

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರು ತಮ್ಮ ಸಂಗಾತಿಗಳನ್ನು ಪ್ರೀತಿಯಲ್ಲಿ ಬೀಳಿಸುವಲ್ಲಿ ಮತ್ತು ರೊಮ್ಯಾಂಟಿಕ್ ಆಗಿ ಮಾತನಾಡುವಲ್ಲಿ ನಿಪುಣರು ಎಂದು ಹೇಳಲಾಗುತ್ತದೆ. ಹಾಗಾದರೆ, ಯಾವ ರಾಶಿಯ ಗಂಡಸರು ಪ್ರೀತಿಯ ವಿಚಾರದಲ್ಲಿ ರಾಜರು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿಯಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿಯೇ ಪ್ರೀತಿ ಮತ್ತು ವಿವಾಹದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಏಕೆಂದರೆ, ಅವರನ್ನು ಲೌಕಿಕ ಸುಖಗಳ ಅಧಿಪತಿ ಶುಕ್ರನು ಆಳುತ್ತಾನೆ. ಅವರಿಗೆ ತಮ್ಮ ಪ್ರಣಯದ ಗುಣವನ್ನು ವ್ಯಕ್ತಪಡಿಸುವುದು ಸುಲಭ. ಸಂಗಾತಿಯನ್ನು ಆಕರ್ಷಿಸುವ ತಂತ್ರಗಳಲ್ಲಿ ಅವರು ಚೆನ್ನಾಗಿ ಪರಿಣತರಾಗಿರುತ್ತಾರೆ. ಅವರು ಪ್ರೀತಿಯಲ್ಲಿ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಅವರ ಪ್ರೀತಿ ಎಷ್ಟು ತೀವ್ರವಾಗಿರುತ್ತದೆಯೆಂದರೆ ಇತರ ಮಹಿಳೆಯರು ಅಸೂಯೆಪಡುತ್ತಾರೆ. ಅವರು ತಮ್ಮ ಸಂಗಾತಿಯನ್ನು ಮೆಚ್ಚಿಸುವ ಗುರಿಯನ್ನು ಮಾತ್ರ ಹೊಂದಿರುತ್ತಾರೆ.
ತುಲಾ ರಾಶಿಯಲ್ಲಿ ಜನಿಸಿದ ಪುರುಷರು ಸಾಮರಸ್ಯ, ಶಾಂತಿ ಮತ್ತು ನ್ಯಾಯವನ್ನು ಪ್ರೀತಿಸುವವರು ಮತ್ತು ಪ್ರೀತಿಯ ಬಗ್ಗೆ ಅಪಾರ ಒಲವು ಹೊಂದಿರುತ್ತಾರೆ. ಈ ರಾಶಿಯ ಪುರುಷರು ತಮ್ಮ ಸಂಗಾತಿಗಳೊಂದಿಗೆ ಪ್ರಣಯದ ವಿಷಯಕ್ಕೆ ಬಂದಾಗ ತಮಾಷೆಯಾಗಿರುತ್ತಾರೆ. ಅವರು ತಮ್ಮ ಮೃದು ಸ್ವಭಾವದೊಂದಿಗೆ ಮುರಿದು ಬೀಳುವ ಅಂಚಿನಲ್ಲಿರುವ ಸಂಬಂಧವನ್ನು ಖಂಡಿತವಾಗಿಯೂ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಸ್ವಾಭಾವಿಕವಾಗಿಯೇ ಮಹಿಳೆಯರ ಬಗ್ಗೆ ಗೌರವ ಮತ್ತು ಮೆಚ್ಚುಗೆಯನ್ನು ಹೊಂದಿರುತ್ತಾರೆ ಮತ್ತು ತಾನು ಇಷ್ಟಪಡುವ ಹೆಣ್ಣನ್ನು ಹೂವಿನಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿರುತ್ತಾರೆ.
ಸಿಂಹ ರಾಶಿಯಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿ ರೋಮಿಯೋಗಳು. ಸೂರ್ಯನ ಆಳ್ವಿಕೆಯಲ್ಲಿ, ಅವರು ಮಹಿಳೆಯರನ್ನು ಆಯಸ್ಕಾಂತದಂತೆ ಆಕರ್ಷಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಈ ರಾಶಿಚಕ್ರದ ಪುರುಷರನ್ನು ಎಲ್ಲಾ ಮಹಿಳೆಯರು ಪ್ರೀತಿಸುತ್ತಾರೆ. ಆದರೆ, ಅವರು ತಮ್ಮ ಸಂಗಾತಿಗಾಗಿ ಏನು ಬೇಕಾದರೂ ಮಾಡುವ ಗುಣ ಹೊಂದಿರುತ್ತಾರೆ. ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಸ್ವಲ್ಪ ಸಿನಿಮೀಯ ಶೈಲಿಯಲ್ಲಿದ್ದು, ನೋಡುಗರನ್ನು ಅಚ್ಚರಿಗೊಳಿಸುತ್ತದೆ. ಈ ರಾಶಿಯ ಪುರುಷರನ್ನು ಪ್ರೇಮಿಗಳಾಗಿ ಹೊಂದಿರುವ ಮಹಿಳೆಯರು ಅದೃಷ್ಟವಂತರು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.