸಹಾಯ ಮಾಡುತ್ತವೆ. ಆದರೆ, ಮೂತ್ರಪಿಂಡದ ಕಾರ್ಯಕ್ಷಮತೆ ಕಡಿಮೆಯಾದಾಗ, ರಕ್ತದೊತ್ತಡ ಹೆಚ್ಚಾಗಬಹುದು, ಇದು ಕಿಡ್ನಿ ಕಾಯಿಲೆಯ ಎಚ್ಚರಿಕೆಯ ಸಂಕೇತವಾಗಿ ಪರಿಣಾಮ ಬೀರಬಹುದು.

ಈ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಯ ಮೂಲಕ ಮೂತ್ರಪಿಂಡದ ಆರೋಗ್ಯವನ್ನು ಖಚಿತಪಡಿಸಿಕೊಳ್ಳಬಹುದು. ಆದಷ್ಟು ಆರೋಗ್ಯಕರ ಆಹಾರ, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ವ್ಯಾಯಾಮ ಮಾಡುವುದನ್ನು ರೂಢಿ ಮಾಡಿಕೊಳ್ಳಿ. ಇದು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net