2 ವರ್ಷ ಪ್ರೀತಿಸಿ, ರಿಜಿಸ್ಟ್ರಾರ್​ ಮದುವೆ ಮಾಡಿಕೊಳ್ಳಲು ಬರುತ್ತಿರುವಾಗ ದಾರಿ ಮಧ್ಯೆಯೇ ಯುವಕ ಎಸ್ಕೇಪ್​! ಪೊಲೀಸರ ಮೊರೆ ಹೋದ ಯುವತಿ

CHN Escape
Published on

ಚಾಮರಾಜನಗರ: ಎರಡು ವರ್ಷ ಪ್ರೀತಿಸಿ ನಾಟಕವಾಡಿ, ಕೊನೆಗೂ ಮದುವೆಯಾಗುವುದಾಗಿ ಹೇಳಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೋಣನಕೆರೆಯ ವಸಂತ (20) ಮೋಸ ಹೋದ ಯುವತಿ. ಬುಡಕಟ್ಟು ಸೋಲಿಗ ಸಮುದಾಯದವಳಾದ ಈಕೆ ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ.ಮದುವೆಯಾಗು ಎಂದು ಹೇಳಿದ್ದಕ್ಕೆ ನಿರಾಕರಿಸಿದ್ದಾನೆ.

ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿಯೂ ಒಪ್ಪಿಕೊಂಡಿದ್ದ. ಇನ್ನೇನು ಮದುವೆ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಎಸ್ಕೇಪ್​ ಆಗಿಬಿಟ್ಟಿದ್ದಾನೆ. ಸದ್ಯ ಮೋಸ ಹೋದ ಯುವತಿ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net