

ಮುಂಬೈ: ಭಾರತೀಯ ಚಿತ್ರರಂಗದ ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳು ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆ ಕಾಣುವ ಮುಖೇನ ಸಿನಿಪ್ರಿಯರನ್ನು ಮನರಂಜಿಸಲು ಸಿದ್ಧವಾಗಿದೆ.
ಇದನ್ನೂ ಓದಿ: ಮಧ್ಯವರ್ತಿಗಳನ್ನು ಸರ್ಕಾರಿ ಕಚೇರಿಗಳಿಂದ ದೂರವಿಡಿ
ಬಾಲಿವುಡ್ನ ಕಿಂಗ್ ಖಾನ್ ನಟನೆಯ ಆಕ್ಷನ್, ಡ್ರಾಮಾ 'ಜವಾನ್' ಮತ್ತು ಚಿತ್ರರಂಗಕ್ಕೆ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದ ಮೂಲಕ ಮತ್ತೆ ಮರಳಿರುವ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಚಿತ್ರಗಳು ಭರ್ಜರಿ ಓಪನಿಂಗ್ ಪಡೆಯಲು ಸಜ್ಜಾಗಿದೆ. ಈ ವಾರಾಂತ್ಯದಲ್ಲಿ ಯಾವ ಸ್ಟಾರ್ ನಟ-ನಟಿಯರ ಚಿತ್ರ ರಿಲೀಸ್ ಆಗಲಿದೆ ಎಂಬುದರ ಪಟ್ಟಿ ಹೀಗಿದೆ ನೋಡಿ..
ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ಸಿನಿಮಾಗಳಿವು:
ಸೆಪ್ಟೆಂಬರ್ 7: ಜವಾನ್ (ಮೂಲ ಹಿಂದಿ ಭಾಷೆ, ತಮಿಳು, ತೆಲುಗು ಡಬ್)
ಸೆಪ್ಟೆಂಬರ್ 7: ದಿ ನನ್ 2 ( ಹಾಲಿವುಡ್ ಸಿನಿಮಾ, ತೆಲುಗು, ಹಿಂದಿ, ತಮಿಳು ಡಬ್)
ಸೆಪ್ಟೆಂಬರ್ 7: ಮಿಸ್ ಶೆಟ್ಟಿ ಶ್ರೀ ಪೋಲಿಶೆಟ್ಟಿ ( ಮೂಲ ತೆಲುಗು ಭಾಷೆ, ತಮಿಳು, ಕನ್ನಡ, ಮಲಯಾಳಂ ಡಬ್)
ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ರಿಲೀಸ್ ಆಗಲಿರುವ ಚಿತ್ರಗಳಿವು:
ಸೆಪ್ಟೆಂಬರ್ 7: ಜೀ 5- ಹಡ್ಡಿ (ಹಿಂದಿ)
ಸೆಪ್ಟೆಂಬರ್ 7: ಅಮೆಜಾನ್ ಪ್ರೈಮ್ ವಿಡಿಯೋ- ಜೈಲರ್ ( ಮೂಲ ತಮಿಳು ಭಾಷೆ, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಡಬ್)
ಸೆಪ್ಟೆಂಬರ್ 8: ಆಹಾ- ಲವ್ (ತಮಿಳು)
ಸೆಪ್ಟೆಂಬರ್ 8: ಆಹಾ- ಫ್ಯಾಮಿಲಿ ಧಮಾಕಾ (ತೆಲುಗು ಗೇಮ್ ಶೋ),(ಏಜೆನ್ಸೀಸ್).