ನಿಮ್ಮ ಕಣ್ಣಿಗೊಂದು ಸವಾಲ್: ಈ ಚಿತ್ರದಲ್ಲಿ ಅಡಗಿ ಕುಳಿತಿರೋ ಬೆಕ್ಕನ್ನು ಗುರುತಿಸಿದ್ರೆ ನೀವೇ ಗ್ರೇಟ್​!​

Cat
Published on

ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾಲ್ಕು ದಿನಗಳ ಹಿಂದೆ ಎಡಬ್ಲ್ಯುಡಬ್ಲ್ಯು (Aww) ಸಬ್​ರೆಡ್ಡಿಟ್​ ಜಾಲತಾಣದಲ್ಲಿ ಬಳಕೆದಾರರೊಬ್ಬರು ಪಜಲ್​ ಚಿತ್ರವೊಂದನ್ನು ಪೋಸ್ಟ್​ ಮಾಡಿ, ಚಿತ್ರದಲ್ಲಿ ನನ್ನ ಬೆಕ್ಕನ್ನು ಗುರುತಿಸಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ಸವಾಲನ್ನು ಈಗಾಗಲೇ ಸಾವಿರಾರು ಮಂದಿ ಸ್ವೀಕರಿಸಿದ್ದಾರೆ ಎಂದಿದ್ದಾರೆ.

ಅಂದುಕೊಂಡ ಹಾಗೆ ಚಿತ್ರದಲ್ಲಿ ಮನೆಯೊಳಗೆ ಇರುವ ಬೆಕ್ಕನ್ನು ಹುಡುಕುವುದು ಸುಲಭವೇನಲ್ಲ. ಸೂಕ್ಷ್ಮವಾಗಿ ಹುಡುಕಾಡಿದರು ಕೆಲವೊಮ್ಮೆ ಗೊಂದಲು ಆಗುವ ಸಾಧ್ಯತೆಯು ಇದೆ. ಆದರೆ, ಪಟ್ಟುಬಿಡದೆ ಸೂಕ್ಷ್ಮಾತಿಸೂಕ್ಷ್ಮವಾಗಿ ನೋಡಿದಾಗ ಬೆಕ್ಕನ್ನು ಪತ್ತೆಹಚ್ಚಬಹುದು. ಬೇಕಿದ್ದರೆ ಒಮ್ಮೆ ನೀವೇ ಕಣ್ಣಾಡಿಸಿ, ಬೆಕ್ಕು ಪತ್ತೆಯಾದರೆ ನೀವು ಸವಾಲಿನಲ್ಲಿ ಗೆದ್ದಂತೆ. ಪತ್ತೆಯಾಗಲಿಲ್ಲವೆಂದರೆ ಉತ್ತರವೂ ನಿಮ್ಮ ಕಣ್ಣ ಮುಂದಿದೆಯೇ ಇದೆ.

ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದಾಗಿನಿಂದ ಈವರೆಗೈ 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದಾರೆ. 700ಕ್ಕೂ ಹೆಚ್ಚು ಕಾಮೆಂಟ್​ಗಳು ಹರಿದುಬಂದಿವೆ. ನಮ್ಮ ಕೈಯಲ್ಲಿ ಕಂಡುಹಿಡಿಯಲು ಸಾಧ್ಯವಾಗಲೇ ಇಲ್ಲ ಎಂದು ಅನೇಕರು ತಮ್ಮ ಪ್ರಯತ್ನವನ್ನು ಕೈಚೆಲ್ಲಿದ್ದಾಗಿ ಒಪ್ಪಿಕೊಂಡಿದ್ದಾರೆ. ದೀರ್ಘ ಸಮಯದ ಬಳಿಕ ನಾನು ಬೆಕ್ಕನ್ನು ಪತ್ತೆಹಚ್ಚಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net