ಅವರ ಬೋಧನೆಗಳು ನಮಗೆ ಸ್ಫೂರ್ತಿ; ಬುದ್ಧ ಪೂರ್ಣಿಮೆಗೆ ಮೋದಿ, ದ್ರೌಪದಿ ಮುರ್ಮು ಶುಭಾಶಯ | Budda poornima

blank

ನವದೆಹಲಿ: ಬುದ್ಧನ ಜನ್ಮ ದಿನಾಚರಣೆಯಾದ ಈ ದಿನವನ್ನು (12) ಬುದ್ಧ ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಇನ್ನೂ ಈ ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದು, ಸತ್ಯ, ಸಮಾನತೆ ಮತ್ತು ಸಾಮರಸ್ಯದ ಮೇಲೆ ನಿರ್ಮಿಸಲಾದ ಅವರ ಸಂದೇಶವು ಮಾನವೀಯತೆಗೆ ಮಾರ್ಗದರ್ಶಿಯಾಗಿದೆ, ಭಗವಾನ್ ಬುದ್ಧನ ಜೀವನವು ವಿಶ್ವ ಸಮುದಾಯವನ್ನು “ಕರುಣೆ ಮತ್ತು ಶಾಂತಿ”ಯ ಕಡೆಗೆ ಯಾವಾಗಲೂ ಪ್ರೇರೇಪಿಸುತ್ತದೆ ಎಂದು ಹೇಳಿದ್ದಾರೆ.

blank

ಇದನ್ನೂ ಓದಿ : ತಂದೆ ನನ್ನನ್ನು ವೇ*ಶ್ಯೆ ಎಂದು ಕರೆಯುತ್ತಿದ್ದರು! ಬಾಲ್ಯದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ Shiny Doshi

ಪ್ರಧಾನಿ ಮೋದಿ ಹೇಳಿದ್ದೇನು?

ಬುದ್ಧ ಪೂರ್ಣಿಮೆಯಂದು ದೇಶದ ಎಲ್ಲಾ ಜನರಿಗೆ ಶುಭಾಶಯಗಳು. ಸತ್ಯ, ಸಮಾನತೆ ಮತ್ತು ಸಾಮರಸ್ಯದ ತತ್ವಗಳನ್ನು ಆಧರಿಸಿದ ಭಗವಾನ್ ಬುದ್ಧನ ಸಂದೇಶಗಳು ಮಾನವೀಯತೆಗೆ ಮಾರ್ಗದರ್ಶಿಯಾಗಿವೆ. ತ್ಯಾಗ ಮತ್ತು ತಪಸ್ಸಿಗೆ ಮೀಸಲಾದ ಅವರ ಜೀವನವು ಯಾವಾಗಲೂ ವಿಶ್ವ ಸಮುದಾಯವನ್ನು ಸಹಾನುಭೂತಿ ಮತ್ತು ಶಾಂತಿಯ ಕಡೆಗೆ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ X ನಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದೇನು?

ಬುದ್ಧ ಪೂರ್ಣಿಮೆಯ ಶುಭ ಸಂದರ್ಭದಲ್ಲಿ, ಪ್ರಪಂಚದಾದ್ಯಂತದ ಎಲ್ಲಾ ನಾಗರಿಕರಿಗೆ ಮತ್ತು ಭಗವಾನ್ ಬುದ್ಧನ ಅನುಯಾಯಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಕರುಣೆಯ ಸಾಕಾರ ರೂಪವಾದ ಭಗವಾನ್ ಬುದ್ಧ ನೀಡಿದ ಅಹಿಂಸೆ, ಪ್ರೀತಿ ಮತ್ತು ದಯೆಯ ಅಮರ ಸಂದೇಶವು ಮನುಕುಲದ ಕಲ್ಯಾಣಕ್ಕೆ ಮೂಲ ಮಂತ್ರವಾಗಿದೆ. ಅವರ ಆದರ್ಶಗಳು ಸಮಾನತೆ, ಸಾಮರಸ್ಯ ಮತ್ತು ಸಾಮಾಜಿಕ ನ್ಯಾಯದ ಶಾಶ್ವತ ಮೌಲ್ಯಗಳಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ಅವರ ಬೋಧನೆಗಳು ನೈತಿಕತೆಯ ಆಧಾರದ ಮೇಲೆ ಜೀವನವನ್ನು ನಡೆಸಲು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಹೇಳಿದ್ದಾರೆ.

(ಏಜೆನ್ಸೀಸ್)

ಭಾರತೀಯ ಯೋಧರ ಕುಟುಂಬಕ್ಕೆ ಆಸ್ತಿ ತೆರಿಗೆ ವಿನಾಯಿತಿ: ಪವನ್ ಕಲ್ಯಾಣ್ ಘೋಷಣೆ | Property Tax Exemption

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank